Bengaluru: ಮದ್ಯದ ಅಮಲಿನಲ್ಲಿ ಯುವತಿ ಹುಚ್ಚಾಟ; ಬೈಕ್​ಗಳಿಗೆ ಬೆಂಕಿ ಹಚ್ಚಿದ ಪುಂಡರು

Arun Kumar
0

Bengaluru News: ಬೆಂಕಿ ಹಚ್ಚಿ ಕಿಡಿಗೇಡಿಗಳು ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಕುಡಿದ ಅಮಲಿನಲ್ಲಿ ಯುವತಿ (Drunkard Girl) ರಂಪಾಟ ಮಾಡಿದ ಘಟನೆ ಬೆಂಗಳೂರಿನ (Bengaluru) ಚರ್ಚ್ ಸ್ಟ್ರೀಟ್​​ನಲ್ಲಿ ತಡರಾತ್ರಿ ನಡೆದಿದೆ. ಮದ್ಯದ ಮತ್ತಲ್ಲಿ ತೇಲಾಡಿ ಯುವತಿಯೊಬ್ಬಳು ನ್ಯೂ ಸೆನ್ಸ್ ಕ್ರಿಯೇಟ್ ಮಾಡಿದ್ದಾಳೆ. ಅಲ್ಲದೇ ಬುದ್ದಿ ಹೇಳೋಕೆ ಹೋದವರ ಮೇಲೂ ಮುಗಿಬಿದ್ದಿದ್ದಾಳೆ. ಮಹಿಳಾ ಪೊಲೀಸ್ (Woman Police) ಸಿಬ್ಬಂದಿ ಇಲ್ಲದ ಕಾರಣ ಯುವತಿಯನ್ನ ಆಟೋದಲ್ಲಿ (Auto) ಕೂರಿಸಿ ಕಳಿಸಲು ಪರದಾಡಿದ್ರು. ಬೇರೆ ಯುವತಿಯರ ಸಹಾಯದಿಂದ ಪಾನಮತ್ತಳಾಗಿದ್ದ ಯುವತಿಯನ್ನ ಮನೆಗೆ ಕಳಿಸಲು ಪೊಲೀಸರು (Police) ಸರ್ಕಸ್ ಮಾಡಬೇಕಾಯ್ತು. ಯುವತಿ ಗಲಾಟೆ ಮಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರದಾಡುತ್ತಿವೆ.


ಬೈಕ್‌ಗಳಿಗೆ ಕಿಡಿಗೇಡಿಗಳ ಬೆಂಕಿ


ಬೆಂಗಳೂರಿನ ವಸಂತನಗರದಲ್ಲಿ 5 ಬೈಕ್‌ಗಳಿಗೆ ಬೆಂಕಿ ಹಚ್ಚಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಘಟನೆಯಲ್ಲಿ ಐದು ಬೈಕ್‌ಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.


ಬೆಂಕಿ ಹಚ್ಚಿ ಕಿಡಿಗೇಡಿಗಳು ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೈಕ್​ಗೆ ಡಿಕ್ಕಿ ಹೊಡೆದ ಕಾರ್


ಹೊಸಕೋಟೆಯ (Hosakote) ಕಮ್ಮಸಂದ್ರ ಗೇಟ್ ಬಳಿ ಭಯಾನಕ ಅಪಘಾತವಾಗಿದೆ. ನಿಲ್ಲಿಸಿದ ಬೈಕ್‌‌ಗೆ ಕಾರು ಡಿಕ್ಕಿ ಹೊಡೆದು ಮರಕ್ಕೆ ಗುದ್ದಿದೆ. ಬೈಕ್ ಪಕ್ಕದಲ್ಲೇ ನಿಂತಿದ್ದ ಸವಾರರು ಅಪಾಯದಿಂದ ಪಾರಾಗಿದ್ದಾರೆ.


ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಕಾರು, 2 ಬೈಕ್‌ಗಳು ಸಂಪೂರ್ಣ ಜಖಂ ಆಗಿವೆ. ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತಕ್ಕೆ ಅತಿ ವೇಗವೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)