ರಾಜಸ್ಥಾನದ ‘ಹಸ್ತ’ ಪಾಳಯದಲ್ಲಿ ಅಸಮಾಧಾನದ ಹೊಗೆ: ವಿಧಾನಸಭೆಗೆ ಬಂದ ಮಾಜಿ ಸಚಿವರಿಗೆ ಕೈ ನಾಯಕರಿಂದ ಘೇರಾವ್..!

Arun Kumar
0

ಮಹಿಳೆಯರ ಸುರಕ್ಷತೆಯ ಬಗ್ಗೆ ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸಿದ್ದ ರಾಜಸ್ಥಾನದ ಮಾಜಿ ಸಚಿವ ರಾಜೇಂದ್ರ ಸಿಂಗ್‌ ಗೂಢಾ ಅವರನ್ನು ರಾಜ್ಯ ವಿಧಾನಸಭೆ ಪ್ರವೇಶಿಸದಂತೆ ಕಾಂಗ್ರೆಸ್‌ ನಾಯಕರು ತಡೆದ ಘಟನೆ ನಡೆದಿದೆ.

ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಗಂಭೀರ ಆರೋಪ ಮಾಡಿದ ಅವರು, ಕಾಂಗ್ರೆಸ್‌ ನಾಯಕರು ನನ್ನನ್ನು ಒದ್ದು, ಸಭೆಯಿಂದ ಹೊರಗೆ ಎಳೆದು ಹಾಕಿದ್ದಾರೆ ಎಂದು ಹೇಳಿದ್ದಾರೆ.

ಸಿಎಂ ವಿರುದ್ಧ ಹರಿಹಾಯ್ದ ಅವರು, ವಿಧಾನಸಭೆ ಮತ್ತು ಕ್ರಿಕೆಟ್ ಚುನಾವಣೆಗಳಲ್ಲಿ ಗೆಹ್ಲೋಟ್‌ ಮಾಡಿದ ಭ್ರಷ್ಟಾಚಾರವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.

‘ಸುಮಾರು 50 ಜನರು ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಮೇಲೆ ಗುದ್ದಿದರು. ನನ್ನನ್ನು ಒದ್ದು ಕಾಂಗ್ರೆಸ್ ನಾಯಕರು ನನ್ನನ್ನು ವಿಧಾನಸಭೆಯಿಂದ ಹೊರಗೆ ಎಳೆದರು. ರಾಜಸ್ಥಾನ ವಿಧಾನಸಭೆಯ ಅಧ್ಯಕ್ಷರು ನನಗೆ ಮಾತನಾಡಲು ಸಹ ಅವಕಾಶ ನೀಡಲಿಲ್ಲ. ನಾನು ಬಿಜೆಪಿಯೊಂದಿಗೆ ಇದ್ದೇನೆ ಎಂದು ನನ್ನ ವಿರುದ್ಧ ಆರೋಪಗಳಿವೆ. ನನ್ನ ತಪ್ಪೇನು ಎಂದು ತಿಳಿದುಕೊಳ್ಳಲು ನಾನು ಬಯಸುತ್ತೇನೆ’ ಎಂದು ಅವರು ಆರೋಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)