ಮಾಲ್ಡೀವ್ಸ್ ಬುಡಕ್ಕೆ ಬೆಂಕಿ, ಸರಿಯಾಗಿ ಶಾಸ್ತಿ ಮಾಡಿದ ಭಾರತ!

Arun Kumar
0

ಭಾರತದ ಜೊತೆ ಕಿರಿಕ್ ಮಾಡಿಕೊಂಡು ಪರದಾಡುತ್ತಿರುವ ಮಾಲ್ಡೀವ್ಸ್ ದೇಶಕ್ಕೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಒಂದು ಕಡೆ ಪ್ರವಾಸಿಗರೇ ಇಲ್ಲದೆ ಪರದಾಡುತ್ತಿರುವ ಮಾಲ್ಡೀವ್ಸ್ ದೇಶಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಇಷ್ಟೆಲ್ಲಾ ಸಂಕಷ್ಟ ಇದ್ದರೂ ಭಾರತದ ಜೊತೆಗೆ ಮಾಲ್ಡೀವ್ಸ್ ಕಿರಿಕ್ ಮುಂದುವರಿಸಿದ ಕಾರಣ, ಭಾರತ ಸರಿಯಾಗಿಯೇ ಆಘಾತ ನೀಡಿದೆ! ಹಾಗಾದರೆ ಆ ಆಘಾತ ಏನು? ಮುಂದೆ ಓದಿ.

ಭಾರತ & ಮಾಲ್ಡೀವ್ಸ್ ಸಂಬಂಧ ಸರಿ ಹೋಗದೆ ಇರುವ ಮಟ್ಟಕ್ಕೆ ಹಾಳಾಗಿದೆ. ಹೀಗಿದ್ದರೂ ನಿತ್ಯ ಮಾಲ್ಡೀವ್ಸ್ ಹೊಸ ಅಧ್ಯಕ್ಷ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡ್ತಾನೆ ಇದ್ದಾರೆ. ಈಗಲೂ ಅಷ್ಟೇ ಭಾರತೀಯ ಸೈನಿಕರು ಮಾಲ್ಡೀವ್ಸ್ ದೇಶ ಬಿಟ್ಟು ಹೋಗುವ ಬಗ್ಗೆ ಪದೇ ಪದೇ ಹೇಳಿಕೆ ನೀಡಿ, ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತವೂ ದೊಡ್ಡ ಆಘಾತ ನೀಡಿದೆ. ಅದರಲ್ಲೂ ಭಾರತ ವಿರೋಧಿ ಮಾಲ್ಡೀವ್ಸ್ ದೇಶ ಇನ್ನು ಮುಂದೆ ಅನ್ನ ತಿನ್ನುವಾಗಲೂ ಒಂದೊಂದು ತುತ್ತಿಗೂ ಲೆಕ್ಕ ಇಟ್ಟು ತಿನ್ನಬೇಕು, ಹಂಗೆ ಮಾಡಿದೆ!

ಭಾರತ ಇಲ್ಲದೆ ಮಾಲ್ಡೀವ್ಸ್ ಬದುಕಲ್ಲ!
ಭಾರತದ ರೀತಿ ಮಾಲ್ಡೀವ್ಸ್ ತನಗೆ ಬೇಕಾದ ವಸ್ತುಗಳನ್ನ ತಾನೇ ಉತ್ಪಾದನೆ ಮಾಡಿಕೊಂಡ ದೇಶ ಅಲ್ಲ. ಅದರ ಬದಲು ಬೇರೆ ಬೇರೆ ದೇಶದ ಬಳಿ ಬೇಡುತ್ತಾ ಪರಾವಲಂಬಿ ಜೀವನ ನಡೆಸುತ್ತಿರುವ ದೇಶ ಮಾಲ್ಡೀವ್ಸ್. ಇಷ್ಟಾದ್ರೂ ಮಾಲ್ಡೀವ್ಸ್ ದೇಶದ ರಾಜಕಾರಣಿಗಳ ಅಹಂಕಾರ ಕಡಿಮೆ ಆಗಿಲ್ಲ ಎನ್ನಬಹುದು. ಪರಿಸ್ಥಿತಿ ಹೀಗಿದ್ದರೂ ಭಾರತ ಮಾತ್ರ ಮಾಲ್ಡೀವ್ಸ್ಗೆ ಬೇಕಾದ ಅಗತ್ಯ ವಸ್ತು ಪೂರೈಕೆ ಮಾಡುತ್ತಿದೆ. ಇದರ ಜೊತೆಗೆ ಕಠಿಣ ಷರತ್ತು ವಿಧಿಸಿರುವ ಭಾರತ, ಮಾಲ್ಡೀವ್ಸ್ಗೆ ಭರ್ಜರಿ ಶಾಕ್ ಕೊಟ್ಟಿದೆ!

ಕಸ್ಟಮ್ಸ್ ಹದ್ದಿನ ಕಣ್ಣಲ್ಲಿ ಆಹಾರ ಸರಬರಾಜು!

ಹೌದು ಭಾರತ ಇದೀಗ ಮಾಲ್ಡೀವ್ಸ್ ದೇಶಕ್ಕೆ ಸರಬರಾಜು ಆಗುವ ಅಕ್ಕಿ, ಗೋಧಿ & ಈರುಳ್ಳಿ ಸೇರಿದಂತೆ ಇತ್ಯಾದಿ ಅಗತ್ಯ ವಸ್ತು ರಫ್ತು ಮೇಲೆ ನಿಗಾ ಇಟ್ಟಿದೆ. ಇದೇ ಕಾರಣಕ್ಕೆ ಇನ್ನುಮುಂದೆ ಅಗತ್ಯ ವಸ್ತುಗಳನ್ನ ಸರಬರಾಜು ಮಾಡುವ ಸಮಯದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅದನ್ನ ಪರಿಶೀಲನೆ ಮಾಡಲಿದ್ದಾರೆ. DGFT ನೀಡಿರುವ ಸೂಚನೆ ಪ್ರಕಾರ, ಮುಂದ್ರಾ & ತೂತುಕುಡಿ ಸೇರಿದಂತೆ ಕೇವಲ 4 ಬಂದರುಗಳ ಮೂಲಕ, ಮಾಲ್ಡೀವ್ಸ್ಗೆ ಅಗತ್ಯ ವಸ್ತುಗಳ ಸರಬರಾಜು ಮಾಡಲು ಸೂಚನೆ ನೀಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)