ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು 'ದರ್ಶನ್ ಗ್ಯಾಂಗ್' ಕ್ರೌರ್ಯ

Arun Kumar
0

ಬೆಂಗಳೂರು, ಜೂನ್ 15: ನಟನಾಗಿ ಹೆಸರು ಮಾಡಿದ್ದ ದರ್ಶನ್ ಇಂದು ಜೈಲು ಪಾಲಾಗಿದ್ದಾರೆ. ಇದಕ್ಕೆ ರೇಣುಕಾಸ್ವಾಮಿ ಕೊಲೆ ಮಾಡಿರುವ ವಿಚಾರ ಇಡೀ ರಾಜ್ಯಕ್ಕೆ ಗೊತ್ತಾಗಿದ್ದು, ಸದ್ಯ ಈ ಪ್ರಕರಣದಲ್ಲಿ ಕೊಲೆಗೆ ಸಂಬಂಧಿಸಿದಂತೆ ಹೊತದೊಂದು ಮಾಹಿತಿ ಬೆಳಕಿಗೆ ಬಂದಿದೆ.

ದರ್ಶನ್ ಪ್ರೇಯಸಿಗೆ ಅಶ್ಲೀಲವಾಗಿ ಸಂದೇಶ ಕಳಹಿಸಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ದರ್ಶನ್ ಗ್ಯಾಂಗ್ ಕೊಲೆ ಮಾಡಿದ್ದಾರೆ. ಈ ಮಾಹಿತಿ ಪೊಲೀಸರು ತನಿಖೆಯಿಂದ ಬಹಿರಂಗವಾಗಿದೆ.

ರೇಣುಕಾಸ್ವಾಮಿಯನ್ನು ಹೇಗೆ ಮರ್ಡರ್ ಮಾಡಲಾಗಿದೆ ಎಂಬುದರ ಕುರಿತು ನೆನ್ನೆಯಷ್ಟೇ ಇಬ್ಬರು ತನಿಖಾ ಪೊಲೀಸರ ಮಧ್ಯದ ಆಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ಮತ್ತೊಂದು ಮಾಹಿತಿ ಪಡೆದಿರುವ ಪೊಲೀಸರೇ ದಂಗಾಗಿದ್ದಾರೆ.

ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ
ಮೃತ ರೇಣುಕಾಸ್ವಾಮಿಗೆ ಶೆಡ್ನಲ್ಲಿಟ್ಟ ವೇಳೆ ಮನ ಬಂದಂತೆ ಹೊಡೆದು ಹಲ್ಲೆ ಮಾಡುವ ಜೊತೆಗೆ ಬರೆ ಹಾಕಿದ್ದಾರೆ. ಎತ್ತಿ ಲಾರಿಗೆ ಬಿಸಾಡಿದ್ದಾರೆ. ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಆತನಿಗೆ ಬರೆ ಸಹ ಹಾಕಿದ್ದಾರೆ. ಬೆಲ್ಟ್, ಕಬ್ಬಿಣದ ಸರಳಿನಿಂದ ಹೊಡೆದಿದ್ದಾರೆ. ಇದೇ ವೇಳೆ ಆತನಿಗೆ ಡಿವೈಸ್ ವೊಂದರಿಂದ ಎಲೆಕ್ಟ್ರಿಕ್ ಶಾಕ್ ಸಹ ನೀಡಿದ್ದಾರೆ ಎಂದು ಪೊಲೀಸರ ಮುಂದೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ತನಿಖೆ ನಡೆಸುತ್ತಿರುವ ಪೊಲೀಸರು ಆತನಿಗೆ ಶಾಕ್ ಕೊಟ್ಟ ಡಿವೈಸ್ ಅನ್ನು ಪತ್ತೆ ಮಾಡುವಲ್ಲಿ ನಿರತರಾಗಿದ್ದಾರೆ. ಸಾಕ್ಷ್ಯಗಳು, ಹೊಸ ಹೊ ಮಾಹಿತಿಗಳು ಪ್ರಕರಣದಲ್ಲಿ ಬಿಚ್ಚಿಕೊಳ್ಳುತ್ತಿದ್ದಂತೆ ಮತ್ತೊಮ್ಮೆ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯ ನಟ ದರ್ಶನ್, ಆತನ ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 16 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಐದನೇ ಆರೋಪಿ ಹಾಗೂ 11 ಆರೋಪಿ ಈ ಇಬ್ಬರು ಕೊಲೆಯಾದ ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಜೂನ್ 20ರವರೆಗೆ ಡಿ ಗ್ಯಾಂಗ್ ಪೋಲಿಸ್ ವಶಕ್ಕೆ
ಸದ್ಯ ಆರು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡಿದ್ದು, ಶನಿವಾರ ದರ್ಶನ್ ಸೇರಿ ಗ್ಯಾಂಗ್ ಅನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನಷ್ಟು ವಿಚಾರಣೆಗೆ ಅಗತ್ಯತೆ ಇರುವ ಕಾರಣ ಪೊಲೀಸರು ಕಸ್ಟಡಿಗೆ ಕೇಳಿದ್ದಾರೆ. ವಾದ ವಿವಾದ ಆಲಿಸಿದ ಪೊಲೀಸರು ಡಿ-ಗ್ಯಾಂಗ್ನಲ್ಲಿ ಹತ್ತು ಮಂದಿಯನ್ನು ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಮುಂದಿನ ಜೂನ್ 20ರವರೆಗೆ ಇವರು ಪೋಲಿಸ್ ವಶಕ್ಕೆ ನೀಡಲಾಗಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)