ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 76.98% ಮತದಾನ, ಯಾವ್ಯಾವ ಮತಗಟ್ಟೆಗಳಲ್ಲಿ ಎಷ್ಟು?-ಅಂಕಿಅಂಶಗಳ ವಿವರ ಇಲ್ಲಿದೆ

Arun Kumar
0

ದಾವಣಗೆರೆ, ಮೇ, 08: ರಾಜ್ಯದಲ್ಲಿ ನಿನ್ನೆಯಷ್ಟೇ (ಮೇ 07) ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆದಿದೆ. ಈ ಪೈಕಿ ದಾವಣಗೆರೆ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಾದರೆ ಯಾವ್ಯಾವ ಮತಗಟ್ಟೆಗಳಲ್ಲಿ ಎಷ್ಟು ಮತದಾನ ಆಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ಶೇಕಡಾ 76.98 ರಷ್ಟು ಹಕ್ಕು ಚಲಾವಣೆ ಆಗಿದೆ. ಇದುವರೆಗೂ ನಡೆದ ಚುನಾವಣೆಗಳಲ್ಲಿ ಗರಿಷ್ಠ ಮತದಾನ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ಶೇಕಡಾ 76.98 ರಷ್ಟು ಹಕ್ಕು ಚಲಾವಣೆ ಆಗಿದೆ. ಇದುವರೆಗೂ ನಡೆದ ಚುನಾವಣೆಗಳಲ್ಲಿ ಗರಿಷ್ಠ ಮತದಾನ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರ ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಕ್ಷೇತ್ರದಲ್ಲಿ ಒಟ್ಟು 1,946 ಮತಗಟ್ಟೆಗಳಿಂದ 8,51,990 ಪುರುಷ, 8,57,117 ಮಹಿಳಾ, 137 ಇತರೆ ಸೇರಿ 17,09,244 ಮತದಾರರಿದ್ದಾರೆ. ಈ ಪೈಕಿ 6,67,742 ಪುರುಷ, 6,47,964 ಮಹಿಳೆಯರು ಹಾಗೂ 40 ಇತರೆ ಸೇರಿ 13,15,746 ಮತದಾನವಾಗಿ ಶೇಕಡಾ 76.98ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಕ್ಷೇತ್ರವಾರು ವಿವರ: ಜಗಳೂರು 1,00,046 ಪುರುಷ, 98,759 ಮಹಿಳೆ, 10 ಇತರೆ ಸೇರಿ 1,98,815 ಮತದಾರರಲ್ಲಿ 78,865 ಪುರುಷ, 74,956 ಮಹಿಳೆ, 3 ಇತರೆ ಸೇರಿ 1,53,824 ಮತದಾನ ಮಾಡಿ ಶೇಕಡಾ 77.37, ಹರಪನಹಳ್ಳಿ 1,12,969 ಪುರುಷ, 1,10,985 ಮಹಿಳೆ, 19 ಇತರೆ ಸೇರಿ 2,23,973 ಮತದಾರರಲ್ಲಿ 88,443 ಪುರುಷ, 84,101 ಮಹಿಳೆ, 3 ಇತರೆ ಸೇರಿ 1,72,547 ಮತದಾನವಾಗಿ ಶೇಕಡಾ 77.04ರಷ್ಟು ಮತದಾನ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)