Karnataka Politics: ಇಸ್ರೋಗೆ ಪೀಣ್ಯದಲ್ಲಿ ಜಾಗ ಕೊಟ್ಟಿದ್ದು ಮಲ್ಲಿಕಾರ್ಜುನ ಖರ್ಗೆ, ಮರಿಯೋದಿಲ್ಲ; ಬಿಕೆ ಹರಿಪ್ರಸಾದ್ ಹೇಳಿಕೆ

Arun Kumar
0

 

ಹಿಂದೂಳಿದ ವರ್ಗದವರಿಗೆ ಏನಾದರೂ ಮಾಡಿದವರು ಅಂದರೆ ದೇವರಾಜ ಅರಸು, ಬಂಗಾರಪ್ಪನವರು. ನಾನು ಸಿದ್ದರಾಮಯ್ಯ ಅವರ ವಕ್ತಾರ ಅಲ್ಲ ಎಂದು ಬಿಕೆ ಹರಿಪ್ರಸಾದ್​ ಹೇಳಿದ್ದಾರೆ.


ಕಲಬುರಗಿ: ಕಾಂಗ್ರೆಸ್ (Congress) ಪಕ್ಷ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಂಬಿಕೆ ಇಟ್ಟುಕೊಂಡಿದೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು 1981 ರಲ್ಲಿ ಕಂದಾಯ ಸಚಿವರಾಗಿದ್ದಾಗ (Revenue Minister) ಪೀಣ್ಯದಲ್ಲಿ ಇಸ್ರೋಗೆ (ISRO) ಜಾಗ ಕೊಟ್ಟವರು. ಅದೂ ನಾವ್ಯಾರೂ ಮರೆಯೋಕೆ ಆಗಲ್ಲ, ನಾವು ಪ್ರಚಾರ ತೆಗೆದುಕೊಂಡಿರಲಿಲ್ಲ ಎಂದು ಕಾಂಗ್ರೆಸ್​​ ಎಂಎಲ್​​ಸಿ ಬಿಕೆ ಹರಿಪ್ರಸಾದ್ (MLC BK Hariprasad) ಹೇಳಿದ್ದಾರೆ.


ನಾನು ಸಿದ್ದರಾಮಯ್ಯ ವಕ್ತಾರ ಅಲ್ಲ


ಕಲಬುರಗಿಯಲ್ಲಿ ಮಾತನಾಡಿದ ಹರಿಪ್ರಸಾದ್​ ಅವರು, ಸಿದ್ದರಾಮಯ್ಯ ಅವರು ಹಿಂದೂಳಿದ ವರ್ಗದವರನ್ನ ಕಡೆಗಣಿಸ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದರು. ಹಿಂದೂಳಿದ ವರ್ಗ, ಹಿಂದೂಳಿದ ಜಾತಿ ಬಗ್ಗೆ ಬಹಳ ವ್ಯತ್ಯಾಸ ಇದೆ. ಹಿಂದೂಳಿದ ವರ್ಗದ ಬಗ್ಗೆ ಜಾಗೃತಿ ಮೂಡಿಸಿದವರು ದೇವರಾಜ್ ಅರಸು ಅವರು, ಹಿಂದೂಳಿದ ವರ್ಗದವರಿಗೆ ಏನಾದರೂ ಮಾಡಿದವರು ಅಂದರೆ ದೇವರಾಜ ಅರಸು, ಬಂಗಾರಪ್ಪನವರು. ನಾನು ಸಿದ್ದರಾಮಯ್ಯ ಅವರ ವಕ್ತಾರ ಅಲ್ಲ ಎಂದು ಹೇಳಿದ್ದಾರೆ.

ಒನ್ ನೇಷನ್ ಒನ್ ಲೀಡರ್ ಅಂದು ಬಿಡ್ತಾರೆ


ಇದೇ ವೇಳೆ ಬಿಜೆಪಿ ವಿರುದ್ಧವೂ ಕಿಡಿಕಾರಿದ ಹರಿಪ್ರಸಾದ್ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಘೋಷಣೆಗಳಿಗೆ ಏನೂ ಕಮ್ಮಿ ಇಲ್ಲ, ಒನ್ ನೇಷನ್ ಒನ್ ರೇಷನ್, ಒನ್ ನೇಷನ್ ಒನ್ ಎಜುಕೇಷನ್‌ ಹೀಗೆ ಘೋಷಣೆಗಳಿಗೆ ಏನೂ ಕಮ್ಮಿ ಇಲ್ಲ. ಕೊನೆಗೆ ಒನ್ ನೇಷನ್ ಒನ್ ಲೀಡರ್ ಅಂದು ಬಿಡ್ತಾರೆ ಬಿಜೆಪಿ ಅವರು. ಒನ್ ನೇಷನ್ ಒನ್ ಎಲೆಕ್ಷನ್ ಈ ದೇಶದಲ್ಲಿ ನಡೆತಕ್ಕಂತದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)