Google Search, ಸಿಗರೇಟ್, ಡ್ರಗ್ಸ್‌ನಂತೆ ಎಂದೆಂದಿಗೂ ಹೆಚ್ಚು ಲಾಭದಾಯಕ ವ್ಯಾಪಾರ ಎಂದವರು ಯಾರು?

Arun Kumar
0

 

ನಮ್ಮ ಉತ್ಪನ್ನವನ್ನು ಎಲ್ಲೆಡೆ ಪಡೆಯಲು ಸ್ಮಾರ್ಟ್ ಮಾರ್ಕೆಟಿಂಗ್/ವಿತರಣಾ ಹೂಡಿಕೆಗಳನ್ನು ಗೂಗಲ್ ಮಾಡಿದೆ ಎಂದು ತಿಳಿಸಿದ್ದಾರೆ.

ಗೂಗಲ್ ಹಣಕಾಸು ವಿಭಾಗದ ಉಪಾಧ್ಯಕ್ಷ ಮೈಕೆಲ್ ರೋಸ್ಜಾಕ್ ಕಂಪನಿಯ ಸರ್ಚ್ ಅಡ್ವರ್ಟೈಸಿಂಗ್ ಬ್ಯುಸಿನೆಸ್ ಅನ್ನು ವಿಶ್ವದ ಶ್ರೇಷ್ಠ ವ್ಯಾಪಾರ (Business) ಮಾದರಿ ಎಂಬುದಾಗಿ ಹೇಳಿದ್ದು, ಇದಕ್ಕೆ ಪ್ರತಿಸ್ಪರ್ಧಿಗಳು ಯಾವುದಾದರೂ ಇರುವುದಿದ್ದರೆ ಅದು ಸಿಗರೇಟ್, ಡ್ರಗ್ಸ್‌ನಂತಹ ವ್ಯಾಪಾರಗಳು ಮಾತ್ರವೇ ಎಂಬ ಹೇಳಿಕೆ ನೀಡಿದ್ದಾರೆ. ನ್ಯಾಯಾಂಗ ಇಲಾಖೆಯು ಆನ್‌ಲೈನ್‌ನಲ್ಲಿ (Online) ಬಿಡುಗಡೆ ಮಾಡಿದ ಡಾಕ್ಯುಮೆಂಟ್‌ನಲ್ಲಿ, ರೋಸ್ಜಾಕ್ ಸರ್ಚ್ ಅಡ್ವರ್ಟೈಸಿಂಗ್ ಬ್ಯುಸಿನೆಸ್ ವಿಶ್ವದ ಶ್ರೇಷ್ಟ ವ್ಯಾಪಾರಗಳಲ್ಲಿ ಒಂದಾಗಿದೆ ಆದರೆ ಇದನ್ನು ಹಿಂದಿಕ್ಕಬಲ್ಲಂತಹ ಪ್ರಬಲ ಸ್ಪರ್ಧಿಗಳೆಂದರೆ ಅಕ್ರಮ ವ್ಯವಹಾರಗಳಾದ ಸಿಗರೇಟ್, ಡ್ರಗ್ಸ್ ಮೊದಲಾದ ಬ್ಯುಸಿನೆಸ್‌ಗಳಾಗಿವೆ ಅದಾಗ್ಯೂ ನಾವು ಅದ್ಭುತವಾದ ಬ್ಯುಸಿನೆಸ್ ಅನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.


ರೋಸ್ಜಾಕ್ ಹೇಳಿಕೆಯನ್ನು ಬಳಸಿಕೊಂಡಿರುವ ನ್ಯಾಯಾಂಗ ಇಲಾಖೆ


ನಮ್ಮ ಉತ್ಪನ್ನವನ್ನು ಎಲ್ಲೆಡೆ ಪಡೆಯಲು ಸ್ಮಾರ್ಟ್ ಮಾರ್ಕೆಟಿಂಗ್/ವಿತರಣಾ ಹೂಡಿಕೆಗಳನ್ನು ಗೂಗಲ್ ಮಾಡಿದೆ ಎಂದು ತಿಳಿಸಿದ್ದಾರೆ. ಇದೇ ಸಮಯದಲ್ಲಿ ನ್ಯಾಯಾಂಗ ಇಲಾಖೆಯು ಗೂಗಲ್ ವಿರುದ್ಧದ ಗೂಗಲ್ ಆ್ಯಂಟಿ ಟ್ರಸ್ಟ್ ಪ್ರಕರಣದಲ್ಲಿ ರೋಸ್ಜಾಕ್ ಹೇಳಿಕೆ ನೀಡಿರುವ ಡಾಕ್ಯುಮೆಂಟ್ ಅನ್ನು ಬಳಸಿದೆ ಅಂತೆಯೇ ಸ್ಪರ್ಧಾತ್ಮಕ ವಿರೋಧಿ ತಂತ್ರಗಳು ಹುಡುಕಾಟ ವ್ಯವಹಾರದಲ್ಲಿ ಪ್ರಬಲ ಸ್ಥಾನವನ್ನು ಕಾಪಾಡಿಕೊಳ್ಳಲು ಗೂಗಲ್‌ಗೆ ಸಹಾಯ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಸರಕಾರ ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.


ಡಾಕ್ಯುಮೆಂಟ್ ಬಳಕೆಯನ್ನು ಆಕ್ಷೇಪಿಸಿರುವ ವಕೀಲರು


ಗೂಗಲ್‌ ಪರವಾಗಿ ಕಾನೂನು ಸಮರಗೈಯ್ಯುತ್ತಿರುವ ವಕೀಲರು ಆ್ಯಂಟಿ ಟ್ರಸ್ಟ್ ಪ್ರಕರಣದಲ್ಲಿ ಡಾಕ್ಯುಮೆಂಟ್ ಅನ್ನು ಬಳಸುವುದನ್ನು ಆಕ್ಷೇಪಿಸಿದ್ದಾರೆ ಅಂತೆಯೇ ವ್ಯವಹಾರಿಕ ದಾಖಲೆಯಾಗಿ ಡಾಕ್ಯುಮೆಂಟ್‌ಗೆ ಮಾನ್ಯತೆ ನೀಡಬಾರದು ಹಾಗೂ ಇದು ಕಂಪನಿಯ ಅಭಿಪ್ರಾಯವನ್ನು ಬಿಂಬಿಸುವುದಿಲ್ಲ ಎಂದು ವಾದಿಸಿದ್ದಾರೆ. ಡಾಕ್ಯುಮೆಂಟ್ ಅನ್ನು ಪಬ್ಲಿಕ್ ಸ್ಪೀಕಿಂಗ್ ತರಗತಿಗಳಿಗಾಗಿ ಸಿದ್ಧಪಡಿಸಲಾಗಿದ್ದು, ಗಮನಸೆಳೆಯುವ ಸೂಚನೆಗಳನ್ನು ಮಾಡಬೇಕು ಎಂಬ ಉದ್ದೇಶದಿಂದ ಇಂತಹ ಹೇಳಿಕೆಗಳನ್ನು ನೀಡಲಾಗಿದೆ ಎಂದು ಗೂಗಲ್ ವಕ್ತಾರರು ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)