Mumbai-Hubballi Flight Service: ಹುಬ್ಬಳ್ಳಿ-ಮುಂಬೈ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ

Arun Kumar
0

ಹುಬ್ಬಳ್ಳಿ, ಜೂನ್ 19: ಬಹುಬೇಡಿಕೆ ಇರುವ ಮುಂಬೈ ಹಾಗೂ ಹುಬ್ಬಳ್ಳಿ ಮಹಾನಗರಗಳ ಮಧ್ಯ ಶೀಘ್ರವೇ ವಿಮಾನ ಸೇವೆ ಆರಂಭವಾಗಲಿದೆ. ಈ ಕುರಿತು ಕೇಂದ್ರ ಸಚಿವರು ಮಾಡಿದ್ದ ಮನವಿಗೆ ಸ್ಪಂದಿಸಿರುವ ವಿಮಾನಯಾನ ಸಂಸ್ಥೆ ಸಕಾರಾತ್ಮಕವಾಗಿ ಸ್ಪಂದಿಸಿದೆ.

ದೇಶದ ವಾಣಿಜ್ಯ ನಗರಿ ಮುಂಬೈ ಕರ್ನಾಟಕ ವಾಣಿಜ್ಯ ನಗರಿ ಹುಬ್ಬಳ್ಳಿ ನಡುವೆ ಇಂಡಿಗೋ (Indigo 6e) ವಿಮಾನಯಾನ ಸೇವೆ ಪುನಾರಂಭಗೊಳ್ಳಲಿದೆ. ಮುಂದಿನ ತಿಂಗಳ ಜುಲೈ 15ರಿಂದ ಈ ಎರಡು ಮಹಾನಗರಗಳ ಪ್ರಯಾಣಿಕರು ಇಂಡಿಗೋ ವಿಮಾನದಲ್ಲಿ ಸಂಚರಿಸಬಹುದಾಗಿದೆ.

ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿ ಮೇರೆಗೆ ಇಂಡಿಗೋ 6 ಇ ವಿಮಾನ ಸಂಚಾರವನ್ನು ಮತ್ತೆ ಶುರು ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ.

IndiGo6E ನ ನಿರ್ವಹಣೆಗೆ ಸಚಿವ ಜೋಶಿ ಅವರು ಈ ಹಿಂದೆ ನಾಗರಿಕ ವಿಮಾನಯಾನ ಸಚಿವಾಲಯದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸಚಿವಾಲಯ ಇದೀಗ ವಿಮಾನ ಸಂಚಾರ ಪುನರಾರಂಭಕ್ಕೆ ಕ್ರಮ ಕೈಗೊಂಡಿದೆ.

ಮುಂಬೈ-ಹುಬ್ಬಳ್ಳಿ- ಮುಂಬೈ (Mumbai-Hubballi-Mumbai flight service) ನಡುವೆ ಜುಲೈ 15ರಿಂದ ದೈನಂದಿನ ವಿಮಾನಗಳು ನಿರಂತರವಾಗಿ ಕಾರ್ಯ ನಿರ್ವಹಿಸಲಿವೆ. ಇದರ ವೇಳಾಪಟ್ಟಿ ಸಹ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲದ್ ಜೋಶಿ ಟ್ವಿಟ್ಟರ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿ-ಮುಂಬೈ ವಿಮಾನಯಾನದ ವೇಳಾಪಟ್ಟಿ
ಸೇವೆ ಆರಂಭವಾದ ನಂತರ ಇಂಡಿಗೋ ವಿಮಾನವು ಮುಂಬೈನಿಂದ ಮಧ್ಯಾಹ್ನ 3 ಗಂಟೆಗೆ ಹೊರಟರೆ ಸಂಜೆ 4.10ಗಂಟೆಗೆ ಸರಿಯಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರಲಿದೆ. ಸಂಜೆ 4.40ಕ್ಕೆ ಹುಬ್ಬಳ್ಳಿಯಿಂದ ಹೊರಡುವ ಇಂಡಿಗೋ ವಿಮಾನವು ಸಂಜೆ 5.50ಕ್ಕೆ ಮುಂಬೈ ವಿಮಾನ ನಿಲ್ದಾಣ ತಲುಪಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ಕೊಟ್ಟಿದೆ.

ತಮ್ಮ ಪ್ರಸ್ತಾವನೆ ಪುರಸ್ಕರಿಸಿ ಇಂಡಿಗೋ ವಿಮಾನ ಸಂಚಾರ ಪುನರಾರಂಭ ವ್ಯವಸ್ಥೆ ಕಲ್ಪಿಸಿದ ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಚಿವ ಪ್ರಹ್ಲಾದ್ ಜೋಶಿ ಅವರು ಧನ್ಯವಾದ ತಿಳಿಸಿದ್ದಾರೆ.

ಮುಂಬೈ ಹಾಗೂ ಹುಬ್ಬಳ್ಳಿ ಮಧ್ಯೆ ವಿಮಾನ ಸಂಪರ್ಕಕ್ಕೆ ಭಾರೀ ಬೇಡಿಕೆ ಇದೆ. ನಿತ್ಯ ನೂರಾರು ಪ್ರಮಾಣಿಕರು ಈ ಎರಡು ಮಹಾನಗರಗಳ ಮಧ್ಯೆ ಸಂಚರಿಸುತ್ತಾರೆ. ಇದೀಗ ವಿಮಾನ ಸೇವೆ ಪುನಾರಂಭದ ಬಗ್ಗೆ ಇಂಡಿಯೋ ಸಹ ಖಚಿತಪಡಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)