ಮೇ 11 ಶನಿವಾರ, ನಿಧಾನಗತಿಯ ಓವರ್ ರೇಟ್ನಿಂದಾಗಿ ಐಪಿಎಲ್ ಒಂದು ಪಂದ್ಯಕ್ಕೆ ರಿಷಬ್ ಪಂತ್ ಅವರನ್ನು ಅಮಾನತುಗೊಳಿಸಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ಗೆ ದೊಡ್ಡ ಹೊಡೆತ ಬಿದ್ದಿದೆ. ಇದರೊಂದಿಗೆ ಪಂತ್ಗೆ ದಂಡವನ್ನೂ ವಿಧಿಸಲಾಗಿದೆ.
ಹೀಗಿರುವಾಗ ರಿಷಬ್ ಪಂತ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ಮೇ 12 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ನಾಯಕ ಯಾರೆಂಬುದು ಕನ್ಫರ್ಮ್ ಆಗಿದೆ.
ಮುಂದಿನ ಪಂದ್ಯದಲ್ಲಿ ಆಲ್ ರೌಂಡರ್ ಅಕ್ಸರ್ ಪಟೇಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗುತ್ತಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಅಕ್ಸರ್ ಡೆಲ್ಲಿ ತಂಡದ ಪ್ರಸ್ತುತ ಉಪನಾಯಕ ಕೂಡ ಹೌದು. ಆದ್ದರಿಂದ ಪಂತ್ ಬದಲಿಗೆ ತಂಡದ ನಾಯಕರಾಗಿ ಅಕ್ಸರ್ ಆರ್ಸಿಬಿ ಎದರು ಮುನ್ನೆಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಪಂದ್ಯ ಡೆಲ್ಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಡೆಲ್ಲಿ ಗೆದ್ದರೆ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಳ್ಳಲಿದೆ. ಆರ್ಸಿಬಿ ತಂಡಕ್ಕೂ ಈ ಪಂದ್ಯ ಪ್ಲೇ ಆಫ್ ರೇಸ್ನಲ್ಲಿ ಜೀವಂತವಾಗಿರಲು ಮಹತ್ವದಾಗಿದೆ.
14 ತಿಂಗಳ ನಂತರ ಕ್ರಿಕೆಟ್ಗೆ ಮರಳಿದ ಪಂತ್ ಈ ಋತುವಿನ ಐಪಿಎಲ್ನಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಮೂಲಕ ಪ್ಲೇಆಫ್ ತಲುಪುವ ಅವಕಾಶವನ್ನು ಪಂತ್ ಹೊಂದಿದ್ದರು, ಆದರೆ ಈಗ ಪಂತ್ ಆರ್ಸಿಬಿ ವಿರುದ್ಧ ಪಂದ್ಯಕ್ಕೆ ಅಲಭ್ಯರಾಗಿರುವುದು ಡೆಲ್ಲಿ ಪ್ಲೇ ಆಪ್ ಹಾದಿಗೆ ತುಂಬಾ ಕಷ್ಟಕರವಾಗಬಹುದು.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.