ಸಾವು.. ಸಾವು.. ಸಾವು.. ಏನಿದು ಅಮಾಯಕರ ಆಕ್ರಂದನ?

Arun Kumar
0

ಇಸ್ರೇಲ್ VS ಹಮಾಸ್ ಯುದ್ಧ ಇದೀಗ ಇಡೀ ಜಗತ್ತಿಗೆ ತಲೆನೋವಿನ ಮೂಲವಾಗಿದೆ. ಹೀಗೆ ಇಬ್ಬರೂ ಹುಚ್ಚರಂತೆ ಕಿತ್ತಾಡುತ್ತಾ, ಅಮಾಯಕರ ಜೀವ ತೆಗೆಯುತ್ತಿದ್ದಾರೆ ಎಂಬ ಆರೋಪ & ಆಕ್ರೋಶ ಕೇಳಿಬಂದಿದೆ. ಹೀಗಿದ್ದಾಗ ಈ ಯುದ್ಧದಲ್ಲಿ ಈವರೆಗೂ ಸತ್ತವರ ಸಂಖ್ಯೆ ಇದೀಗ ಹೊರ ಬಿದ್ದಿದ್ದು, ಆ ಮಾಹಿತಿ ಭಯ ಹುಟ್ಟಿಸುವಂತಿದೆ.

2023ರ ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ವಿರುದ್ಧ 5000 ರಾಕೆಟ್ ಉಡಾಯಿಸಿ ದಾಳಿ ಮಾಡಿದ್ದರು. ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್ನ ಹಿಡಿದು ಇಸ್ರೇಲ್ ಒಳಗಡೆ ನುಗ್ಗಿದ್ದರು. ರೊಚ್ಚಿಗೆದ್ದ ಇಸ್ರೇಲ್ ಕೂಡ ಹಮಾಸ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಈ ಘಟನೆ ನಡೆದು 7 ತಿಂಗಳು ಕಳೆದಿವೆ. ಹೀಗೆ 7 ತಿಂಗಳ ಅವಧಿಯಲ್ಲಿ, ತನ್ನ ಶತ್ರು ನಾಶ ಮಾಡಲು ಇಸ್ರೇಲ್ ಸಾವಿರಾರು ಟನ್ ಬಾಂಬ್ ಬಳಸಿದೆ. ಇದರ ಜೊತೆಗೆ ಈವರೆಗೂ ಸುಮಾರು 34,000 ಜನರ ಜೀವ ತೆಗೆದಿರುವ ಆರೋಪ ಕೂಡ ಇದೀಗ ಇಸ್ರೇಲ್ ಸೇನೆ ವಿರುದ್ಧ ಕೇಳಿಬಂದಿದೆ.

ಯುದ್ಧಕ್ಕೆ 34,971 ಜನರು ಬಲಿ?
ಇಸ್ರೇಲ್ ಸೇನೆ ಬಲವಾಗಿದೆ, ಆದರೆ ಇಸ್ರೇಲ್ ಸೇನೆಗೆ ಬಲ ನೀಡುತ್ತಿರುವುದು ಅಮೆರಿಕ. ಈ ಮೂಲಕ ಅಮೆರಿಕ ಸಹಾಯ ಪಡೆದು ಹಮಾಸ್ ವಿರುದ್ಧ ಇಸ್ರೇಲ್ ಹೀಗೆ ಭಿಕರ ದಾಳಿ ಮಾಡ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಸಮಯದಲ್ಲಿ, ಇಸ್ರೇಲ್ ದಾಳಿಗೆ ಪ್ಯಾಲೆಸ್ತೀನ್ ಭೂ ಭಾಗದಲ್ಲಿ ಮೃತಪಟ್ಟ ಜನರ ಸಂಖ್ಯೆ ಹೊರಬಿದ್ದಿದೆ. ಯುದ್ಧ ಶುರುವಾದ ನಂತರ ಇಸ್ರೇಲ್ ನಡೆಸಿದ ದಾಳಿಗೆ ಪ್ಯಾಲೆಸ್ತೀನ್ ಭಾಗದಲ್ಲಿ ಸುಮಾರು 34,971 ಜನರು ಜೀವ ಬಿಟ್ಟಿದ್ದಾರಂತೆ. ಗಾಜಾದಲ್ಲಿ 78,641 ಜನರು ಗಾಯಗೊಂಡು ಸಾವು & ಬದುಕಿನ ನಡುವೆ ಒದ್ದಾಡುತ್ತಿದ್ದಾರೆ. ಆದರೆ ಹೀಗೆ ಇಸ್ರೇಲ್ ಮಾಡುತ್ತಿರುವ ತಪ್ಪು ಅಮೆರಿಕದ ಬುಡವನ್ನೇ ಅಲುಗಾಡಿಸುತ್ತಿದೆ.

ಅಮೆರಿಕಗೆ ಭಯ ಯಾಕೆ?
ಇಸ್ರೇಲ್ ವಿಚಾರದಲ್ಲಿ ಅಮೆರಿಕ ನಲುಗಿ ಹೋಗಿದ್ದು, ಒಂದು ಕಡೆ ಪೂರ್ತಿಯಾಗಿ ಇಸ್ರೇಲ್ನ ಎದುರು ಹಾಕಿಕೊಳ್ಳಲು ಆಗುತ್ತಿಲ್ಲ. ಮತ್ತೊಂದು ಕಡೆ ಇಸ್ರೇಲ್ ನಾಯಕರು ಅಮೆರಿಕ ಈಗ ಹೇಳುವ ಬುದ್ಧಿ ಮಾತು ಕೂಡ ಕೇಳುತ್ತಿಲ್ಲ. ಹೀಗಾಗಿ ಅಮೆರಿಕ ಅಧ್ಯಕ್ಷ ಬೈಡನ್ ಇಸ್ರೇಲ್ಗೆ ಬುದ್ಧಿ ಹೇಳಲು ಪರದಾಡುತ್ತಿದ್ದಾರೆ. ಹೀಗಿದ್ದಾಗ ರಷ್ಯಾ ವಿಚಾರದಲ್ಲಿ ಉಕ್ರೇನ್ ಪರವಾಗಿದ್ದ ಅಮೆರಿಕ, ಯುದ್ಧದ ಬಗ್ಗೆ ಪುಂಗಿದೆ. ಆದರೆ ಅದೇ ಹಮಾಸ್ & ಇಸ್ರೇಲ್ ಯುದ್ಧದಲ್ಲಿ ಈಗ ಅಮೆರಿಕ ಹಿಂಸೆ ಪ್ರಚೋದನೆ ಮಾಡುತ್ತಿದೆ ಎಂಬ ಆರೋಪವು ಕೇಳಿಬಂದಿತ್ತು. ಹೀಗಾಗಿ ಇದೇ ವಿಚಾರದಲ್ಲಿ ಅಮೆರಿಕ ಅಲರ್ಟ್ ಆಗಿದ್ದು, ಇಸ್ರೇಲ್ ನಡೆಸುತ್ತಿರುವ ಹಿಂಸಾಚಾರದಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)