Vande Bharat Express: ಕೇರಳದಲ್ಲಿ ವಂದೇ ಭಾರತ್‌ ಆರಂಭವಾಗಿ ಒಂದು ವರ್ಷ-ರೆಸ್ಪಾನ್ಸ್‌ ಹೇಗಿದೆ?

Arun Kumar
0

Vande Bharat Express: ಇದೀಗ ದೇಶಾದ್ಯಂತ ವಂದೇ ಭಾರತ್ ರೈಲು ಸಂಚಾರ ಮಾಡುತ್ತಿದ್ದು, ಜನಮನ್ನಣೆ ಪಡೆಯುತ್ತಲೇ ಇದೆ. ಇದೀಗ ಕೇರಳದಲ್ಲಿ ಸಂಚಾರ ಮಾಡುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇದೀಗ ಒಂದು ವರ್ಷ ತುಂಬಿದೆ. ಹಾಗಾದರೆ ಇದಕ್ಕೆ ಇಲ್ಲಿ ಯಾವ ರೀತಿ ರೆಸ್ಪಾನ್ಸ್ ಇದೆ ಹಾಗೂ ಆರಂಭವಾಗಿದ್ದು ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕೇರಳದಲ್ಲಿ ಕಳೆದ ವರ್ಷ ಏಪ್ರಿಲ್ನಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಲಾಗಿತ್ತು. ಪ್ರಯಾಣ ದರ ಹೆಚ್ಚಳ ಹಿನ್ನೆಲೆ ಈ ರೈಲು ಪ್ರಯಾಣಿಕರನ್ನು ಸೆಳೆಯುತ್ತದೆಯೋ ಇಲ್ಲವೋ ಎನ್ನುವ ಚರ್ಚೆಗಳು ಕೂಡ ಆರಂಭದಲ್ಲಿ ಆಗಿದ್ದವು. ಆದರೆ ದಿನ ಕಳೆದಂತೆ ಈ ರೈಲಿಗೆ ಉತ್ತಮ ಸ್ಪಂದನೆ ದೊರೆಯುತ್ತ ಬಂದಿದೆ.

ವಂದೇ ಭಾರತ್ ರೈಲು ಸೇವೆ ಆರಂಭವಾಗುವ ಮೊದಲ ಎರಡು ವಾರಗಳವರೆಗೆ ಟಿಕೆಟ್ಗಳು ವೇಟಿಂಗ್ ಲಿಸ್ಟ್ನಲ್ಲಿದ್ದು, ಕಳೆದ ಏಪ್ರಿಲ್ 26ರಂದು ಕಾಸರಗೋಡಿನಿಂದ ತಿರುವನಂತಪುರಕ್ಕೆ ಮೊದಲ ಟ್ರಿಪ್ನಲ್ಲೇ 19.50 ಲಕ್ಷ ಆದಾಯಯವನ್ನು ತೆಕ್ಕೆಗೆ ಹಾಕಿಕೊಂಡಿತ್ತು.

ತಿರುವನಂತಪುರದಿಂದ ಕಾಸರಗೋಡಿಗೆ ಮತ್ತು ಕಾಸರಗೋಡು-ತಿರುವನಂತಪುರಕ್ಕೆ ಸಂಚಾರ ಮಾಡುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಜನರ ಮೆಚ್ಚುಗೆನ್ನು ಪಡೆದುಕೊಂಡಿದೆ. ಇದೀಗ ಸದ್ಯ ದೇಶದಲ್ಲಿ 51 ವಂದೇ ಭಾರತ್ ರೈಲುಗಳು ಸಂಚಾರ ಮಾಡುತ್ತಿವೆ. ಪ್ರಯಾಣಿಕರ ಸಂಖ್ಯೆ ಕೇರಳದಲ್ಲಿ ಇದೀಗ ಹೆಚ್ಚಳ ಆಗಿದೆ. ಆಕ್ಯುಪೆನ್ಸಿ ಶೇಕಡಾ 200ರ ಸಮೀಪ ತಲುಪಿರುವ ಭಾರತದ ಏಕೈಕ ರೈಲು ಓಡಾಟ ಇದಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2023ರ ಏಪ್ರಿಲ್ 25ರಂದು ಕೇರಳದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)