ಪೆನ್‌ಡ್ರೈವ್ ರೆಡಿ ಮಾಡಿದ್ದು ಡಿಕೆ ಶಿವಕುಮಾರ್: ₹100 ಕೋಟಿ ಆಫರ್ ನೀಡಿದ್ರು; ವಕೀಲ ದೇವರಾಜೇಗೌಡ ಸ್ಪೋಟಕ ಹೇಳಿಕೆ

Arun Kumar
0

ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಕೀಲ ದೇವರಾಜೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪೆನ್ ಡ್ರೈವ್ ತರಿಸಿಕೊಂಡು ಎಲ್ಲಾ ರೆಡಿ ಮಾಡಿದ್ದು ಡಿ.ಕೆ ಶಿವಕುಮಾರ್ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಕಾರ್ತಿಕ್ ಹತ್ರ ಪೆನ್ಡ್ರೈವ್ ತರಿಸಿಕೊಂಡು ಎಲ್ಲವನ್ನೂ ರೆಡಿ ಮಾಡಿದ್ದು ಡಿ.ಕೆ. ಶಿವಕುಮಾರ್. ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿ ಒಟ್ಟಾರೆ ನಾಲ್ಕು ಸಚಿವರಿಗೆ ಇದನ್ನು ನೋಡಿಕೊಳ್ಳಲು ಬಿಟ್ಟಿದ್ದಾರೆ ಎಂದು ಹೇಳಿದರು.

ಡಿಕೆ ಶಿವಕುಮಾರ್ ಮಾಸ್ಟರ್ ಮೈಂಡ್?
ನನ್ನನ್ನು ಕರೆಸಿಕೊಂಡು ಮಾತನಾಡಿ ಎಲ್ಲವನ್ನೂ ಹೆಚ್ಡಿ ಕುಮಾರಸ್ವಾಮಿ ಮಾಡಿದ್ದು ಎಂದು ಹೇಳುವಂತೆ ಒತ್ತಾಯ ಮಾಡಿದ್ದರು. ಪೆನ್ಡ್ರೈವ್ ಹಂಚಿಸಿದ್ದು ಹೆಚ್ಡಿ ಕುಮಾರಸ್ವಾಮಿ ಎಂದು ಹೇಳುವಂತೆ ಎಲ್ ಆರ್ ಶಿವರಾಮೇಗೌಡರ ಮೂಲಕ ಡಿಕೆ ಶಿವಕುಮಾರ್ ನನಗೆ ಹೇಳಿಸಿದ್ದರು.

₹100 ಕೋಟಿ ನೀಡುವುದಾಗಿ ಆಮಿಷ ಒಡ್ಡಿದ್ದರು. ಅದ್ರಲ್ಲಿ 5 ಕೋಟಿ ಅಡ್ವಾನ್ಸ್ ಅನ್ನ ಬೋರಿಂಗ್ ಕ್ಲಬ್ ನ ರೂಂ ನಂಬರ್ 110 ಕ್ಕೆ ಕಳಿಸಿದ್ದರು. ಚನ್ನರಾಯಪಟ್ಟಣ ಗೋಪಾಲಸ್ವಾಮಿನ ಸಂಧಾನಕ್ಕೆ ಕಳಿಸಿದ್ರು, ಐದು ಕೋಟಿ ಕ್ಯಾಶನ್ನೂ ಕೊಟ್ಟು ಕಳಿಸಿದ್ರು ಆದರೆ ನಾನು ಒಪ್ಪಲಿಲ್ಲ ಎಂದು ಹೇಳಿದರು.

ಇಷ್ಟೆಲ್ಲಾ ದೊಡ್ಡ ಹಗರಣವಾಗಿರೋದ್ರಿಂದ ಮೋದಿಯವರಿಗೆ, ಬಿಜೆಪಿಗೆ ಕುಮಾರಸ್ವಾಮಿಯವರಿಗೆ ಕೆಟ್ಟ ಹೆಸರು ತರೋದಕ್ಕೆ ಡಿ.ಕೆ ಶಿವಕುಮಾರ್ ಈ ರೀತಿ ಮಾಡಿದ್ದರು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವ ಹಾಳು ಮಾಡಬೇಕು ಅಂತಾ ಮಾಡಿದ್ರು, ಅವರ ಆಮಿಷಕ್ಕೆ ನಾನು ಒಪ್ಪದೇ ಇದ್ದಾಗ ಮೊದಲಿಗೆ ಅಟ್ರಾಸಿಟಿ ಕೇಸ್ ಹಾಕಿಸಿದ್ದರು. ಅದಕ್ಕೆ ಸರಿಯಾದ ಸಾಕ್ಷಿ ಇಲ್ಲದೆ ಕೇಸು ನಿಲ್ಲಲಿಲ್ಲ ಎಂದು ದೇವರಾಜೇಗೌಡ ಹೇಳಿದ್ದಾರೆ.

ಅದಾದ ಬಳಿಕ ಮತ್ತೊಬ್ಬ ಮಹಿಳೆಯಿಂದ 354a ಕೇಸ್ ಹಾಕಿಸಿದ್ರು, ಆ ಪ್ರಕರಣದಲ್ಲಿ ಕೂಡ ಯಾವುದೇ ದಾಖಲೆ ಇಲ್ಲದೆ ಕೇಸು ಬಿದ್ದೋಯ್ತು. ಈಗ ಅತ್ಯಾಚಾರ ಆರೋಪದಲ್ಲಿ ಬಂಧಿಸಿದ್ದಾರೆ, ಈಗಲೂ ಯಾವುದೇ ದಾಖಲೆ ಸಿಗಲಿಲ್ಲ, ನಾಲ್ಕು ದಿನಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ ಎಂದು ಹೇಳಿದರು.

ಸಿಕ್ಕಿರುವ ಪೆನ್ಡ್ರೈವ್ ಅನ್ನು ಕೋರ್ಟ್ನಲ್ಲಿ ಸೀಜ್ ಮಾಡಿದ್ದಾರೆ. ಅದು ಕಾರ್ತಿಕ್ ಹೆಂಡತಿ ಕಿಡ್ನಾಪ್ ಪ್ರಕರಣ ಪೆನ್ಡ್ರೈವ್, ಆ ಪೆನ್ಡ್ರೈವ್ ಇಲ್ಲದ ಕಾರಣ, ಈ ಪೆನ್ಡ್ರೈವ್ ಹಂಚಿದ್ದಾರೆ ಎಂದು ಹೇಳಿದ್ದಾರೆ.

ಶಿವರಾಮೇಗೌಡ ಅವರ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಎಸ್ಐಟಿ ಇನ್ನೂ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಹುಡುಕಾಟ ಮುಂದುವರೆಸಿದೆ. ಪ್ರಕರಣ ತನಿಖೆಯಾದಂತೆ ಮತ್ತಷ್ಟು ಸ್ಫೋಟಕ ಸಂಗತಿ ಬಯಲಾಗುವ ಸಾಧ್ಯತೆ ಇದೆ.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)