Cauvery Water: ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್! ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ CWRC ಸೂಚನೆ

Arun Kumar
0

 

ಸಭೆಯಲ್ಲಿ ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ CWRC ಸೂಚನೆ ನೀಡಿದೆ. ಅಕ್ಟೋಬರ್ 16ರಿಂದ ಅಕ್ಟೋಬರ್ 31ರವರೆಗೆ ನೀರು ಹರಿಸುವಂತೆ ಸೂಚನೆ ನೀಡಲಾಗಿದೆ.

ಬೆಂಗಳೂರು: ಕರ್ನಾಟಕಕ್ಕೆ (Karnataka) ಮತ್ತೆ ಕಾವೇರಿ (Cauvery) ಶಾಕ್ ಎದುರಾಗಿದೆ. ತಮಿಳುನಾಡಿಗೆ (Tamil Nadu)ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ CWRC ಸೂಚನೆ ನೀಡಿದೆ. ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೀತು. ಸಭೆಯಲ್ಲಿ ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು (3 thousand cusecs of water) ಹರಿಸುವಂತೆ ಕರ್ನಾಟಕಕ್ಕೆ CWRC ಸೂಚನೆ ನೀಡಿದೆ. ಅಕ್ಟೋಬರ್ 16ರಿಂದ ಅಕ್ಟೋಬರ್ 31ರವರೆಗೆ ನೀರು ಹರಿಸುವಂತೆ ಸೂಚನೆ ನೀಡಲಾಗಿದೆ.


ನಮ್ಮ ಡ್ಯಾಂ ಗಳಿಗೆ 7 ರಿಂದ 10 ಸಾವಿರ ಕ್ಯೂಸೆಕ್ ಒಳ ಹರಿವಿದೆ


ಮತ್ತೆ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ರಾಜ್ಯದಲ್ಲಿ ಎಷ್ಟು ಟಿಎಂಸಿ ನೀರಿದ ಅಂತ ದಾಖಲೆ ತೆಗೆದುಕೊಂಡಿದ್ದಾರೆ. ಅವರ ಡ್ಯಾಂ ನ ಮಾಹಿತಿ ಕೂಡ ತೆಗೆದುಕೊಂಡಿದ್ದಾರೆ. ನಮ್ಮ ಡ್ಯಾಂ ಗಳಿಗೆ 7 ರಿಂದ 10 ಸಾವಿರ ಕ್ಯೂಸೆಕ್ ಒಳ ಹರಿವಿದೆ. ನಮ್ಮ ರೈತರ ರಕ್ಷಣೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ಬಿಳಿಗುಂಡಲಿಗೆ ಎರಡು ದಿನ ಕಡಿಮೆ ನೀರು ಹೋಗಿದೆ. ಬೆಂಗಳೂರಿಗೆ ಮಳೆಯಾದ ಕಾರಣ ಅದು ಬ್ಯಾಲೆನ್ಸ್ ಆಗಿದೆ. ಅದನ್ನ ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದೇವೆ. ಏನೇ ಆದೇಶ ಬಂದರು ನಮ್ಮ ರೈತರ ಹಿತ ಕಾಯುತ್ತೇವೆ ಎಂದು ಹೇಳಿದ್ದಾರೆ.


ನ್ಯಾಯಾಲಯ ಈಗಾಗಲೇ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ


ಮೇಕೆದಾಟು ವಿಚಾರವನ್ನ ಸಾರ್ವಜನಿಕವಾಗಿ ಮಾತನಾಡಲ್ಲ. ಕೇಂದ್ರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಮೇಕೆ ದಾಟು ವಿಚಾರ ನಮ್ಮ ಮೊದಲ ಆದ್ಯತೆ. ಈ ವಿಚಾರವಾಗಿ ಕೋರ್ಟ್ ಮುಂದೆ ವಾದ ಮಾಡುತ್ತಿದ್ದೇವೆ. ಕೋರ್ಟ್ ಮುಂದೆ ಮತ್ತಷ್ಟು ವಾದ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ನ್ಯಾಯಾಲಯ ಈಗಾಗಲೇ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅವರು ಡ್ಯಾಂ ಕಟ್ಟಿ ನಿಮಗೆ 170 ಟಿಎಂಸಿ ನೀರು ಕೊಡುತ್ತಾರೆ ಎಂದು ಮನದಟ್ಟು ಮಾಡಿದೆ. ಮೇಕದಾಟು ಯೋಜನೆ ನಮ್ಮ ಆದ್ಯತೆ.


ಡ್ಯಾಂ ಕಟ್ಟಲು ಭೂಮಿ ತೆಗೆದುಕೊಂಡು ವ್ಯವಸ್ಥೆ ಮಾಡುತ್ತಿದ್ದೇವೆ. ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಬೇಕು. ನಮ್ಮ ಜಮೀನಿನಲ್ಲಿ ನಾವು ಏನು‌ ಬೇಕಾದರು ಮಾಡಬಹುದು. ಸರ್ವೆ ಮಾಡಲು ಯಾರ ಅನುಮತಿಯು ಬೇಕಾಗಿಲ್ಲ. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ.


ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ರಾಜ್ಯದಲ್ಲಿ 192 ತಾಲೂಕು ಬರ ಘೋಷಣೆ ಮಾಡಲಾಗಿದೆ. ಮಳೆ ಬಾರದ ಕಾರಣ ಬರ ಬಂದಿದೆ. ಕಳೆದ ಬಾರಿಗಿಂತ ಅರ್ಧದಷ್ಟು ಮಳೆ ಬಂದಿದೆ. ಕಳೆದ ಬಾರಿ ಡಬಲ್ ಮಳೆಯಾಗಿತ್ತು. ಈಗಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಆದರು ಸರ್ಕಾರ ಇದನ್ನ ಬ್ಯಾಲೆನ್ಸ್ ಮಾಡುತ್ತೆ ಎಂದು ಸಮರ್ಥಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)