ಮತ್ತೊಂದು ಡಬಲ್‌ ಡೆಕ್ಕರ್‌ ಫ್ಲೈಓವರ್‌ ಉದ್ಘಾಟನೆ, ವಿವರ

Arun Kumar
0

ಮುಂಬೈ, ಆಗಸ್ಟ್ 30: ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈಒವರ್ ಬೆಂಗಳೂರಿನಲ್ಲಿ ಇತ್ತೀಚೆಗೆ ಉದ್ಘಾಟನೆಯಾಗಿತ್ತು. ಈಗ ಮತ್ತೊಂದು ಡಬಲ್ ಡೆಕ್ಕರ್ ಫ್ಲೈಓವರ್ ಉದ್ಘಾಟನೆಯಾಗಿದೆ. ಆದರೆ ಇದು ಬೆಂಗಳೂರಿನಲ್ಲಿ ಅಲ್ಲ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ (ಎಂಎಂಆರ್) ಮೆಟ್ರೋ ವೈಡಕ್ಟ್ನೊಂದಿಗೆ ಮೊದಲ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು ಇತ್ತೀಚೆಗೆ ಉದ್ಘಾಟಿಸಿದ್ದಾರೆ. 1 ಕಿಲೋಮೀಟರ್ ಉದ್ದದ ಮೇಲ್ಸೇತುವೆಯು ಥಾಣೆ ಜಿಲ್ಲೆಯ ಮೀರಾ ಭಯಂದರ್ನಲ್ಲಿ ಮೆಟ್ರೋ ಲೈನ್-9 ಗಾಗಿ ಮೆಟ್ರೋ ವೈಡಕ್ಟ್ ಮತ್ತು ರಸ್ತೆ ಮೇಲ್ಸೇತುವೆಯನ್ನು ಸಂಯೋಜಿಸುತ್ತದೆ.

ಈ ಮೇಲ್ಸೇತುವೆಯು ಮೀರಾ ರಸ್ತೆಯ ಪ್ರಮುಖ ಛೇದಕಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಸಂಚಾರದ ಹರಿವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮೆಟ್ರೋ ಲೈನ್ 9 ಅಂಧೇರಿಯಿಂದ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತು ದಹಿಸರ್ ನಿಂದ ಮೀರಾ ರೋಡ್ಗೆ ರೆಡ್ ಲೈನ್ನ ವಿಸ್ತರಣೆಯಾಗಿದೆ ಎಂದು ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)