ಚಾಮರಾಜನಗರ: ಶಾಲಾ ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಯಳಂದೂರು ತಾಲೂಕು ಕುಂತೂರು ಬೆಟ್ಟದ ಬಳಿ ಸೆರೆ ಹಿಡಿಯಲಾಗಿದೆ.
ಅಂದಾಜು 6 ವರ್ಷದ ಗಂಡು ಚಿರತೆ ಅರಣ್ಯಾಧಿಕಾರಿಗಳ ಬೋನಿಗೆ ಬಿದ್ದಿದೆ. ಬಾಲಕನ ಮೇಲೆ ಚಿರತೆ ದಾಳಿ ನಡೆಸಿದಂದಿನಿಂದಲೂ ಮಕ್ಕಳು ಶಾಲೆಗೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಚಿರತೆ ಭೀತಿಯ ಹಿನ್ನೆಲೆಯಲ್ಲಿ ಶಾಲೆಯ ಮುಂದೆ ಸಿಬ್ಬಂದಿ ನಿಯೋಜನೆ ಮಾಡಿ ಅರಣ್ಯ ಇಲಾಖೆ ಬಂದೋಬಸ್ತ್ ಮಾಡಿತ್ತು. ಚಿರತೆಯನ್ನು ಬೇಗನೇ ಸೆರೆಹಿಡಿಯುವಂತೆ ಮಲ್ಲಿಗೆಹಳ್ಳಿ ಹಾಗೂ 6-7 ಗ್ರಾಮದ ಜನತೆ ಒತ್ತಾಯಿಸಿದ್ದರು. ಇದೀಗ ಚಿರತೆಯನ್ನು ಸೆರೆ ಹಿಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.