ಬೆಂಗಳೂರು, ಏಪ್ರಿಲ್, 6: ಬೆಂಗಳೂರಿನಲ್ಲಿ ಸಾರ್ವಜನಿಕರು ಮತ್ತು ಉದ್ಯೋಗಿಗಳ ಅಚ್ಚುಮೆಚ್ಚಿನ ಸಾರಿಗೆಯಾದ ನಮ್ಮ ಮಟ್ರೋ ಭಾರೀ ಜನಮನ್ನಣೆಗೆ ಪಾತ್ರವಾಗಿದೆ. ಆರಂಭವಾದಾಗಿನಿಂದಲೂ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದ್ದರಿಂದ ಈ ಎರಡು ಮಾರ್ಗಗಳಲ್ಲಿ ಹೆಚ್ಚುವರಿಯಾಗಿ 20 ರೈಲುಗಳನ್ನು ಸೇರ್ಪಡೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವ್ಯಾವ ಮಾರ್ಗಗಗಳಲ್ಲಿ ಹಾಗೂ ಯಾವಾಗ ಸೇರ್ಪಡೆ ಮಾಡಲಾಗುತ್ತದೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.
ನೇರಳೆ, ಹಸಿರು ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುತ್ತದೆ. ಅದರಲ್ಲೂ ನೇರಳೆ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆಗೆ ತುಸು ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಈ ಮಾರ್ಗಗಗಳಿಹೆ 20 ಹೆಚ್ಚುವರಿ ಮೆಟ್ರೋ ರೈಲುಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಇದೇ ವರ್ಷಾಂತ್ಯದ ಈ ರೈಲುಗಳ ಪೂರೈಕೆ ಮಾಡುವ ನಿರೀಕ್ಷೆಯಿದೆ ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಇದೀಗ ಪ್ರತಿನಿತ್ಯ ಪೀಕ್ ಅವರ್ನಲ್ಲಿ ಹಾಗೂ ವಾರಾಂತ್ಯ ಬಂತೆಂದರೆ ಸಾಕು ಏಕೈಕ ಇಂಟರ್ಚೇಂಜ್ ನಿಲ್ದಾಣ ಮೆಜೆಸ್ಟಿಕ್, ನೇರಳೆ ಮಾರ್ಗದ ಎಂ.ಜಿ.ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ, ವೈಟ್ ಫೀಲ್ಡ್ ಹಾಗೂ ಹಸಿರು ಮಾರ್ಗದ ನಿಲ್ದಾಣದಲ್ಲಿ ಭಾರೀ ಪ್ರಯಾಣಿಕರ ದಟ್ಟಣೆ ನಿರ್ಮಾಣವಾಗುತ್ತಿದೆ. ಅಷ್ಟೇ ಅಲ್ಲದೆ, ಮೆಟ್ರೋಗಳಲ್ಲಿಯೂ ಪ್ರಯಾಣಿಕರ ದಂಡೇ ಇರುತ್ತದೆ. ಇನ್ನು ಕಳೆದ ಕೇವಲ ಮೂರು ತಿಂಗಳಲ್ಲಿ 6.5 ಲಕ್ಷ ದಿಂದ 7.5 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು 2019ರ ಬಿಎಂಆರ್ಸಿಎಲ್ ಚೀನಾದ ಸಿಆರ್ಆರ್ ಒಪ್ಪಂದದಂತೆ 216 ಬೋಗಿಗಳು (36 ರೈಲು) ಮಹಮಾರಿ ಕೋವಿ, ಮೇಡ್ ಇನ್ ಇಂಡಿಯಾ ಪಾಲಿಸಿ ಸೇರಿ ಇತರೆ ತಾಂತ್ರಿಕ ಕಾರಣದಿಂದ ನಿರೀಕ್ಷಿಸಿದ ಸಮಯಕ್ಕೆ ಬಂದಿಲ್ಲ. ಕಳೆದ ಫೆಬ್ರವರಿಯಲ್ಲಿ ಹಳದಿ ಮಾರ್ಗಕ್ಕೆ ಬೇಕಾದ 6 ಬೋಗಿಯ ಒಂದು ರೈಲು ಚೀನಾದಿಂದ ಬಂದಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಮತ್ತೊಂದು ಚಾಲಕರಹಿತ ರೈಲು ಪೂರೈಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.