ಚಾರ್ಮಾಡಿ ಘಾಟ್‌ ನಲ್ಲಿ ಪೊಲೀಸರ ನಿಯೋಜನೆ ಬಳಿಕ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ!

Arun Kumar
0

 

ಚಿಕ್ಕಮಗಳೂರು: ಚಾರ್ಮಾಡಿ ಘಾಟ್‌ ನಲ್ಲಿ ಪ್ರವಾಸಿಗರ ಕಾಟ ತಾಳಲಾರದೇ ಪೊಲೀಸರನ್ನು ನಿಯೋಜಿಸಲಾಗಿರುವ ವಿಚಾರ ಹಳೆಯ ಸಂಗತಿ, ಆದ್ರೆ ಇದೀಗ ಹೊಸ ವಿಶೇಷ ಏನಂದ್ರೆ, ಚಾರ್ಮಾಡಿ ಘಾಟ್ ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಂತೆಯೇ ದೇವರಮನೆಗುಡ್ಡದ ರಸ್ತೆ ಬಳಿ ಪ್ರವಾಸಿಗರು ಮೋಜುಮಸ್ತಿಯಲ್ಲಿ ತೊಡಗಿರುವ ಘಟನೆ ನಡೆದಿದೆ.

ಯುವಕರು ರಸ್ತೆ ಬದಿ ಕಾರು ನಿಲ್ಲಿಸಿ, ಕಾರಿನಲ್ಲಿ ಹಾಡು ಪ್ಲೇ ಮಾಡುತ್ತಾ, ಬಿಯರ್ ಕುಡಿದುಕೊಂಡು ಹುಚ್ಚಾಟ ನಡೆಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಐತಿಹಾಸಿಕ ಕಾಲಭೈರವೇಶ್ವರ ಸ್ವಾಮಿ ದೇಗುಲ ಇರುವ ಈ ಪ್ರದೇಶಕ್ಕೆ ದಿನನಿತ್ಯ ಪ್ರಕೃತಿಯ ಸೊಬಗು ಆಸ್ವಾದಿಸಲು ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ,  ಆದ್ರೆ ಕೆಲವು ಪ್ರವಾಸಿಗರ ಅತಿರೇಕದ ವರ್ತನೆ ಇತರ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುವಂತಾಗಿದೆ.

ಕಣ್ಣಿನ ದೃಷ್ಟಿ ಮುಗಿದರೂ ಮುಗಿಯದ ಹಚ್ಚ ಹಸಿರ ಮುತ್ತೈದೆ ಸೊಬಗು ಇರುವ ಈ ಪ್ರದೇಶಕ್ಕೆ ಕುಟುಂಬ ಸಮೇತರಾಗಿ ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಪ್ರದೇಶದಲ್ಲಿ ಯುವಕರ ಹುಚ್ಚಾಟಕ್ಕೆ ಕಡಿವಾಣ ಬೀಳಬೇಕಿದೆ ಅನ್ನೋ ಆಕ್ರೋಶದ ಮಾತುಗಳು ಕೇಳಿ ಬಂದಿವೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)