ಬೆಂಗಳೂರು, ಏಪ್ರಿಲ್, 07: ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಪ್ರಮಾಣ ಏರಿಕೆಯಾಗುತ್ತಿದ್ದು, ಬಾಯಾರಿಕೆ ನೀಗಿಸಿಕೊಳ್ಳಲು ಕಾಡುಪ್ರಾಣಿಗಳು ನಾಡಿಗೆ ಬರುತ್ತಿರುವುದನ್ನು ನಾವು ಕಂಡಿದ್ದೇವೆ. ಇದೀಗ ಹಾವೊಂದು ಸೆಖೆ ತಾಳಲಾದೇ ರಸ್ತೆಗಿಳಿದು ನಿಧಾನವಾಗಿ ಸಾಗುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಹಾವು ಯಾವ ಕಲರ್ನಿಂದ ಹಾಗೂ ಇದರ ಉದ್ದ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಟ ಮಟ ಮಧ್ಯಾಹ್ನವೇ ಬಂಗಾರ ಬಣ್ಣದ ಸುಮಾರು 6 ಅಡಿ ಹಾವೊಂದು ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ಈ ಹಾವು ಯಾವ ಜಾತಿಗೆ ಸೇರಿದೆ ಎನ್ನುವ ಮಾಹಿತಿ ಇಲ್ಲ.
ಥೇಟ್ ಬಂಗಾರವನ್ನು ಹೋಲುವ ಈ ಹಾವನ್ನು ನೋಡಲು ಜನಸಾಗರವೇ ನೆರೆದಿದ್ದು, ಈ ವೇಳೆ ಮಧ್ಯದ ರಸ್ತೆಯಲ್ಲಿ ನಿದ್ರಿಸುತ್ತಿದ್ದ ಆ ಹಾವು ಜನರನ್ನು ಕಂಡ ತಕ್ಷಣ ರಸ್ತೆಯನ್ನು ಮೆಲ್ಲಗೆ ದಾಟಲು ಪ್ರಾರಂಭಿಸಿದೆ. ಬಳಿಕ ಈ ಹಾವಿನ ದೃಶ್ಯವನ್ನು ಅಲ್ಲಿ ನೆರೆದಿದ್ದ ಜನರು ಸೆರೆಹಿಡಿದ್ದಾರೆ. ಆದರೆ ಈ ಹಾವು ನಿಜವೋ ಅಥವಾ ಸುಳ್ಳೋ ಎಂಬ ಮಾಹಿತಿ ಇನ್ನು ಸ್ಪಷ್ಟವಾಗಿಲ್ಲ.
ಇದೀಗ ಮಳೆಯಿಲ್ಲ ಎನ್ನುವ ಸಂಕಟ ಒಂದು ಕಡೆಯಾದರೆ. ಮತ್ತೊಂದೆಡೆ ತಾಪಮಾನ ಹೆಚ್ಚುತ್ತಿರುವುದರಿಂದ ಜನರು ಮನೆಯಿಂದ ಹೊರಗಡೆ ಬರಲು ಹೆದರುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮಳೆರಾಯ ಕರುಣೆ ತೋರಿದ್ದು, ಹವಾಮಾನ ಇಲಾಖೆಯ ಪ್ರಕಾರ ಈ ತಿಂಗಳ ಅಂತ್ಯದಲ್ಲಾದರೂ ರಾಜ್ಯದೆಲ್ಲೆಡೆ ಮಳೆರಾಯ ಕರುಣೆ ತೋರುತ್ತಾನಾ ಎಂದು ಕಾದು ನೋಡಬೇಕಿದೆ.
ಇದೀಗ ಜನರು ಮಳೆಯಿಲ್ಲದೆ ರಣ ಭೀಕರ ಬಿಸಿಲಿನಿಂದ ಬೆಂಡಾಗಿದ್ದಾರೆ. ಇಂತಹದ್ದರ ನಡುವೆಯೇ ಹಾವೊಂದು ಮಧ್ಯಾಹ್ನದ ಬಿಸಿಲಿನ ಸಮಯದಲ್ಲಿ ರಸ್ತೆಗಿಳಿದಿದೆ. ಸಾಮಾನ್ಯವಾಗಿ ಬಿಸಿಲಿಗೆ ಹಾವುಗಳು ಬೇಲಿಯಿಂದ ಹೊರಗಡೆ ಬರುತ್ತವೆ ಎನ್ನುವ ಮಾತಿದೆ. ಅದರಂತೆಯೇ ಈ ಹಾವು ಕೂಡ ರಸ್ತೆಗಿಳಿದಿದೆ ಅಂತಲೂ ಹೇಳಬಹುದಾಗಿದೆ. ವಿಶೇಷ ಎಂದರೆ ಎಂದರೆ ಈ ಹಾವು ಸಂಪೂರ್ಣವಾಗಿ ಬಂಗಾರ ಬಣ್ಣದ ಮೈಕಟ್ಟನ್ನು ಹೊಂದಿರುವುದು.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.