SIT Helpline: ಪ್ರಜ್ವಲ್ ರೇವಣ್ಣ ಕೇಸ್: ಸಂತ್ರಸ್ತರಿಗಾಗಿ 'ಸಹಾಯವಾಣಿ' ತೆರೆದ ಎಸ್‌ಐಟಿ

Arun Kumar
0

ಬೆಂಗಳೂರು, ಮೇ 05: ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ತನಿಖೆ ನಡೆಸುತ್ತಿರುವ ಎಸ್ಐಟಿ 'ಸಹಾಯವಾಣಿ' ಆರಂಭಿಸಿದೆ.

ಹೌದು, ಸುಮಾರು 3000 ಅಶ್ಲೀಲ ವಿಡಿಯೋಗಳು/ಫೋಟೋಗಳು ಇವೆ ಎಂದು ಹೇಳಲಾಗುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ್ದು ಎನ್ನಲಾದ ಪೆನ್ಡ್ರೈವ್ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ.

ಲೈಂಗಿಕ ದೌರ್ಜನ್ಯ, ಬೆದರಿಕೆ, ಅತ್ಯಾಚಾರ, ಅಪಹರಣ ಕುರಿತು ದೂರು ದಾಖಲಾಗಿದೆ. ಇದೇ ರೀತಿ ಹಲವು ಮಹಿಳೆಯರಿಗೆ ತೊಂದರೆ ಆಗಿರುವ ಸಾಧ್ಯತೆ ಇರುವ ಕಾರಣ ಎಸ್ಐಟಿ ಅಧಿಕಾರಿಗಳು ಸಹಾಯವಾಣಿ (ಸಂಖ್ಯೆ-6360938947) ಆರಂಭಿಸಿದ್ದಾರೆ.

ಸಂತ್ರಸ್ತೆಯರ ನೆರವಿಗೆ ಎಸ್ಐಟಿ
ಮರಿಯಾದೆಗೆ ಅಂಜಿ, ಇಲ್ಲವೇ ಪ್ರಭಾವಿ ನಾಯಕರನ್ನು ಎದುರು ಹಾಕಿಕೊಳ್ಳಲು ಭಯಪಟ್ಟು ದೂರು ನೀಡಲು ಹಿಂಜರಿಯುವ ಸಂತ್ರಸ್ತರಿಗೆ ಈ ಸಹಾಯವಾಣಿ ಅನುಕೂಲವಾಗಲಿದೆ. ಈ ಕಾರಣಕ್ಕೆ ಎಸ್ಐಟಿ 'ಸಹಾಯವಾಣಿ' ಆರಂಭಿಸಿರುವುದಾಗಿ ಎಸ್ಐಟಿ ಮುಖ್ಯಸ್ಥ ಬಿಕೆ ಸಿಂಗ್ ಮಾಹಿತಿ ನೀಡಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತಂತೆ ಎಸ್ಐಟಿ ರಚನೆ ಆಗಿದೆ. ಇದೀಗ ಸಂತ್ರಸ್ತೆಯರ ನೆರವಿಗೆ ಬಂಧಿರುವ ಎಸ್ಐಟಿ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರು, ಇಲ್ಲವೇ ಸಂಬಂಧಿಸಿದ ವ್ಯಕ್ತಿಗಳು ಈ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು.

ಕರೆ ಮಾಡಿ ಎಸ್ಐಟಿಗೆ ದೂರು ನೀಡಿದವರ ಹೆಸರು, ಇನ್ನಿತರ ಮಾಹಿತಿಯಲ್ಲಿ ಗೌಪ್ಯತೆ ಕಾಪಾಡಿಕೊಳ್ಳಲಾಗುವುದು. ಸಂತ್ರಸ್ತರು ನೀವು ಯಾರಿಗೂ ಭಯಪಡಬೇಕಿಲ್ಲ. ನಿಮಗೆ ರಕ್ಷಣೆ ಕೊಡುವುದು ಹಾಗೂ ನಿಮಗೆ ಸಹಾಯಕ್ಕೆ ಬರಲಾಗುವುದು ಎಂದು ಬಿಕೆ ಸಿಂಗ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)