KL Rahul: 'ವೆಲ್‌ಕಮ್‌ ಟು ಆರ್ಸಿಬಿ'; ಕನ್ನಡಿಗ ಕೆಎಲ್ ರಾಹುಲ್‌ಗೆ ಸ್ವಾಗತ ಕೋರಿದ ಫ್ಯಾನ್ಸ್!

Arun Kumar
0

ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ನಾಯಕ ಕೆಎಲ್ ರಾಹುಲ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದವರಾದ ಕೆಎಲ್ ರಾಹುಲ್ ಬೆಂಬಲಕ್ಕೆ ಕನ್ನಡಿಗರು ನಿಂತಿದ್ದು, ಆರ್ಸಿಬಿ ತಂಡಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ.

ಸನ್ರೈಸರ್ಸ್ ಹೈದರಾಬಾದ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 10 ವಿಕೆಟ್ಗಳಿಂದ ಗೆದ್ದ ಬಳಿಕ, ತಂಡದ ಪ್ರದರ್ಶನದ ಬಗ್ಗೆ ಮಾಲೀಕ ಸಂಜೀವ್ ಗೊಯೆಂಕಾ ಅಸಮಾಧಾನಗೊಂಡಿದ್ದರು. ಕ್ಯಾಮೆರಾ ಎದುರಿನಲ್ಲೇ ಕೆಎಲ್ ರಾಹುಲ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು, ಈ ದೃಶ್ಯಗಳು ಸಾಕಷ್ಟು ವೈರಲ್ ಆಗಿದ್ದಲ್ಲದೆ, ಸಂಜೀವ್ ಗೊಯೆಂಕಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಈ ಮೊದಲು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿ ಕೂಡ ಎಂಎಸ್ ಧೋನಿ ಅವರನ್ನು ಇದೇ ರೀತಿ ನಡೆಸಿಕೊಂಡಿದ್ದನ್ನು ಧೋನಿ ಅಭಿಮಾನಿಗಳು ಕೂಡ ನೆನಪಿಸಿ, ಟೀಕೆ ಮಾಡಿದ್ದರು. ಕ್ರಿಕೆಟ್ ಬಗ್ಗೆ ಗೊತ್ತಿಲ್ಲದವರು ತಂಡದ ಮಾಲೀಕರಾದರೆ ಹೀಗೆ ಆಗುವುದು ಎಂದಿದ್ದರು.

ಆರ್ಸಿಬಿಗೆ ಬರುವಂತೆ ಒತ್ತಾಯ
ಎಲ್ಎಸ್ಜಿ ತಂಡದ ಮಾಲೀಕರಿಂದ ಅವಮಾನ ಎದುರಿಸಿದ ನಂತರ ಮುಂದಿನ ಆವೃತ್ತಿಯಲ್ಲಿ ಕೆಎಲ್ ರಾಹುಲ್ ತಂಡದಲ್ಲಿ ಉಳಿಯುವುದು ಅನುಮಾನವಾಗಿದೆ. ಅಥವಾ ತಂಡವೇ ಅವರನ್ನು ರಿಟೈನ್ ಮಾಡುವುದಿಲ್ಲ ಎನ್ನಲಾಗಿದೆ.

ಎಲ್ಎಸ್ಜಿ ತೊರೆಯುವುದು ಖಚಿತವಾಗದೇ ಇದ್ದರೂ ಅಭಿಮಾನಿಗಳು ಮಾತ್ರ ಕೆಎಲ್ ರಾಹುಲ್ರನ್ನು ಆರ್ಸಿಬಿ ತಂಡಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಐಪಿಎಲ್ ಆಡಲು ಶುರುಮಾಡಿದ್ದೇ ಆರ್ಸಿಬಿ ಪರವಾಗಿದೆ. ಬಳಿಕ ಸನ್ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪರವಾಗಿ ಆಡಿದ್ದಾರೆ.

ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ವೇಳೆ ಅಭಿಮಾನಿಗಳು "ಕೆಎಲ್ ರಾಹುಲ್ 2025ರ ಆವೃತ್ತಿಯಲ್ಲಿ ಆರ್ ಸಿಬಿ ತಂಡಕ್ಕೆ ಸ್ವಾಗತ" ಎನ್ನುವ ಪೋಸ್ಟರ್ ಪ್ರದರ್ಶನ ಮಾಡಿದ್ದು, ಫೋಟೊ ಈಗ ವೈರಲ್ ಆಗಿದೆ.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)