ಕಲ್ಕಿ 2898 ಎಡಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಸಕತ್ ದಾಖಲೆ ಬರೆಯುತ್ತಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ಚಿತ್ರವು ವಿಶ್ವಾದ್ಯಂತ 500 ಕೋಟಿ ರೂಪಾಯಿಗಳನ್ನು ಗಳಿಸುವತ್ತ ಮುನ್ನುಗ್ಗುತ್ತಿದೆ.
ಸಿನಿಮಾಗೆ ಉತ್ತಮ ವಿಮರ್ಶೆ, ಪ್ರೇಕ್ಷಕರಿಂದ ಸಿಕ್ಕಾಪಟ್ಟೆ ಪ್ರೀತಿ ಸಿಗುತ್ತಿದ್ದು, ಥಿಯೇಟರ್ ಹೌಸ್ ಫುಲ್ ಆಗುತ್ತಿದೆ. ಟಿಕೆಟ್ ದರ ಹೆಚ್ಚಾಗಿದ್ದರೂ ಕೂಡ ಜನ ಸಿನಿಮಾವನ್ನು ನೋಡುತ್ತಿದ್ದಾರೆ. ಮೊದಲ ದಿನವೇ ಇನ್ನೂರು ಕೋಟಿ ಸಮೀಪಿಸಿದ್ದ 'ಕಲ್ಕಿ 2898 AD' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.
ಮೂರು ದಿನಕ್ಕೆ 'ಕಲ್ಕಿ 2898 AD' ಗಳಿಸಿದ್ದೇಷ್ಟು?
ಮೊದಲ ದಿನ ನಾಗ್ ಅಶ್ವಿನ್ ಅವರ ವೈಜ್ಞಾನಿಕ ಚಲನಚಿತ್ರ ಎಲ್ಲಾ ಭಾಷೆಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ 'ಕಲ್ಕಿ 2898 AD' 191.5 ಕೋಟಿ ರೂಪಾಯಿ ಗಳಿಸಿತ್ತು. 2 ನೇ ದಿನದಂದು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಓಟ ಕಂಡು ಚಿತ್ರವು ಪ್ರಪಂಚದಾದ್ಯಂತ ಎಲ್ಲಾ ಭಾಷೆಗಳಲ್ಲಿ 298.5 ಕೋಟಿ ಗಳಿಸಿ ದಾಖಲೆ ಬರೆದಿತ್ತು.
ಭಾರತದಲ್ಲಿ ಮೂರನೇ ದಿನಕ್ಕೆ 64.50 ಕೋಟಿ ಗಳಿಸಿದೆ. ಜಾಗತಿಕವಾಗಿ 415 ಕೋಟಿ ದಾಟಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಪ್ರೊಡಕ್ಷನ್ ಬ್ಯಾನರ್ ವೈಜಯಂತಿ ಮೂವೀಸ್ ಭಾನುವಾರ ಮೂರು ದಿನಗಳ ನಂತರ ಚಿತ್ರದ ಒಟ್ಟು ಕಲೆಕ್ಷನ್ ಅನ್ನು ಹಂಚಿಕೊಂಡಿದೆ. ' ವಿಶ್ವದಾದ್ಯಂತ ಮೂರು ದಿನಗಳಲ್ಲಿ 415 ಕೋಟಿ ರೂಪಾಯಿ ಜಿಬಿಒಸಿ (ಗ್ರಾಸ್ ಬಾಕ್ಸ್ ಆಫೀಸ್ ಕಲೆಕ್ಷನ್) ' ಎಂದು ಬರೆದಿರುವ ಪ್ರಭಾಸ್ ಅವರ ಪೋಸ್ಟರ್ ಅನ್ನು ನಿರ್ಮಾಪಕರು ಹಂಚಿಕೊಂಡಿದ್ದಾರೆ. ಇದಕ್ಕೆ 'The force is unstoppable...' ಎಂದು ಶೀರ್ಷಿಕೆ ನೀಡಿದ್ದಾರೆ.
ಕಲ್ಕಿ 2898 AD' ಭಾರತದಲ್ಲಿ 57.60 ಕೋಟಿ ಮತ್ತು ಜಾಗತಿಕವಾಗಿ ರೂ 298 ಕೋಟಿಯನ್ನು 2 ನೇ ದಿನದಂದು ಸಂಗ್ರಹಿಸಿದೆ. 3 ನೇ ದಿನದಂದು, ಚಿತ್ರವು ಭಾರತದಲ್ಲಿ ರೂ 200 ಕೋಟಿ ದಾಟಿದೆ. Sacnilk ವರದಿಯ ಪ್ರಕಾರ, ಮೂರು ದಿನಗಳ ಒಟ್ಟು ಮೊತ್ತವು 217 ಕೋಟಿ ರೂಪಾಯಿ. ಮೊದಲ ಶನಿವಾರದಂದು ಜಾಗತಿಕವಾಗಿ 415 ಕೋಟಿ ಗಳಿಸಿದೆ. ಆದರೂ, ಚಿತ್ರವು ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಸಕತ್ ಕಮಾಲ್ ಮಾಡುತ್ತಿದ್ದು, 1000 ಕೋಟಿ ಕ್ಲಬ್ ಸೇರುವ ಸಾಧ್ಯತೆಯಿದೆ. ಆದಷ್ಟು ಬೇಗ ಶಕ್ತಿಯಾಗಿದೆ. ಮೊದಲ ಶನಿವಾರದಂದು ಜಾಗತಿಕವಾಗಿ 415 ಕೋಟಿ ಗಳಿಸಿದೆ.
ಕಲ್ಕಿ ಚಿತ್ರದ ತೆಲುಗು ಆವೃತ್ತಿಯು ಜೂನ್ 29, ಶನಿವಾರದಂದು ಭಾರತದಲ್ಲಿ ಶೇಕಡಾ 74.24 ರಷ್ಟು ಆಕ್ಯುಪೆನ್ಸಿಯನ್ನು ಕಂಡಿದೆ. ಮೊದಲ ವಾರಾಂತ್ಯದಲ್ಲಿ ಚಿತ್ರ 500 ಕೋಟಿ ದಾಟುವ ನಿರೀಕ್ಷೆ ಇದೆ. ವೈಜಯಂತಿ ಮೂವೀಸ್ನಿಂದ 600 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಿಸಲಾದ 'ಕಲ್ಕಿ 2898 AD' ಭಾರತದ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗಿದೆ.
'ಕಲ್ಕಿ 2898 AD'ಗೆ ಸಂತೋಷ್ ನಾರಾಯಣನ್ ಅವರ ಸಂಗೀತ ಸಂಯೋಜನೆಯಿದೆ. ಡಿಜೋರ್ಡ್ಜೆ ಸ್ಟೋಜಿಲ್ಕೋವಿಕ್ ಅವರ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿದೆ. ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಕಮಲ್ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ನಟಿ ದಿಶಾ ಪಟಾನಿ ಕೂಡ ಚಿತ್ರದ ಭಾಗವಾಗಿದ್ದಾರೆ. ನಟರಾದ ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್, ಎಸ್ ಎಸ್ ರಾಜಮೌಳಿ, ರಾಮ್ ಗೋಪಾಲ್ ವರ್ಮಾ ಅತಿಥಿ ಪಾತ್ರದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಪಶುಪತಿ, ಶೋಬನಾ, ಅನ್ನಾ ಬೆನ್ ಮತ್ತು ಇತರರು ಸಹ ಚಿತ್ರದ ಭಾಗವಾಗಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.