1,000 ಕೋಟಿ ರೂ.ಗಳ ಬಿಹಾರ ಎನ್ ಜಿಓ ಹಗರಣ: ಸಿಬಿಐ ಖೆಡ್ಡಾಕ್ಕೆ ಬಿದ್ದ ಪ್ರಮುಖ ಆರೋಪಿ

Arun Kumar
0


ಬಿಹಾರ ಮೂಲದ ಲಾಭರಹಿತ ಸಂಸ್ಥೆ (ಎನ್ ಜಿಒ) ಶ್ರೀಜನ್ ಮಹಿಳಾ ವಿಕಾಸ್ ಸಹಯೋಗ್ ಸಮಿತಿ ಲಿಮಿಟೆಡ್ ಗೆ ಸಂಬಂಧಿಸಿದ 1,000 ಕೋಟಿ ರೂಪಾಯಿಗಳ ಹಗರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.

ಬಿಹಾರ ನ್ಯಾಯಾಲಯ ಹೊರಡಿಸಿದ ಜಾಮೀನು ರಹಿತ ವಾರಂಟ್ ಆಧಾರದ ಮೇಲೆ ಎನ್ ಜಿಒ ಕಾರ್ಯದರ್ಶಿ ರಜನಿ ಪ್ರಿಯಾ ಅವರನ್ನು ಸಿಬಿಐ ಬಂಧಿಸಿದೆ. ನಕಲಿ ದಾಖಲೆಗಳನ್ನು ಬಳಸಿಕೊಂಡು ಸರ್ಕಾರಿ ಹಣವನ್ನು ಎನ್ ಜಿಒ ಖಾತೆಗಳಿಗೆ ತಿರುಗಿಸಲು ಎನ್ ಜಿಒ ಅಧಿಕಾರಿಗಳು ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾದ ಪ್ರತಿನಿಧಿಗಳೊಂದಿಗೆ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ದಾಖಲೆಗಳ ತಿರುಚುವಿಕೆಯ ಮೂಲಕ 1000 ಕೋಟಿ ರೂ.ಗಳ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಿಬಿಐ 24 ಪ್ರಕರಣಗಳನ್ನು ದಾಖಲಿಸಿತ್ತು.
ಎನ್ ಜಿಒ ಸಂಸ್ಥಾಪಕರ ಸಾವಿನ ನಂತರ ಈ ಹಗರಣ ಬೆಳಕಿಗೆ ಬಂದಿದೆ. ಮೃತ ಸ್ಥಾಪಕನ ಸೊಸೆ ರಜನಿ ಪ್ರಿಯಾ ತನಿಖೆ ಆರಂಭದಿಂದಲೂ ಅಧಿಕಾರಿಗಳಿಂದ ತಪ್ಪಿಸಿಕೊಂಡಿದ್ದರು.

‘ಆಕೆಯನ್ನು ನ್ಯಾಯಾಲಯವು ಘೋಷಿತ ಅಪರಾಧಿ ಎಂದು ಘೋಷಿಸಿದೆ. ಕಠಿಣ ಪ್ರಯತ್ನಗಳ ನಂತರ, ಸಿಬಿಐ ಅವಳನ್ನು ಸಾಹಿಬಾಬಾದ್ (ಉತ್ತರ ಪ್ರದೇಶ) ನಲ್ಲಿ ಪತ್ತೆಹಚ್ಚಿತು ಮತ್ತು ಬಂಧಿಸಿತು’ ಎಂದು ಸಿಬಿಐ ಹೇಳಿದೆ. ಬಿಹಾರ ಸರ್ಕಾರದ ಕೋರಿಕೆಯ ಮೇರೆಗೆ ಸಿಬಿಐ ಈ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)