School Bag: ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ತಗ್ಗಿಸಿದ ಶಿಕ್ಷಣ ಇಲಾಖೆ

Arun Kumar
0
ನಿಮ್ಮ ಮಕ್ಕಳು 1 ರಿಂದ 10ನೇ ತರಗತಿಯ ಒಳಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದಾದರೆ ನೀವು ಈ ಮಾಹಿತಿಯನ್ನು ಅವಶ್ಯವಾಗಿ ಓದಿ. ನಿಮ್ಮ ಮಕ್ಕಳ ಸ್ಕೂಲ್​ ಬ್ಯಾಗ್​ ತೂಕ ನಿಗದಿ ಮಾಡಿ.
1 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಸಹ ಈ ನಿಯಮ ಅನ್ವಯವಾಗುತ್ತದೆ. ಶ್ರೀ ಯಶಪಾಲ ಶರ್ಮಾ ಸಮಿತಿಯ “ಹೊರೆಯಿಲ್ಲದ ಕಲಿಕೆ" 1993 ರ ವರದಿ ಅಧ್ಯಯನದ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದ್ದಾರೆ.
Center for Child And Law,NLSUI ಸಹಯೋಗದೊಂದಿಗೆ ಚರ್ಚೆ ಮಾಡುವ ಮೂಲಕ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಸ್ಕೂಲ್​ ಬ್ಯಾಗ್ ಹೊರೆ ಇಳಿಸುವ ಪ್ರಯತ್ನ ಮಾಡಲಾಗುತ್ತಿದೆ. DSERT ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ.
ವರದಿಯಲ್ಲಿ ವಿಧ್ಯಾರ್ಥಿಗಳು ಅವರ ದೇಹದ ತೂಕದ ಶೇ 10 ರಿಂದ 15ರಷ್ಟು ತೂಕದ ಶಾಲಾ ಬ್ಯಾಗ್ ತೆಗೆದುಕೊಂಡು ಹೋಗಬಹುದು ಎಂದು ಹೇಳಲಾಗುತ್ತಿದೆ.
ಮೂಳೆ ತಜ್ಞರ ಶಿಫಾರಸ್ಸು ಆಧರಿಸಿ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಿದೆ. ಎಷ್ಟೋ ಪಾಲಕರಿಗೂ ಇದು ನಿರಾಳವಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)