ಅಪಾಯದ ಮಟ್ಟವನ್ನು ದಾಟಿದ ಯಮುನಾ ನದಿ: ದೆಹಲಿಯಲ್ಲಿ ಹೈ ಅಲರ್ಟ್; ಹಿಮಾಚಲ ಪ್ರದೇಶಕ್ಕೂ ರೆಡ್ ಅಲರ್ಟ್ ಘೋಷಣೆ

Arun Kumar
0

 


ಭಾರೀ ಮಳೆ ಹಿನ್ನೆಲೆಯಲ್ಲಿ ಯಮುನಾ ನದಿಯ ನೀರಿನ ಮಟ್ಟವು 206ಕ್ಕೆ ತಲುಪಿದೆ. ಇದು 205.33 ಮೀಟರ್ ಅಪಾಯದ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಾಗಿದೆ ಎಂದು ಕೇಂದ್ರ ಜಲ ಆಯೋಗ ಮಂಗಳವಾರ ತಿಳಿಸಿದೆ.
ಇದರ ಹೆಚ್ಚಿನ ಪ್ರವಾಹ ಮಟ್ಟವು -207.49 ಮೀಟರ್ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ‌
ಯಮುನಾ ನದಿಯ ನೀರಿನ ಮಟ್ಟವು 205.33 ಮೀಟರ್ ಅಪಾಯದ ಮಟ್ಟವನ್ನು ದಾಟಿದ್ದು, 206.24 ಮೀಟರ್ ತಲುಪಿದೆ. ಗರಿಷ್ಠ ಪ್ರವಾಹ ಮಟ್ಟ -207.49 ಮೀಟರ್” ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ. ದೆಹಲಿಯ ಹಳೆಯ ಯಮುನಾ ಸೇತುವೆಯ ಮೇಲೆ ರೈಲು ಸಂಚಾರವನ್ನು ಬೆಳಿಗ್ಗೆ 6ರಿಂದ ಜುಲೈ 11 ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರ ರೈಲ್ವೆ ತಿಳಿಸಿದೆ.
ಏತನ್ಮಧ್ಯೆ, ಉತ್ತರಾಖಂಡದ ಡೆಹ್ರಾಡೂನ್ ನ ವಿಕಾಸ್ ನಗರದಲ್ಲಿ ನಿರಂತರ ಮಳೆಯಿಂದಾಗಿ ಯಮುನಾ ನದಿಯ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಇದಕ್ಕೂ ಮೊದಲು, ಹಳೆಯ ರೈಲ್ವೆ ಸೇತುವೆಯಲ್ಲಿ ಯಮುನಾ ನದಿಯ ನೀರಿನ ಮಟ್ಟವು ಸೋಮವಾರ ರಾತ್ರಿ 11 ಗಂಟೆಗೆ 206.04 ಮಿ.ಮೀ. ತಲುಪಿತ್ತು. ದೆಹಲಿಯ ಯಮುನಾ ನದಿಯು ಸೋಮವಾರ ಸಂಜೆ 5 ಗಂಟೆಗೆ 205.33 ಮೀಟರ್ ಅಪಾಯದ ಮಟ್ಟವನ್ನು ದಾಟಿತ್ತು ಎಂದು ಪ್ರವಾಹ ನಿಯಂತ್ರಣ ಇಲಾಖೆಯ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.
ರಾಷ್ಟ್ರ ರಾಜಧಾನಿ ಸೇರಿದಂತೆ ವಾಯುವ್ಯ ಭಾರತದಾದ್ಯಂತ ಮಳೆಯ ಹಿನ್ನೆಲೆಯಲ್ಲಿ ಹರಿಯಾಣವು ಹತ್ನಿಕುಂಡ್ ಬ್ಯಾರೇಜ್ ನಿಂದ ಹೆಚ್ಚಿನ ನೀರನ್ನು ನದಿಗೆ ಬಿಡುಗಡೆ ಮಾಡಿದ್ದರಿಂದ ಯಮುನಾದಲ್ಲಿ ನೀರಿನ ಮಟ್ಟವು ನಿರಂತರವಾಗಿ ಏರುತ್ತಿದೆ. ಪ್ರವಾಹ ನಿಯಂತ್ರಣ ಇಲಾಖೆಯ ಪ್ರಕಾರ, ಸೋಮವಾರ ಮಧ್ಯಾಹ್ನ 3 ಗಂಟೆಗೆ ಹತ್ನಿಕುಂಡ್ ಬ್ಯಾರೇಜ್ ಮೂಲಕ ಸುಮಾರು 2,15,677 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)