ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿತ್ತು. ಗೆಲುವಿನ ಆಸೆ ಮರೀಚಿಕೆ ಆಗಿತ್ತು. ಆದರೆ ಮಾಡು ಇಲ್ಲವೇ ಮಡಿ ಪಂದ್ಯಗಳಲ್ಲಿ ಆರ್ಸಿಬಿ ಆಡುತ್ತಿರುವ ರೀತಿ ಅಭಿಮಾನಿಗಳಲ್ಲಿ ಹೊಸ ಜೋಶ್ ತುಂಬಿದೆ. ಅಲ್ಲದೆ ಪ್ರಸಕ್ತ ಟೂರ್ನಿಯ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಹೆಚ್ಚಿಸಿದೆ.
ಆರ್ಸಿಬಿ ಐಪಿಎಲ್ನ ಆರಂಭಿಕ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ, ಇನ್ನೊಂದು ಗೆಲುವಿನ ನಗೆ ಬೀರಲು, ಸರಿಯಾ ಮುವತ್ತು ದಿನಗಳನ್ನು ತೆಗೆದುಕೊಂಡಿತು. ಈ ವೇಳೆ ತಂಡದಲ್ಲಿ ದೊಡ್ಡ ಬದಲಾವಣೆಗಳು ಏನು ಕಾಣಿಸಿಕೊಳ್ಳಲಿಲ್ಲ. ಆದರೆ 8 ಪಂದ್ಯಗಳ ಬಳಿಕ ಆರ್ಸಿಬಿ ಒಬ್ಬ ಸ್ಪಿನ್ ಬೌಲರ್ಗೆ ಅವಕಾಶ ನೀಡಿತು. ಇಲ್ಲಿಂದೆ ತಂಡದ ಲಕ್ ಬದಲಾಯಿತು ಎಂದರೆ ತಪ್ಪಾಗಲಾರದು.
ಆರ್ಸಿಬಿ ಲಕ್ ಬದಲಿಸಿದ ಆಟಗಾರ
ಆರಂಭಿಕ ಪಂದ್ಯಗಳಲ್ಲಿ ಆರ್ಸಿಬಿ ಸೋಲಿಗೂ ಈ ಒಂದು ಕಾರಣ ಪ್ರಧಾನವಾಗಿತ್ತು. ಅದುವೇ ಮಿಡ್ಲ್ ಓವರ್ಗಳಲ್ಲಿ ಬೌಲಿಂಗ್ ಮಾಡುವುದು ಯಾರು ಎಂಬುದು. ಆರ್ಸಿಬಿ ತಂಡದಲ್ಲಿ ನುರಿತ ಸ್ಪಿನ್ ಬೌಲರ್ಗಳ ಕೊರತೆ ಎದ್ದು ಕಾಣುತ್ತಿತ್ತು. ಈ ಸ್ಥಾನದಲ್ಲಿ ಗ್ಲೇನ್ ಮ್ಯಾಕ್ಸ್ವೆಲ್ ಹಾಗೂ ಕರನ್ ಶರ್ಮಾ ಬೌಲ್ ಮಾಡಿದರು. ಆದರೆ ಲಕ್ ಬದಲಾಗಲಿಲ್ಲ. ಒಂಬತ್ತನೇ ಪಂದ್ಯದಲ್ಲಿ ಆರ್ಸಿಬಿ ದೇಶೀಯ ಸ್ಪಿನ್ ಬೌಲರ್ಗೆ ಅವಕಾಶ ನೀಡಿ ಯಶ ಕಂಡಿತು. ಇವರೇ ಉತ್ತರಾಖಂಡ ಮೂಲದ ಆಟಗಾರ ಸ್ವಪ್ನಿಲ್ ಸಿಂಗ್..
ಎಡಗೈ ಸ್ಪಿನ್ ಬೌಲರ್
ಸ್ವಪ್ನಿಲ್ ಸಿಂಗ್ ಅಪಾಯಕಾರಿ ಸ್ಪಿನ್ ಬೌಲರ್ ಏನು ಅಲ್ಲ. ಆದರೆ ಎದುರಾಳಿ ಬ್ಯಾಟರ್ಗಳನ್ನು ಕಾಡ ಬಲ್ಲ ಸ್ಪಿನ್ ಬೌಲರ್. ಇವರು ಪವರ್ ಪ್ಲೇ, ಮಿಡ್ಲ್ ಓವರ್ ಹಾಗೂ ಡೆತ್ ಓವರ್ಗಳಲ್ಲಿ ದಾಳಿ ಸಂಘಟಿಸಿ ತಂಡದ ಜಯದಲ್ಲಿ ಮಿಂಚಿದ್ದಾರೆ. ಇವರು ಆರ್ಸಿಬಿ ಈ ಟೂರ್ನಿಯಲ್ಲಿ ಆಡಿದ 9ನೇ ಪಂದ್ಯದಲ್ಲಿ ತಂಡದಲ್ಲಿ ಆಡುವ ಅವಕಾಶವನ್ನು ಪಡೆದರು. ಅಲ್ಲಿಂದ ಇವರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.