ಹುಬ್ಬಳ್ಳಿ, ಏಪ್ರಿಲ್ 14: ರಾಜ್ಯದಲ್ಲಿ ಅಲ್ಲಲ್ಲಿ ಬಿರುಗಾಳಿ ಸಹಿತ ಜೋರು ಮಳೆ ಆಗುತ್ತಿದೆ. ಸಿಡಿಲಿಗೆ ಒಂದೆರಡು ಸಾವುಗಳು ಸಂಭವಿಸಿವೆ. ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ 5 ಗಂಟೆಗೆ ವಿವಿಧೆಡೆ ಧಾರಾಕಾರವಾಗಿ ಜೋರು ಮಳೆ ಸುರಿಯಿತು.
ಜಿಲ್ಲೆಯ ಕಲಘಟಗಿ ತಾಲೂಕು ಸೇರಿದಂತೆ ಹಲವು ಗ್ರಾಮಗಳಲ್ಲಿ ರಾತ್ರಿಯಿಡಿ ಮಳೆ ಮುಂದುವರೆಯಿತು. ಜೋರು ಗಾಳಿ ಮತ್ತು ಮಳೆ ರಭಸಕ್ಕೆ ತೋಟಗಾರಿಕೆ ಬೆಳಯಾದ ಮಾವು, ಬಾಳೆಗೆ ಹಾನಿ ಯಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಈ ಮಳೆ ಬರಗಾಲದಿಂದ ಕಂಗೆಟ್ಟ ರೈತರಿಗೆ ಮತ್ತೆ ಬರೆ ಎಳೆದಿದೆ.
ಪ್ರತಿ ಹಂತದಲ್ಲೂ ರೈತರ ಬೆಳೆದ ಮಾವು ಬಾಳೆಗಿಡ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಿದೆ. ಸತತ ನಾಲ್ಕು ವರ್ಷದಿಂದ ತಾಲೂಕಿನ ರೈತ ವರ್ಗ ನಿರಾಶೆ ಭಾವನೆ ಕಾಡುತ್ತಿದೆ. ಇದರಿಂದ ಎಷ್ಟೋ ರೈತ ವರ್ಗಕ್ಕೆ ಸಮಯಕ್ಕೆ ಸರಿಯಾಗಿ ಬರಗಾಲದಿಂದ ಯಾವುದೇ ರೀತಿಯ ಪರಿಹಾರವನ್ನು ಸರ್ಕಾರ ನೀಡಿಲ್ಲ.
ಪ್ರತಿ ಹಂತದಲ್ಲಿ ರೈತರಿಗೆ ನಷ್ಟ, ಸರ್ಕಾರದಿಂದ ಅನ್ಯಾಯ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಧೋರಣೆಯ ನೀತಿಯಿಂದ ಪ್ರತಿ ಹಂತದಲ್ಲೂ ರೈತರಿಗೆ ಅನ್ಯಾಯವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತಾಲೂಕಿನ ರೈತ ವರ್ಗದವರ ಏಳಿಗೆಗೆ ಸರ್ಕಾರ ಮುಂದಾಗ ಬೇಕಾಗಿದೆ. ರೈತರ ಬೆಳೆದ ಬೆಳಗೆ ಮಾರುಕಟ್ಟೆಯಲೆ ನಿಗದಿತ ದರವು ಇಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಬರ ಪರಿಹಾರ ನೀಡಲು ರೈತರು ಆಗ್ರಹ
ಮಾರುಕಟ್ಟೆಯ ಏಜೆಂಟರ ಹಾವಳಿಯು ಹೆಚ್ಚಾಗಿದ್ದು ರಣಬಿಸಿಲಿಗೆ ಕೊಳವೆಬಾವಿ ನೀರು ಇಲ್ಲದೆ ಬೆಳೆಯು ಇಲ್ಲದೆ ಹಾಗೂ ಅತಿವೃಷ್ಟಿ ಹೀಗೆ ಹತ್ತು ಹಲವು ಸಮಸ್ಯೆಗಳು ರೈತ ವರ್ಗದವರಿಗೆ ಕಾಡುತ್ತಿದೆ. ಆದರೂ ರೈತ ವರ್ಗದವರು ಧೃತಿಗೆಡಬಾರದು ಧಾರವಾಡ ಜಿಲ್ಲೆಯಾದ್ಯಂತ ರೈತರಿಗೋಸ್ಕರ ಬರಗಾಲದ ಪ್ಯಾಕೇಜ್ ಗಳ ವರದಿಯನ್ನು ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಲು ಮುಂದಾಗಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಈ ಭಾರಿ ಉತ್ತಮ ಮಳೆ ಬರದೆ, ಬಿತ್ತಿದ್ದ ಅಲ್ಪಸ್ವಲ್ಪ ಬೆಳೆಯೂ ಬಾರದೇ ಬರಗಾಲ ಎದುರಿಸಿದ್ದ ರೈತ ಸಾಲದ ಶೂಲಕ್ಕೆ ಸಿಲುಕಿದ್ದಾನೆ. ಜಿಲ್ಲೆಯಾದ್ಯಂತ ಎಷ್ಟು ರೈತರು ಆತ್ಮಹತ್ಯೆಗೆ ಮುಂದಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈಗ ಬರುತ್ತಿರುವ ಮಳೆಯಿಂದ ತೋಟಗಾರಿಕೆ ಬೆಳೆಗೆ ಸಂಕಷ್ಟ ಎದುರಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.