ಶ್ರೇಯಾಂಕಾ ಪಾಟೀಲ್ ಸೀರೆಯುಟ್ಟು ಮಿಂಚಿದರು: ದೇವತೆ ಥರ ಕಾಣಿಸ್ತಿದ್ದೀರಿ ಅಂತಿದ್ದಾರೆ ಅಭಿಮಾನಿಗಳು!

Arun Kumar
0

ಶ್ರೇಯಾಂಕಾ ಪಾಟೀಲ್ ಈಗ ನ್ಯಾಷನಲ್ ಕ್ರಷ್ ಆಗಿದ್ದು, ಹಳ್ಳಿಯಿಂದ ಹಿಡಿದು ದಿಲ್ಲಿ ತನಕ ಇದೀಗ ಶ್ರೇಯಾಂಕಾ ಪಾಟೀಲ್ ಅಭಿಮಾನಿಗಳಿಗೆ ಫೇವರಿಟ್ ಆಗಿದ್ದಾರೆ. ಆದರೆ ಶ್ರೇಯಾಂಕಾ ಅವರನ್ನ ಸಾಂಪ್ರದಾಯಿಕ ಉಡುಗೆ ಅದರಲ್ಲೂ ಸೀರೆಯಲ್ಲಿ ನೋಡಬೇಕು ಅಂತಾ ಫ್ಯಾನ್ಸ್ ಕಾಯುತ್ತಿದ್ದರು. ಹೀಗಿದ್ದಾಗ ಅಭಿಮಾನಿಗಳ ಆಸೆ ಈಡೇರಿಸಿರುವ ಶ್ರೇಯಾಂಕಾ ಪಾಟೀಲ್ ಈಗ ಸೀರೆ ತೊಟ್ಟು ಮಿಂಚಿದ್ದಾರೆ. ಆ ವಿಡಿಯೋ ನೋಡಲು ಮುಂದೆ ಓದಿ.

ಶ್ರೇಯಾಂಕಾ ಪಾಟೀಲ್ ಬೌಲಿಂಗ್ & ಬ್ಯಾಟಿಂಗ್ ಎರಡರಲ್ಲೂ ಮಿಂಚು ಹರಿಸುತ್ತಾ, ಇದೀಗ ಭಾರತ ತಂಡಕ್ಕೆ ದೊಡ್ಡ ಬೆನ್ನೆಲುಬಾಗಿ ನಿಂತಿದ್ದಾರೆ. ಅದರಲ್ಲೂ ಶ್ರೇಯಾಂಕಾ ಪಾಟೀಲ್ರ ಬೌಲಿಂಗ್ ಕಂಡು ದೊಡ್ಡ ದೊಡ್ಡ ಸ್ಟಾರ್ ಬ್ಯಾಟ್ಸ್ಮನ್ ನಡುಗಿ ಹೋಗಿದ್ದಾರೆ. ಹೀಗಿದ್ದಾಗ ಶ್ರೇಯಾಂಕಾ ಪಾಟೀಲ್ ಅವರು ಕನ್ನಡಿಗರ ಕನಸು ಕೂಡ ಈಡೇರಿಸಿದ್ದರು. ಆರ್ಸಿಬಿ ತಂಡ ಕಪ್ ಗೆಲ್ಲಲು ಶ್ರೇಯಾಂಕಾ ಪಾಟೀಲ್ ದೊಡ್ಡ ಕೊಡುಗೆ ನೀಡಿದ್ದರು.

ಆರ್ಸಿಬಿ ಟೀಂ 2024ನೇ ಸಾಲಿನ ಮಹಿಳಾ ಪ್ರಿಮಿಯರ್ ಲೀಗ್ ಕಪ್ ಗೆದ್ದು ಹುಡುಗರಿಗಿಂತ ಮೊದಲೇ ಸಾಧನೆ ಮಾಡಿದೆ. ಈ ಖುಷಿಯಲ್ಲಿ ಅಭಿಮಾನಿಗಳಿಗೆ ಡಬಲ್ ಧಮಾಖ ಸಿಕ್ಕಿದ್ದು ಶ್ರೇಯಾಂಕಾ ಪಾಟೀಲ್ ಸೀರೆ ಉಟ್ಟು ಮಿಂಚಿರುವ ವಿಡಿಯೋ ವೈರಲ್ ಆಗುತ್ತಿದೆ. ಫ್ಯಾನ್ಸ್ಗೆ ಶ್ರೇಯಾಂಕಾ ಅವರು ಸೀರೆ ತೊಟ್ಟಿರುವ ವಿಡಿಯೋ ಸಖತ್ ಇಷ್ಟವಾಗಿದ್ದು, ಆ ವಿಡಿಯೋ ಮುಂದೆ ಇದೆ ನೋಡಿ.

ಶ್ರೇಯಾಂಕಾ ಪಾಟೀಲ್ ಮಿಂಚಿಂಗ್!
ಹೌದು, ಶ್ರೇಯಾಂಕಾ ಪಾಟೀಲ್ ಇದೀಗ ಕನ್ನಡ ನಾಡಿನ ಹೆಸರಾಂತ ಜವಳ ಅಂಗಡಿಗಾಗಿ ಜಾಹೀರಾತು ನೀಡಿದ್ದಾರೆ. 'ಬಿ ಎಸ್ ಚನ್ನಬಸಪ್ಪ ಅಂಡ್ ಸನ್ಸ್' ಸಂಸ್ಥೆಗಾಗಿ ವಿಶೇಷವಾಗಿರುವ ಜಾಹೀರಾತು ನೀಡಿದ್ದಾರೆ. ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯ 'ಬಿ ಎಸ್ ಚನ್ನಬಸಪ್ಪ ಅಂಡ್ ಸನ್ಸ್' ದೊಡ್ಡ ಹೆಸರು ಸಂಪಾದಿಸಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ದೊಡ್ಡ ಹೆಸರು ಮಾಡಿದ 'ಬಿ ಎಸ್ ಚನ್ನಬಸಪ್ಪ ಅಂಡ್ ಸನ್ಸ್' ಸಂಸ್ಥೆಗೆ ಈಗ, ಶ್ರೇಯಾಂಕಾ ಪಾಟೀಲ್ ನೀಡಿರುವ ವಿಶೇಷ ಜಾಹೀರಾತು ಅಭಿಮಾನಿಗಳಿಗೂ ಇಷ್ಟವಾಗುತ್ತಿದೆ. ಹಾಗೇ ಈ ಮೂಲಕ ಶ್ರೇಯಾಂಕಾ ಅವರನ್ನು ಸಾಂಪ್ರದಾಯಿಕ ಉಡುಗೆ ಆದ ಸೀರೆಯಲ್ಲಿ ನೋಡುವುದು ಕೂಡ ಸಾಧ್ಯವಾಯಿತು ಅಂತಿದ್ದಾರೆ ಫ್ಯಾನ್ಸ್.

ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ!
ಶ್ರೇಯಾಂಕಾ ಪಾಟೀಲ್ ಇನ್ನೂ ಚಿಕ್ಕ ಹುಡುಗಿ & ಅವರ ವಯಸ್ಸು ಈಗಿನ್ನು 21 ವರ್ಷ. ಆದ್ರೂ ಅವರು ಮಾಡಿರುವ ಸಾಧನೆ ಇಡೀ ದೇಶಕ್ಕೆ ಇಷ್ಟವಾಗಿದೆ. ಆರ್ಸಿಬಿ ಮಾತ್ರ ಅಲ್ಲ, ಇಂಡಿಯನ್ ಕ್ರಿಕೆಟ್ ತಂಡಕ್ಕೂ ಆಡಿದ್ದಾರೆ ನಮ್ಮ ಕನ್ನಡತಿ ಶ್ರೇಯಾಂಕಾ. ಚಿಕ್ಕ ವಯಸ್ಸಿಗೆ ಅವರು ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಹಾಗೇ ಕೋಟಿ ಕೋಟಿ ಅಭಿಮಾನಿಗಳ ಗಳಿಸಿದ್ದಾರೆ, ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)