ಬೆಂಗಳೂರು, ಏಪ್ರಿಲ್ 09: ಕರ್ನಾಟಕ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಬಿಸಿಲಿನ ಶಾಖ ಹೆಚ್ಚಾಗಿದೆ. ಉತ್ತರ ಭಾರತದ ಒಂದೆರಡು ರಾಜ್ಯಗಳಲ್ಲಿ ಮಳೆ ಆಗಿದೆ. ಈ ಬಾರಿ ಜೂನ್ ನಿಂದ ಆಗಮಿಸುವ ಮುಂಗಾರು ಮಳೆ (Monsoon Rain) ಶೇಕಡಾ 102ರಷ್ಟು ಸುರಿಯಲಿದೆ ಎಂದು 'ಸ್ಕೈಮೇಟ್' (Skymet) ಹವಾಮಾನ ಸೇವಾ ಕಂಪನಿ ಮಾಹಿತಿ ನೀಡಿದೆ.
ದೇಶದಲ್ಲಿ ಜೂನ್ ನಿಂದ ಸೆಪ್ಟಂಬರ್ ವರೆಗೆ ದೀರ್ಘಾವಧಿಯ ಸರಾಸರಿಯ (LPA) ಪ್ರಮಾಣ ನೋಡಿದರೆ ವಾಡಿಕೆ ಯಷ್ಟು ಮುಂಗಾರು ಮಳೆ (ಶೇ.102) ಆಗಲಿದೆ. ಮಳೆಗಾಲದ ಈ ನಾಲ್ಕು ತಿಂಗಳ ಅವಧಿಯಲ್ಲಿ (LPA) ಹವಾಮಾನ ಇಲಾಖೆ ಪ್ರಕಾರ 868.6mm ವಾಡಿಕೆ ಮಳೆ ಆಗಬೇಕು. ಮುನ್ಸೂಚನೆ ಪ್ರಕಾರ ಶೇಕಡಾ 96-104ರಷ್ಟು ಆಗುವ ಸಂಭವವಿದೆ. ಇದು ವಾಡಿಕೆಯ ಪ್ರಮಾಣದ ಮಳೆ ಎಂದು ಮಂಗಳವಾರ ಖಾಸಗಿ ಕಂಪನಿಯ ತಜ್ಞರು ತಿಳಿಸಿದ್ದಾರೆ.
ಮುಂಗಾರು ಮಳೆಗೆ ಉತ್ತಮ ವಾತಾವರಣ
ಪೆಸಿಫಿಕ್ ಮಹಾಸಾಗರದ ಎಲ್ನಿನೋ ವಾತಾವರಣವು ಅಸಾಮಾನ್ಯ ತಾಪಮಾನದಿಂದ ನಿರೂಪಿಸಲ್ಪಟ್ಟಿದೆ. ಇದರಿಂದಲೇ ಭಾರತದಲ್ಲಿ ಬೇಸಿಗೆ ವಾತಾವರಣ ಸೃಷ್ಟಿಯಾಗಿದೆ. ಲಾ ನಿನಾಗೆ ವೇಗವಾಗಿ ತಿರುಗುತ್ತಿದ್ದು, ಎಲ್ನಿನೋ ವಿರುದ್ಧವಾಗಿ ಇದು ಪೂರ್ವ ಪೆಸಿಫಿಕ್ ಸಾಗರದಲ್ಲಿ ತಂಪು ಪ್ರವಾಹಗಳಿಂದ ರೂಪಿತವಾಗಿದೆ. ಇವುಗಳು ಜೂನ್ ವೇಳೆಗೆ ಮುಂಗಾರು ಆರ್ಭಟಕ್ಕೆ ಪೂರಕವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ.
ವಿಶ್ವ ಹವಾಮಾನ ಸಂಸ್ಥೆ (WMO) ಮಾರ್ಚ್ನಲ್ಲಿ ಎಲ್ ನಿನೊ ದಾಖಲೆಯಲ್ಲಿ ಪ್ರಬಲವಾಗಿದೆ ಎಂದು ಹೇಳಿತ್ತು. ಅದು ಈಗ ದುರ್ಬಲಗೊಳ್ಳುತ್ತಿದೆ. ಇದು ಈಗಾಗಲೇ ಕನಿಷ್ಠ ಅರ್ಧದಷ್ಟು ಜಾಗತಿಕ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಜೂನ್ ಸಮೀಪಿಸುತ್ತಿದ್ದಂತೆ ಈ ಎಲ್ನಿನೋ ಮಾನ್ಸೂನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮುಂಗಾರು ಮಳೆಗೆ ಸಕಾರಾತ್ಮಕ ವಾತಾವರಣ ನಿರ್ಮಿಸಿಕೊಡಲಿದೆ ಎನ್ನಲಾಗಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.