ವಿಶ್ವದ ದೊಡ್ಡಣ್ಣ ಅಂತಾ ಬಿಲ್ಡಪ್ ಕೊಡುವ ಅಮೆರಿಕ ಬೇರೆಯವರನ್ನ ಉದ್ಧಾರ ಮಾಡಲ್ಲ ಹಾಗೂ ಉದ್ಧಾರ ಆಗುವವರ ವಿರುದ್ಧ ಕುತಂತ್ರ ಮಾಡದೇ ಇರಲ್ಲ ಎಂಬ ಆರೋಪ ಇದೆ. ಈ ಮಾತಿಗೆ ತಕ್ಕನಾಗಿ ಹಲವು ಘಟನೆಗಳು ನಡೆಯುತ್ತಿದ್ದು, ಇದೀಗ ಉಕ್ರೇನ್ ಕೂಡ ಅಮೆರಿಕ ಮಾತು ಕೇಳಿ ಎಡವಟ್ಟು ಮಾಡಿಕೊಂಡಿದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಿದ್ದಾಗಲೇ ರಷ್ಯಾ ಸೇನೆ ಮನಸ್ಸಿಗೆ ಬಂದಂತೆ ಉಕ್ರೇನ್ ನಗರಗಳ ಮೇಲೆ ದಾಳಿ ಮಾಡುತ್ತಿದೆ
2 ವರ್ಷದ ಹಿಂದೆ ಶುರುವಾದ ರಷ್ಯಾ & ಉಕ್ರೇನ್ ಯುದ್ಧ, ಜಗತ್ತಿನ ಬೆನ್ನಿಗೆ ಚೂರಿಯನ್ನೇ ಹಿರಿದಂತೆ ಕಾಣುತ್ತಿದೆ. ಯಾಕಂದ್ರೆ ಪ್ರತಿದಿನ ಒಂದಲ್ಲ ಒಂದು ಸಮಸ್ಯೆಯನ್ನ ಈ ಯುದ್ಧವು ಸೃಷ್ಟಿ ಮಾಡ್ತಿದೆ. ಹೀಗಾಗಿ ಪರದಾಟ ಕೂಡ ಜಾಸ್ತಿ ಆಗಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೆ?ಅನ್ನೋದೆ ಗೊತ್ತಾಗುತ್ತಿಲ್ಲ. ಇನ್ನು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಕೆಂಡವಾಗಲು ಬಲವಾದ ಕಾರಣವೂ ಇದೆ, ಯಾವಾಗ ಅಮೆರಿಕ ಪರೋಕ್ಷವಾಗಿ ಉಕ್ರೇನ್ಗೆ ಸಹಾಯನ ಮಾಡುತ್ತಿತ್ತೋ ಅದೇ ದಿನದಿಂದ ಉಕ್ರೇನ್ ಗ್ರಹಚಾರ ಕೆಟ್ಟಿತ್ತು. ಈಗ ಅಮೆರಿಕ ನೇರವಾಗಿಯೇ, ಉಕ್ರೇನ್ ಪರ ನಿಂತಿರುವ ಕಾರಣಕ್ಕೆ ತನ್ನ ದಾಳಿಯನ್ನು ಮತ್ತಷ್ಟು ಹೆಚ್ಚಿಸಿದೆ ರಷ್ಯಾ.
ಯುದ್ಧ ಶುರುವಾಗಿದ್ದು ಏಕೆ?
ಅಮೆರಿಕ ನೇತೃತ್ವದ 'ನ್ಯಾಟೋ' ಒಕ್ಕೂಟಕ್ಕೆ ಉಕ್ರೇನ್ ಸೇರ್ಪಡೆ ಆಗುತ್ತಿದೆ ಎಂಬ ಆರೋಪವೇ ಯುದ್ಧ ಆರಂಭವಾಗಲು ಕಾರಣವಾಗಿತ್ತು. ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧ ಘೋಷಿಸಿದ್ದರು. 2022ರ ಫೆಬ್ರವರಿ 24ರಂದು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಹೀಗೆ ಎರಡು ದೇಶಗಳ ಮಧ್ಯೆ ಭೀಕರ ಕದನ ಶುರುವಾಗಿತ್ತು. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧದ ಭೀಕರತೆ ಶುರುವಾಗಿ, ಲಕ್ಷಾಂತರ ಜನರು ಕೂಡ ಜೀವವನ್ನೇ ಬಿಟ್ಟಿದ್ದಾರೆ ಎಂಬ ಆರೋಪ ಇದೆ.
ಹೀಗಿದ್ದರೂ ಯುದ್ಧ ನಿಲ್ಲಿಸಲು ರಷ್ಯಾ ತಯಾರಿಲ್ಲ. ಉಕ್ರೇನ್ ಹಠ ಬಿಟ್ಟು ಸಂಧಾನಕ್ಕೆ ಬರ್ತಿಲ್ಲ ಅಂತಾ ರಷ್ಯಾ ಆರೋಪಿಸುತ್ತಿದೆ. ಹೀಗಿದ್ದಾಗ ಅಮೆರಿಕ ಮಾಡುತ್ತಿರುವ ಎಡವಟ್ಟುಗಳು ಈಗ ಯುದ್ಧ ಜ್ವಾಲೆ ಹೆಚ್ಚಾಗಲು ಪ್ರಮುಖ ಕಾರಣ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಮತ್ತೊಂದು ಬದಿಯಲ್ಲಿ ರಷ್ಯಾ ಸೇನೆ ತನ್ನ ದಾಳಿಯನ್ನು ಮತ್ತಷ್ಟು ಭೀಕರಗೊಳಿಸಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.