Sapthami Gowda: ಇತ್ತೀಚೆಗಷ್ಟೇ ಯುವರಾಜ್ಕುಮಾರ್ ಹಾಗೂ ಪತ್ನಿ ಶ್ರೀದೇವಿ ಡೈವರ್ಸ್ ವಿಚಾರ ಮುನ್ನೆಲೆಗೆ ಬಂದಿದ್ದು, ಇದರ ನಡುವೆಯೇ ಯುವ ರಾಜ್ಕುಮಾರ್ಗೆ ಸ್ಯಾಂಡಲ್ವುಡ್ ನಟಿಯೊಬ್ಬಳ ಜೊತೆ ಸಂಬಂಧ ಇತ್ತು ಎಂದು ಪತ್ನಿ ಶ್ರೀದೇವಿ ಆರೋಪಿಸಿದ್ದರು ಸುದ್ದಿಯಾಗಿತ್ತು. ಇನ್ನು ಈ ಸಂಬಂಧ ನಟಿ ಸಪ್ತಮಿಗೌಡ ಅವರು ಇಂದು (ಜೂನ್ 15) ಕೋರ್ಟ್ ಮೆಟ್ಟಿಲೇರಿದ್ದರು. ಹಾಗಾದರೆ ಕೋರ್ಟ್ ನೀಡಿದ ಆದೇಶ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇನ್ನು ಈ ಬಗ್ಗೆ ನಟಿ ಸಪ್ತಮಿಗೌಡ ಕೂಡ ಶ್ರೀದೇವಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಯುವರಾಜ್ಕುಮಾರ್ ಜೊತೆ ತನ್ನ ಹೆಸರು ಬಂದಿದೆ. ಆದ್ದರಿಂದ ಮಾನ ಹಾನಿ ಮಾಡದಂತೆ ಯುವ ಪತ್ನಿ ಶ್ರೀದೇವಿ ವಿರುದ್ಧ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ನಟಿ ಸಪ್ತಮಿಗೌಡ ಸಲ್ಲಿಸಿದ್ದ ಅರ್ಜಿ ಸಂಬಂದ ಕೋರ್ಟ್ ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿಗೂ ಕೂಡ ನೋಟಿಸ್ ಜಾರಿ ಮಾಡಿದ್ದು, ಮಾನಹಾನಿಕರ ನೀಡಬಾರದು ಎಂದು ನಿರ್ಬಂಧಾಜ್ಞೆಯನ್ನು ಹೊರಡಿಸಿದೆ. ನಟಿ ಸಪ್ತಮಿಗೌಡ ಅವರು ಶ್ರೀದೇವಿ ಭೈರಪ್ಪ ಅವರ ವಿರುದ್ಧ ದಾವೆ ಹೂಡಿದ್ದು, ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಚಾರಿತ್ರ್ಯವಧೆ ಮಾಡುವ ಕೆಲಸ ಆಗುತ್ತಿದೆ. ಯುವ ಹೆಸರಲ್ಲಿ ತನ್ನ ಹೆಸರನ್ನು ಸೇರಿಸಲಾಗುತ್ತಿದೆ ಎಂದು ಸಪ್ತಮಿಗೌಡ ಅವರ ಆರೋಪವಾಗಿದೆ.
ಸ್ಯಾಂಡಲ್ವುಡ್ನ ದೊಡ್ಮನೆಯ ಮೊಮ್ಮಗ ಯುವ ರಾಜ್ಕುಮಾರ್ ಬಾಳಲ್ಲಿ ಬಿರುಗಾಳಿ ಎದ್ದಿದೆ. ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಶ್ರೀದೇವಿ ಹಾಗೂ ಯುವರಾಜ್ಕುಮಾರ್ ಡಿವೋರ್ಸ್ ಕೊಡುವುದಕ್ಕೆ ನಿರ್ಧರಿಸಿದ್ದಾರೆ ಎನ್ನುವ ಮಾಜಹಿತಿ ಲಭ್ಯವಾಗಿತ್ತು.
ಈಗಾಗಲೇ ಯುವ ರಾಜ್ಕುಮಾರ್ ಪತ್ನಿಗೆ ನೋಟಿಸ್ ನೀಡಿದ್ದು, ಅದಕ್ಕೆ ಶ್ರೀದೇವಿ ಕೂಡ ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ. 10 ಪುಟಗಳ ಸುದೀರ್ಘ ಪತ್ರದ ಮೂಲಕ ಶ್ರೀದೇವಿ ಉತ್ತರಿಸಿದ್ದು, ಇದರಲ್ಲಿ ಯುವ ರಾಜ್ಕುಮಾರ್ಗೆ ಸ್ಯಾಂಡಲ್ವುಡ್ ನಟಿಯೊಬ್ಬಳ ಜೊತೆ ಸಂಬಂಧ ಇತ್ತು ಅಂತ ಗಂಭೀರ ಆರೋಪ ಮಾಡಿದ್ದರು ಎನ್ನಲಾಗಿದೆ.
ದೊಡ್ಮನೆ ಗೌರವ ಹಾಳಾಗಬಾರದು ಅಂತಾ ಸುಮ್ಮನೆ ಇದ್ದೆ. ಇನ್ನು ನಟ ಯುವ ರಾಜ್ಕುಮಾರ್ಗೆ ಸ್ಯಾಂಡಲ್ವುಡ್ ನಟಿಯೊಬ್ಬಳ ಜೊತೆ ಸಂಬಂಧ ಇತ್ತು ಅಂತ ಪತ್ನಿ ಶ್ರೀದೇವಿ ಆರೋಪಿಸಿದ್ದರೆನ್ನುವ ವಿಚಾರ ಬೆಳಕಿಗೆ ಬಂದಿತ್ತು.
ಇನ್ನು ಯುವ ರಾಜ್ಕುಮಾರ್ ವಕೀಲರು ಶ್ರೀದೇವಿ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ. 2016ರಲ್ಲಿ ಯುವ ರಾಜ್ಕುಮಾರ್ ಶ್ರೀದೇವಿಯನ್ನು ಭೇಟಿ ಆಗಿದ್ದರು. ಆಗಿಂದಲೇ ಎಲ್ಲವನ್ನೂ ಕಂಟ್ರೋಲ್ ಮಾಡೋಕೆ ಶ್ರೀದೇವಿ ನೋಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.