Darshan Case ; ನಿಜವಾಯ್ತು ದರ್ಶನ್ ಬಗ್ಗೆ ಈ ಸ್ವಾಮೀಜಿ ನುಡಿದಿದ್ದ ಸ್ಫೋಟಕ ಭವಿಷ್ಯ...!

Arun Kumar
0

ಅಗ್ನಿ ಉರಿದರೆ ತಾನೇ ಶಾಖ ಉತ್ಪತ್ತಿ ಆಗುವುದು. ಹಾಗೆಯೇ ಕೋಪವೂ ! ಕೋಪ ಮೊದಲು ಕೋಪಗೊಂಡವರನ್ನು ದಹಿಸಿ, ನಂತರ ಬೇರೆಯವರಿಗೆ ಅದರ ಬಿಸಿಯನ್ನು ತಾಕಿಸುತ್ತದೆ. ಹೀಗಾಗಿಯೇ ಕೋಪವನ್ನು ಗೆದ್ದವನು.. ಬದುಕನ್ನ ಗೆದ್ದಂತೆ ಎಂಬ ಮಾತನ್ನ ದೊಡ್ಡವರು ಹೇಳ್ತಾನೇ ಬಂದಿದ್ದಾರೆ. ಆದರೆ ದರ್ಶನ್ ಗೆ ಈ ಮಾತು ಅರ್ಥವಾಗಲೇ ಇಲ್ಲ. ಹಿಡಿತವಿಲ್ಲದ ಕೋಪದಿಂದ ನಖ-ಶಖಾ ಉರಿದು ತನ್ನ ಶಕ್ತಿ -ಸಾಮರ್ಥ್ಯವನ್ನ ಕಾಲ..ಕಾಲಕ್ಕೆ.. ಪ್ರದರ್ಶನ ಮಾಡಿದ್ದರಿಂದಲೇ ದರ್ಶನ್ ಹಿಂದೆಯೂ ಜೈಲು ಪಾಲಾದ. ಇವತ್ತು ಸಂಕಷ್ಟಕ್ಕೆ ಸಿಲುಕಿದ.

ಕೋಪ ಮಾತ್ರವಲ್ಲದೇ ತನ್ನ ಮನೆ ತುಂಬ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನ ಸಾಕಿಕೊಂಡು ತನ್ನ ಕಾಲ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡ ದರ್ಶನ್ ಇಮೇಜ್ ಸದ್ಯಕ್ಕೆ ಸರಿಪಡಿಸಲಾಗದಷ್ಟು ಡ್ಯಾಮೇಜ್ ಆಗಿದೆ. ನಿಜಾ.. ಮಿಂಚಿ ಹೋದ ಕಾಲಕ್ಕೆ ಈಗ ಚಿಂತಿಸಿ ಫಲವಿಲ್ಲವಾದರೂ, ಸಜ್ಜನರ ಮಾತನ್ನ ದರ್ಶನ್ ಚೂರೇ ಚೂರು ಕೇಳಿದ್ದರೂ ಕೂಡ ಇವತ್ತು ಈ ದಯನೀಯ ಪರಿಸ್ಥಿತಿಯಲ್ಲಿ ಖಂಡಿತ ಇರುತ್ತಿರಲಿಲ್ಲ. ಇದಕ್ಕೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದ ಭವಿಷ್ಯವೇ ಸಾಕ್ಷಿ.

ಹೌದು, ನಿಮಗೆ ಗೊತ್ತಿರಲಿ.. ಹೆಚ್ಚೇನ್ ಇಲ್ಲ. ಈಗ್ಗೆ 02-03 ತಿಂಗ್ಳ ಹಿಂದೆ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ದರ್ಶನ್ ಕುರಿತು ಭವಿಷ್ಯವನ್ನ ಹೇಳಿದ್ದರು. ಕ್ರೋಧಿ ನಾಮ ಸಂವತ್ಸರದ ವಿಶೇಷತೆ ಹಾಗೂ ಸಂವತ್ಸರದ ಫಲಗಳ ಬಗ್ಗೆ ಮಾತನಾಡುತ್ತಾ ದರ್ಶನ್ ಅವರಿಗೆ ಹೆಚ್ಚು ಅನಾಹುತಗಳು ಕಾದಿವೆ ಎಂದು ಹೇಳಿದ್ದರು.

ಕನ್ನಡ ಚಿತ್ರರಂಗದ ಖ್ಯಾತ ನಟರಾದ ದರ್ಶನ್ ತೂಗುದೀಪ ಅವರು ಬಹಳ ಕಷ್ಟದಿಂದ ಮೇಲೆ ಬಂದಿದ್ದಾರೆ. ಅವರ ಪ್ರತಿಭೆ, ಅವರು ಪಡೆದಿರುವ ಪ್ರಖ್ಯಾತಿ ಹಾಗೂ ಅವರು ಸಂಪಾಧಿಸಿರುವ ಅಭಿಮಾನಿ ಬಳಗ ನಮ್ಮೆಲ್ಲರಿಗೂ ಸಂತೋಷದಾಯಕವಾದ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಮನದುಂಬಿ ಶ್ಲಾಘಿಸಿದ್ದ ಶ್ರೀಗಳು, ಈ ವರ್ಷ ದರ್ಶನ್ ಅವರಿಗೆ ಅನೇಕ ರೀತಿಯಿಂದ ಶತ್ರುಗಳ ತೊಂದರೆ ಉಂಟಾಗಲಿದೆ ಎಂದಿದ್ದರು.

ಇನ್ನೂ ದರ್ಶನ್ ಅವರಿಗೆ ಅನಾರೋಗ್ಯ ಬಾಧೆ ಕಾಡಲಿದೆ ಎಂದು ಹೇಳಿದ್ದರು. ಅನೇಕ ರೀತಿಯ ದುಷ್ಕೃತ್ಯಗಳ ಪ್ರಯೋಗದಿಂದ ದರ್ಶನ್ ಅವರ ನೆಮ್ಮದಿ ಹಾಳಾಗುತ್ತೆ, ಮಾನ ಮೂರು ಕಾಸಿಗೆ ಹರಾಜು ಆಗುತ್ತೆ ಎಂದು ಕೂಡ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆಯ ಸಂದೇಶವನ್ನ ದರ್ಶನ್ಗೆ ಕೊಟ್ಟಿದ್ದರು.

ಆದರೆ ತನ್ನ ಒಳಿತು ಬಯಸುವ ತನ್ನ ಸುತ್ತಲಿನ ಜನರನ್ನೇ ನಂಬದ, ಅವರ ಮಾತನ್ನೇ ಕೇಳದ ದರ್ಶನ್ ಕೊನೆ ಪಕ್ಷ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಹೇಳಿದ್ದ ಈ ಮಾತುಗಳನ್ನಾದರೂ ಗಂಭೀರವಾಗಿ ಪರಿಗಣಿಸಬೇಕಿತ್ತು. ಅಳೆದು ತೂಗಿ ಹೆಜ್ಜೆಯನ್ನ ಇಡಬೇಕಿತ್ತು. ಆದರೆ ಅಂಹಕಾರದ ಅಮಲೇರಿಸಿಕೊಂಡವರಿಗೆ ಸದ್ಗುಣ ಸಂಪನ್ನ ವ್ಯಕ್ತಿಯೂ ಬೇಕಿರಲ್ಲ. ದೊಡ್ಡವರ ಮಾತು ಕೇಳಿಸುವುದೂ ಇಲ್ಲ. ದರ್ಶನ್ ವಿಚಾರದಲ್ಲಿ ಅಕ್ಷರಶಃ ಆಗಿದ್ದು ಇದೇ.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)