ದಾವಣಗೆರೆ: ಕೈಕೊಟ್ಟ ಮಳೆ, ಕೊರೆಸಿದ ಬೋರ್‌ಗಳೆಲ್ಲ ಫೇಲ್‌-ಒಂದೂವರೆ ಹೆಕ್ಟೆರ್‌ನಲ್ಲಿದ್ದ ಅಡಿಕೆ ಗಿಡ ನಾಶ ಮಾಡಿದ ರೈತ.!

Arun Kumar
0

ದಾವಣಗೆರೆ, ಮೇ, 14: ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದ್ದು, ರೈತರ ಬದುಕು ಮೂರಾಬಟ್ಟೆಯಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ರೈತರಂತೂ ಆಕಾಶದ ಮೇಲೆ ನೋಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಮತ್ತೊಂದೆಡೆ ಕೊರಸಿದ ಬೋರ್ಗಳೆಲ್ಲ ಕೈಕೊಟ್ಟು ರೈತನೊಬ್ಬ ಒಂದೂವರೆ ಹೆಕ್ಟೇರ್ ಅಡಿಕೆ ಗಿಡಗಳನ್ನು ನಾಶ ಮಾಡಿರುವ ಘಟನೆ ನಡೆದಿದೆ.

ಕಂಡು ಕೇಳರಿಯದ ಬರ ತಲೆದೋರಿದ್ದು, ಬೆಳೆಗಳು ಒಣಗುತ್ತಿವೆ. ಮಾತ್ರವಲ್ಲ, ಅಡಿಕೆ, ತೆಂಗು ಸೇರಿದಂತೆ ಬಹುತೇಕ ಬೆಳೆಗಳು ಒಣಗಿ ಹೋಗಿದ್ದು, ಏನೂ ಬೆಳೆ ಬಾರದ ಕಾರಣ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದಿನ ಕಳೆದಂತೆ ಬೆಳೆಗಳು ಒಣಗುತ್ತಿರುವುದನ್ನು ನೋಡುತ್ತಿರುವ ಕೆಲ ರೈತರು ಜಮೀನುಗಳಿಗೆ ಬರುವುದನ್ನು ಕೈಬಿಟ್ಟಿದ್ದಾರೆ. ಮಳೆ ಬಂದರೂ ಏನೂ ಉಪಯೋಗವಾಗದಂಥ ಸ್ಥಿತಿ ನಿರ್ಮಾಣವಾಗಿದ್ದು, ಹುಯ್ಯೋ ಹುಯ್ಯೋ ಮಳೆರಾಯ ಎಂದು ದಿನವೂ ಪ್ರಾರ್ಥಿಸುವಂತಾಗಿದೆ.

ಅಡಿಕೆ ತೋಟ ನಾಶ: ಮಳೆ ಇಲ್ಲದೆ ಬೆಳೆಗಳಿಗೆ ನೀರು ಒದಗಿಸುವುದು ಕೂಡ ರೈತರಿಗೆ ಕಷ್ಟವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರ್ ವೆಲ್ ಗಳ ಕೊರೆಸಿದ್ದರೂ ನೀರು ಬಾರದ ಹಿನ್ನಲೆಯಲ್ಲಿ ಫಸಲಿಗೆ ಬಂದಿದ್ದ ಒಂದೂವರೆ ಹೆಕ್ಟೇರ್ ಅಡಿಕೆ ತೋಟವನ್ನು ರೈತನೇ ಕಡಿದು ಹಾಕಿದ ಘಟನೆ ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಹೋಬಳಿಯ ಹೊನ್ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಸವರಾಜಪ್ಪ ಎಂಬುವರಿಗೆ ಸೇರಿದ ಒಂದೂವರೆ ಎಕರೆ ಅಡಿಕೆ ತೋಟವಾಗಿದ್ದು, ಮಳೆ ಇಲ್ಲದ ಹಿನ್ನಲೆ ಫಸಲು ಬಂದ ಸಾವಿರಾರು ಅಡಿಕೆ ಗಿಡಗಳಿಗೆ ನೀರು ಒದಗಿಸಲಾಗದೆ ಪರದಾಡುತ್ತಿದ್ದರು ಎನ್ನಲಾಗಿದೆ. ತನ್ನ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹತ್ತಕ್ಕೂ ಹೆಚ್ಚು ಬೋರ್ವೆಲ್ ಕೊರೆಸಿದರೂ ಕೂಡ ನೀರು ಬಿದ್ದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)