ಚೀನಾ ಮತ್ತು ರೊಮೇನಿಯಾ ಭಾರತದ ನಂತರ, ಕ್ರಮವಾಗಿ 283,000 ಮತ್ತು 215,000 ವಲಸಿಗರ ಸಂಖ್ಯೆಯನ್ನು ಹೊಂದಿವೆ.
2021 ರಲ್ಲಿ ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ-ಆಪರೇಷನ್ ಅಂಡ್ ಡೆವಲಪ್‌ಮೆಂಟ್ (OECD) ರಾಷ್ಟ್ರಗಳಿಗೆ ಹೊಸ ವಲಸಿಗರ ಮೂಲದ ದೇಶವಾಗಿ ಭಾರತವು ತನ್ನ ಉನ್ನತ ಸ್ಥಾನವನ್ನು ಕಾಯ್ದುಕೊಂಡಿದೆ. OECD ಯ ಇಂಟರ್ನ್ಯಾಷನಲ್ ಮೈಗ್ರೇಷನ್ ಔಟ್‌ಲುಕ್. ಸೋಮವಾರ (Monday) ಬಿಡುಗಡೆ ಮಾಡಿದ 2023 ವರದಿಯ ಪ್ರಕಾರ, 2021 ರಲ್ಲಿ 407,000 ಭಾರತೀಯರು OECD ರಾಷ್ಟ್ರಗಳಿಗೆ ತೆರಳಿದ್ದಾರೆ ಹಾಗೂ ಇದು 2020 ರಲ್ಲಿ ವಲಸೆ ಹೋದ 220,000 ಭಾರತೀಯರಿಗೆ ಹೋಲಿಸಿದರೆ ಶೇಕಡಾ 86 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ (Report) ಪ್ರಕಟಿಸಲಾಗಿದೆ.
ಚೀನಾ ಮತ್ತು ರೊಮೇನಿಯಾ ಭಾರತದ ನಂತರ, ಕ್ರಮವಾಗಿ 283,000 ಮತ್ತು 215,000 ವಲಸಿಗರ ಸಂಖ್ಯೆಯನ್ನು ಹೊಂದಿವೆ.
OECD ಎಂಬುದು 38 ದೇಶಗಳ ಗುಂಪಾಗಿದೆ, ಇವುಗಳಲ್ಲಿ ಹೆಚ್ಚಿನವು ಹೆಚ್ಚಿನ ಆದಾಯವನ್ನು ಹೊಂದಿವೆ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (HDI) ಅತಿ ಹೆಚ್ಚು ಸ್ಥಾನ ಪಡೆದಿವೆ.
OECD ದೇಶಗಳಿಗೆ ತೆರಳಿದ ಆ ಭಾರತೀಯರಲ್ಲಿ, 133,000 ಜನರು ಈ ರಾಷ್ಟ್ರಗಳ ಪೌರತ್ವವನ್ನು ಪಡೆದುಕೊಂಡಿದ್ದಾರೆ, ಇದು ಎಲ್ಲಾ ದೇಶಗಳಲ್ಲಿ ಅತ್ಯಧಿಕವಾಗಿದೆ.
ಈ ವಲಸಿಗರು ಹೆಚ್ಚಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (56,000), ಆಸ್ಟ್ರೇಲಿಯಾ (24,000) ಮತ್ತು ಕೆನಡಾ (21,000) ರಾಷ್ಟ್ರಗಳ ಪೌರತ್ವವನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.