Rain Alert: ಚಿಕ್ಕಮಗಳೂರಲ್ಲಿ ಭರ್ಜರಿ ಮಳೆ, ಪರದಾಡಿದ ಜನ!

Arun Kumar
0

ಮಳೆ.. ಮಳೆ.. ಮಳೆ.. ಹಿಂಗೆ ಜನರು ಭರ್ಜರಿ ಮಳೆ ನೋಡಿ ಫುಲ್ ಖುಷಿಯಾಗಿದ್ದಾರೆ. ಈ ಮಧ್ಯೆ ಬೇಸಿಗೆ ಸಮಯದಲ್ಲಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ರೈತರು ಕೂಡ ಫುಲ್ ಖುಷಿಯಾಗಿದ್ದಾರೆ. ಹಾಗೇ ಮಲೆನಾಡು ಚಿಕ್ಕಮಗಳೂರಲ್ಲಿ ಕೂಡ ಭರ್ಜರಿ ಮಳೆಯ ಆರ್ಭಟ ಶುರುವಾಗಿದ್ದು, ಎಲ್ಲೆಲ್ಲೂ ಬರೀ ನೀರೇ ತುಂಬಿದೆ. ರಸ್ತೆಯಲ್ಲಿ, ನೀರು ತುಂಬಿದ ಪರಿಣಾಮ ವಾಹನ ಸವಾರರು, ಬಸ್ಗಳು ಓಡಾಡಲು ಪರದಾಡಿದವು.

ಚಿಕ್ಕಮಗಳೂರು ನಗರ ಸೇರಿ ಜಿಲ್ಲೆಯಾದ್ಯಂತ ಮಳೆ ಅಬ್ಬರ ಜೋರಾಗಿದ್ದು, ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಭಾರಿ ಗಾಳಿ ಸಹಿತ ಧಾರಾಕಾರ ಮಳೆ ಬಿದ್ದಿದೆ. ಹಾಗೆ ಚಿಕ್ಕಮಗಳೂರಿನ ಮೂಡಿಗೆರೆ, ಕೊಪ್ಪ, ಜಯಪುರ, ಬಾಳೆಹೊನ್ನೂರಿನಲ್ಲಿ ಧಾರಾಕಾರ ಮಳೆ ಬಿದ್ದಿದೆ. ಇನ್ನು ಚಿಕ್ಕಮಗಳೂರು ನಗರ , ಮಲ್ಲೇನಹಳ್ಳಿ, ಖಾಂಡ್ಯ, ಮುತ್ತೋಡಿ ಭಾಗದಲ್ಲಿಯೂ ಭಾರೀ ಮಳೆ ಬಂದಿದ್ದು, ಸುಮಾರು 2 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಕಳೆದ 3 ದಿನಗಳಿಂದಲು ಸಂಜೆ ವೇಳೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಾಗೇ ಬಯಲುಸೀಮೆ ಭಾಗವಾದ ತರೀಕೆರೆ, ಕಡೂರಿನಲ್ಲಿ ಕೂಡ ಸಾಧಾರಣ ಮಳೆ ಬಿದ್ದಿದೆ.

ಮಳೆ ಅಬ್ಬರ ಮತ್ತಷ್ಟು ಹೆಚ್ಚಾಗುತ್ತೆ!
ಹೀಗೆ ಚಿಕ್ಕಮಗಳೂರಿನಲ್ಲಿ ಭಾರಿ ಮಳೆ ಬಿದ್ದಿರುವುದು ಜನರಿಗೆ ಕೂಡ ಖುಷಿ ಕೊಟ್ಟಿದೆ. ಈ ಮೂಲಕ ರೈತರು ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಬಿಸಿಲ ಝಳಕ್ಕೆ ಜನ ಕಂಗಲಾಗಿದ್ದರು. ಆದರೆ ಇದೀಗ ಭರ್ಜರಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ವಾತಾವರಣ ಕೂಡ ಒಂದಷ್ಟು ತಂಪಾಗಿದೆ. ಹೀಗಾಗಿ ಜನರಿಗೆ ನೆಮ್ಮದಿ ಸಿಕ್ಕಂತಾಗಿದೆ. ಇನ್ನು ಹಲವು ದಿನ ಕಾಲ ಇದೇ ರೀತಿ ಮಳೆ ಮುಂದುವರಿಯಲಿದೆ, ಎಂದು ಹವಾಮಾನ ಇಲಾಖೆ ಮಾಹಿತಿ ನೀಡುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)