ಮುಂಗಾರು 2024: ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಮುನ್ಸೂಚನೆ, ಅಂಕಿ ಅಂಶ ಇಲ್ಲಿದೆ

Arun Kumar
0

ಬೆಂಗಳೂರು, ಏಪ್ರಿಲ್. 15: ಬಿಸಿಲು, ನೀರಿನ ಬಿಕ್ಕಟ್ಟು ಮತ್ತು ಬರದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಭರ್ಜರಿ ಸುದ್ದಿ ನೀಡಿದೆ. ರಾಜ್ಯದಲ್ಲಿನ 2024ರ ದೀರ್ಘಾಕಾಲಿನ ಮುಂಗಾರು ಮಳೆ ಮುನ್ಸೂಚನೆಯ ಮುಖ್ಯಾಂಶಗಳನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಂಚಿಕೊಂಡಿದ್ದು, ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂಬ ಸಿಹಿ ಸುದ್ದಿ ನೀಡಿದೆ.

ಭಾರತೀಯ ಹವಾಮಾನ ಇಲಾಖೆ 2024 ರ ಏಪ್ರಿಲ್ 15 ರಂದು ಸುದ್ದಿಗೋಷ್ಠಿ ಆಯೋಜಿಸಿ 2024ರ ದೀರ್ಘಾಕಾಲಿನ ಮುಂಗಾರು (ಜೂನ್-ಸೆಪ್ಟೆಂಬರ್) ಮಳೆ ಮುನ್ಸೂಚನೆಯನ್ನು ನೀಡಿದೆ. ಇದರ ಪ್ರಕಾರ ಕರ್ನಾಟಕದಲ್ಲಿ ಈ ಬಾರಿ ಸರಾಸರಿಗಿಂತ ಹೆಚ್ಚಿನ ಮಳೆಯಾಗಲಿದೆ ಎಂದಿದೆ.

2024ರ ದೀರ್ಘಾಕಾಲಿನ ಮುಂಗಾರು ಮಳೆ ಮುನ್ಸೂಚನೆಯ ಮುಖ್ಯಾಂಶಗಳು:
2024ರ ಮುಂಗಾರು (ಜೂನ್ ಸೆಪ್ಟೆಂಬರ್) ಅವಧಿಯಲ್ಲಿ ದೇಶದಾದ್ಯಂತ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣದಲ್ಲಿ ಶೇಕಡಾ (+5%) ರಷ್ಟು ವ್ಯತ್ಯಯದೊಂದಿಗೆ ಶೇಕಡಾ 106 ರಷ್ಟು ವಾಡಿಕೆಗಿಂತಾ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದೆ. ಈ ಅವಧಿಗೆ ದೇಶದ ದೀರ್ಘಾವಧಿ (1971-2020) ಸರಾಸರಿ ವಾಡಿಕೆ ಮಳೆ ಪ್ರಮಾಣ 87 ಸೆಂ.ಮೀ ನಷ್ಟಿದೆ.

ಮುಂಗಾರು (ಜೂನ್ - ಸೆಪ್ಟೆಂಬರ್) ಮಳೆ ಮುನ್ಸೂಚನೆ ಅನ್ವಯ ದೇಶದಾದ್ಯಂತ (ದೀರ್ಘಾವಧಿ ಸರಾಸರಿ ಶೇಕಡಾ 104 -110 ರಷ್ಟು) ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ದೇಶದಾದ್ಯಂತ ಕಾಲೋಚಿತ (ಜೂನ್ ನಿಂದ ಸೆಪ್ಟೆಂಬರ್) ಮಳೆಯ ಐದು ವರ್ಗದ ಸಂಭವನೀಯತೆಯ ಮುನ್ಸೂಚನೆಗಳು ನೈಋತ್ಯ ಮಾನ್ಸೂನ್ ಕಾಲೋಚಿತ ಮಳೆಯ ಹೆಚ್ಚಿನ ಸಂಭವನೀಯತೆ (61%) ಸಾಮಾನ್ಯಕ್ಕಿಂತ (>104% LPA) ಎಂದು ಸೂಚಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)