ಬೆಳ್ತಂಗಡಿ: ಮಣಿಪುರದಲ್ಲಿ ಗಲಭೆ ಹಾಗೂ ಮಹಿಳೆಯರನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿರುವುದು, ಗಲಭೆ ನಿಯಂತ್ರಣಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿರುವುದನ್ನು ವಿರೋಧಿಸಿ ಇಂದು ಬೆಳ್ತಂಗಡಿಯಲ್ಲಿ ಕ್ರೈಸ್ತ ಸಂಘಟನೆಗಳ ಒಕ್ಕೂಟ ಹಾಗೂ ಸಮಾನ ಮನಸ್ಕರಿಂದ ಪ್ರತಿಭಟನೆ ನಡೆಯಿತು.
ಮಣಿಪುರದಲ್ಲಿ ಮೇ 4ರಿಂದ ಗಲಭೆ ಆರಂಭವಾಗಿತ್ತು. ಗಲಭೆ ಆರಂಭವಾಗಿ ಎಂಬತ್ತು ದಿನಗಳು ಕಳೆದರೂ ಅಲ್ಲಿನ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಗಲಭೆ ನಿಯಂತ್ರಿಸಲು ವಿಫಲವಾಯಿತು. ದೇಶದ ಮಹಿಳೆಯರ ಮಾನವನ್ನು ಹರಾಜು ಹಾಕಿದರೂ ಎಫ್ ಐ ಆರ್ ದಾಖಲಿಸಿ ಸಂತಸ್ತರಿಗೆ ಪರಿಹಾರ ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎರಡು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿದ ಬಳಿಕ ನಾವೆಲ್ಲರೂ ಎಚ್ಚೆತ್ತುಕೊಂಡಿದ್ದೇವೆ. ದೇಶದ ಚಿತ್ರಣ ಕೊಡುವ ಮಾಧ್ಯಮಗಳು ಸುಮ್ಮನಿದ್ದಾರೆ ಎಂದು ಪ್ರತಿಭಟನಾಕಾರರು ನಿರಾಶೆ ವ್ಯಕ್ತಪಡಿಸಿದರು.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.