ಸಾಮಾನ್ಯವಾಗಿ ಇಬ್ಬರೂ ಸ್ಟಾರ್ ನಟರ ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗುವುದು. ಬಾಕ್ಸಾಫೀಸ್ ಕ್ಲ್ಯಾಶ್ ಆಗುವುದು ಸಾಮಾನ್ಯ. ಎರಡು ಸಿನಿಮಾಗಳನ್ನು ಒಂದೇ ದಿನ ಬಿಡುಗಡೆ ಮಾಡಲು ನಿರ್ಮಾಪಕರು, ವಿತರಕರು ಪಟ್ಟು ಹಿಡಿಯುವುದು ಇದೆ. ಆದರೆ ಮುಂದಿನ ವಾರ ಪುನೀತ್ ರಾಜ್ಕುಮಾರ್ ನಟನೆಯ 2 ಸಿನಿಮಾಗಳು ಎದಿರುಬದಿರಾಗುತ್ತಿವೆ.
ಎಲೆಕ್ಷನ್, ಐಪಿಎಲ್ ಕಾರಣಕ್ಕೆ ಇತ್ತೀಚೆಗೆ ಯಾವುದೇ ದೊಡ್ಡ ಕನ್ನಡ ಸಿನಿಮಾಗಳು ಬಿಡುಗಡೆ ಆಗಲಿಲ್ಲ. ಆದರೆ ಮೇ 7ರಂದು ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎರಡನೇ ಹಂತಹ ಮತದಾನ ನಡೆಯಲಿದೆ. ಬಳಿಕ ಶುಕ್ರವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಆ ಸಿನಿಮಾಗಳ ಜೊತೆಗೆ ಪುನೀತ್ ರಾಜ್ಕುಮಾರ್ ನಟನೆಯ 2 ಸಿನಿಮಾಗಳು ರೀ- ರಿಲೀಸ್ ಆಗುತ್ತಿವೆ.
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಜಾಕಿ' ಸಿನಿಮಾ ಮರು ಬಿಡುಗಡೆ ಆಗಿ ಹಿಟ್ ಆಗಿತ್ತು. ಕೆಆರ್ಜಿ ಸ್ಟುಡಿಯೋ ಸಂಸ್ಥೆ ವಿತರಣೆ ಮಾಡಿ ಸಕ್ಸಸ್ ಕಂಡಿತ್ತು. ಇದೀಗ ಮೇ 10ಕ್ಕೆ ಪುನೀತ್ ರಾಜ್ಕುಮಾರ್ ನಟನೆಯ 'ಅಂಜನಿಪುತ್ರ' ಚಿತ್ರವನ್ನು ಮತ್ತೆ ತೆರೆಗೆ ತರಲಾಗುತ್ತಿದೆ. 50ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಆದರೆ ಅದೇ ದಿನ ಅಪ್ಪು ನಟನೆಯ 'ಪವರ್ ಸ್ಟಾರ್' ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.
'ಅಂಜನಿಪುತ್ರ' ಹಾಗೂ 'ಪವರ್ ಸ್ಟಾರ್' ಎರಡೂ ಕೂಡ ಪುನೀತ್ ರಾಜ್ಕುಮಾರ್ ನಟನೆಯ ಸಿನಿಮಾಗಳೇ. ದಶಕಗಳ ಹಿಂದೆ ಬಿಡುಗಡೆಯಾಗಿದ್ದ ಸಿನಿಮಾಗಳು ಆವರೇಜ್ ಹಿಟ್ ಎನಿಸಿಕೊಂಡಿದ್ದವು. ಎರಡೂ ಕೂಡ ರೀಮೆಕ್ ಸಿನಿಮಾಗಳು. ಇದೀಗ ಎರಡೂ ಚಿತ್ರವನ್ನು ಒಟ್ಟೊಟ್ಟಿಗೆ ರೀ-ರಿಲೀಸ್ ಮಾಡಲು ಮುಂದಾಗಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಒಮ್ಮೆಲೆ ಎರಡು ಸಿನಿಮಾ ಬಂದರೆ ಯಾವುದು ನೋಡುವುದು ಎಂದು ಕೇಳುತ್ತಿದ್ದಾರೆ.
ಮತ್ತೆ ಅಪ್ಪುನ ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರಾಗಿದ್ದಾರೆ. ಆದರೆ 'ಅಂಜನಿಪುತ್ರ' ಹಾಗೂ 'ಪವರ್ ಸ್ಟಾರ್' ಸಿನಿಮಾಗಳನ್ನು ಒಟ್ಟಿಗೆ ಬಿಡುಗಡೆ ಮಾಡುತ್ತಿರುವುದು ಯಾಕೆ? ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ 'ಅಂಜನಿಪುತ್ರ' ಚಿತ್ರದ ನಿರ್ಮಾಪಕ ಎನ್. ಎಂ ಕುಮಾರ್ ಫಿಲ್ಮಿಬೀಟ್ಗೆ ಪ್ರತಿಕ್ರಿಯಿಸಿದ್ದಾರೆ. ಬೇಕಂತಲೇ 'ಪವರ್ ಸ್ಟಾರ್' ಚಿತ್ರವನ್ನು ಮೇ 10ಕ್ಕೆ ಬಿಡುಗಡೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.