Lok Sabha Election: ಭಾರಿ ಸದ್ದು ಮಾಡ್ತಿದೆ ಕುರುಡು ಕಾಂಚಾಣ: 4650 ಕೋಟಿ ರೂ. ಹಣ ಜಪ್ತಿ ದಾಖಲೆ

Arun Kumar
0

ದೇಶದಲ್ಲಿ ಚುನಾವಣಾ ಕಾವು ಏರುತ್ತಲೇ ಇದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಮತದಾರರನ್ನು ತಮ್ಮತ್ತ ಸೆಳೆಯಲು ಪಕ್ಷಗಳ ಅಭ್ಯರ್ಥಿಗಳು ಭಿನ್ನ ವಿಭಿನ್ನ ತಂತ್ರಕ್ಕೆ ಮಣೆ ಹಾಕುತ್ತಿವೆ. ಮೊದಲ ಹಂತದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇನ್ನು ಚುನಾವಣಾ ಅಧಿಕಾರಿಗಳು ದೇಶದಲ್ಲಿ ಒಟ್ಟು ಜಪ್ತಿ ಮಾಡಿದ ಹಣ ಹಾಗೂ ಮಧ್ಯದ ಬಗ್ಗೆ ಮಾಹಿತಿಯನ್ನು ನೀಡಿದೆ. ಸೀಜ್ ಆದ ಹಣ ಎಷ್ಟು ಎಂದು ತಿಳಿದರೆ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವುದು ಗ್ಯಾರಂಟಿ.

ಲೋಕಸಭಾ ಚುನಾವಣೆಯ ಹಿನ್ನೆಯಲ್ಲಿ ಚುನಾವಣಾ ಅಧಿಕಾರಿಗಳು ಒಟ್ಟು 4650 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಹಣದಲ್ಲಿ ಶೇಕಡಾ 45 ರಷ್ಟು ಮಾದಕ ದ್ರವ್ಯದಿಂದ ಬಂದಿದೆ.

ಕಳೆದ ಬಾರಿಗಿಂತ ಶೇ.34 ಹೆಚ್ಚು
ಕಳೆದ ಒಂದು ತಿಂಗಳಲ್ಲಿ ವಶಪಡಿಸಿಕೊಂಡ ಅಕ್ರಮ ಹಣವು 2019 ರ ಲೋಕಸಭಾ ಚುನಾವಣೆಯ ವೇಳೆ ವಶಪಡಿಸಿಕೊಂಡ ಅಂಕಿ ಅಂಶವನ್ನು ಮೀರಿದೆ. ಮಾರ್ಚ್ 1ರಿಂದ ಪ್ರತಿದಿನ ಚುನಾವಣಾ ಆಯೋಗದ ಅಧಿಕಾರಿಗಳು ಸುಮಾರು 100 ಕೋಟಿ ರೂಪಾಯಿ ಅಕ್ರಮ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲ, ಈ ಬಾರಿ ಖರ್ಚು ಮಾಡಿರುವ ಮೊತ್ತ 75 ವರ್ಷಗಳ ಲೋಕಸಭೆ ಚುನಾವಣೆ ಇತಿಹಾಸದಲ್ಲೇ ಅತಿ ಹೆಚ್ಚು.

2019ರ ಲೋಕಸಭೆ ಚುನಾವಣೆಗೂ ಮುನ್ನ 3475 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದುವರೆಗಿನ ದಾಖಲೆಯಾಗಿತ್ತು. ಈ ಬಾರಿಯ ಚುನಾವಣೆಗೆ ಇನ್ನು ದಿನಗಣನೇ ಆರಂಭವಾದ ಬೆನ್ನಲ್ಲೆ ಕಳೆದ ಬಾರಿಯ ಅಂಕಿ ಅಂಶವನ್ನು ಮೀರಿದ್ದು ದಾಖಲೆಯಾಗಿದೆ. ಕಳೆದ ಲೋಕಸಭಾ ಚುನಾವಣೆಗಿಂತ ಹೆಚ್ಚು ಹಣ ಈ ಬಾರಿ ಓಡಾಡುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)