ಸಿಸಿಬಿ ಕಾರ್ಯಾಚರಣೆ: ಹೆಬ್ಬಾಳ ಪೊಲೀಸ್ ಠಾಣೆ ಕೇಸ್ ಆರೋಪಿಗಳಿಂದ ಜೀವಂತ ಹ್ಯಾಂಡ್ ಗ್ರೇನೈಡ್ ವಶ

Arun Kumar
0


“ಸಿ,ಸಿಬಿ ಕಾರ್ಯಾಚರಣೆ” ನಡೆಸಿ ಹೆಬ್ಬಾಳ ಪೊಲೀಸ್ ಠಾಣೆಯ ಕೇಸಿನಲ್ಲಿ ಆರೋಪಿ ವಶದಿಂದ 4 ಜೀವಂತ ಹ್ಯಾಂಡ್ ಗ್ರೇನೈಡ್ ಗಳ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ನಗರದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದ ಸಿಸಿಬಿ ಅಧಿಕಾರಿಗಳಿಗೆ ಕೆಲವು ಆರೋಪಿಗಳು, ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಆರೋಪಿಗಳೊಂದಿಗೆ ಸಂಪರ್ಕ ಹೊಂದಿ, ನಗರದಲ್ಲಿ ದೇಶವಿರೋಧಿ ಕಾನೂನು ಬಾಹಿರ ವಿದ್ವಂಸಕ ಕೃತ್ಯವೆಸಗಲು ಹಲವಾರು ಒಳಸಂಚಿನ ಸಭೆಗಳನ್ನು ನಡೆಸಿ, ಈ ಕಾರ್ಯಸಾಧನೆಗಾಗಿ ಕೆಲವು ವಾರಗಳಿಂದ ಆಕ್ರಮವಾಗಿ ಶಸ್ತ್ರಾಸ್ತ್ರ ಮದ್ದುಗುಂಡುಗಳು ಮತ್ತು ದುಷ್ಕೃತ್ಯಕ್ಕೆ ಬೇಕಾಗುವ ಸಲಕರಣೆಗಳನ್ನು ಕ್ರೋಡಿಕರಿಸಿಕೊಂಡು ದೇಶದ ಐಕ್ಯತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವ ದುಷ್ಕೃತ್ಯಗಳನ್ನು ಎಸಗಿ) ಸಾರ್ವಜನಿಕ ಆಸ್ಟ್ರಿ ಪಾಸ್ತಿಗೆ ನಷ್ಟ ಉಂಟು ಮಾಡುವ ಉದ್ದೇಶಗಳನ್ನು ಹೊಂದಿ, ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದ ಮನೆಯೊಂದರಲ್ಲಿ ದೇಶವಿರೋಧಿ ಕೃತ್ಯದ ರೂಪರೇಷೆಗಳನ್ನು ರೂಪಿಸಿ, ಆಕ್ರಮ ಶಸ್ತ್ರಾಸ್ತ್ರದೊಂದಿಗೆ ವಿಧ್ವಂಸಕ ಕೃತ್ಯಕ್ಕೆ ಒಳಸಂಚು ಮಾಡಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ಕೈಗೊಂಡ ಕ್ರಮದ ಬಗ್ಗೆ ಈಗಾಗಲೇ ತಿಳಿಸಲಾಗಿತ್ತು.

ಜುಲೈ ,19 ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 17 ದಿನಗಳ ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿರುತ್ತದೆ. ಈ ಕೇಸಿನಲ್ಲಿ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಲು ತನಿಖಾಧಿಕಾರಿ ಸೇರಿ ಇಬ್ಬರು ಎಸಿ 6 ಜನ ಪೊಲೀಸ್ ಇನ್ಸ್ಪೆಕ್ಟರ್ ಗಳ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತೀವ್ರಗತಿಯಲ್ಲಿ ತನಿಖೆ ಮುಂದುವರಿದಿದೆ.

ಆರೋಪಿಗಳನ್ನು ಮನಹ ವಿಚಾರಣೆಗೊಳಪಡಿಸಿದ್ದು, ಪೊಲೀಸ ಅಭಿರಕ್ಷೆಯಲ್ಲಿರುವ ಎ-5 ಆರೋಪಿತನು ತಲೆ ಮರೆಸಿಕೊಂಡಿರುವ ಎ-2 ಆರೋಪಿತನು ಒಬ್ಬ ವ್ಯಕ್ತಿಯ ಮೂಲಕ 04 ಹ್ಯಾಂಡ್ ಸೈನೈಡ್ ಗಳನ್ನು ಕಳುಹಿಸಿದ್ದು, ಅವುಗಳನ್ನು ಕೊಡಿಗೆಹಳ್ಳಿಯ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿರುವುದಾಗಿಯೂ, ಸದರಿ ಸ್ಥಳವನ್ನು ತೋರಿಸುವುದಾಗಿ ವಿಚಾರಣೆ ವೇಳೆ ತಿಳಿಸಿರುತ್ತಾನೆ. ಆದರಂತೆ, ತನಿಖಾಧಿಕಾರಿಯವರು ಬಾಂಬ್ ನಿಷ್ಕ್ರಿಯ ದಳದ (ಬಿಡಿಡಿಎಸ್) ಮತ್ತು ಎಫ್ ಎಸ್ ಎಲ್ ಅಧಿಕಾರಿಗಳ ಜೊತೆಯಲ್ಲಿ ನಿಯಮಾನುಸಾರವಾಗಿ 04 ಜೀವಂತ ಹ್ಯಾಂಡ್ ಗೇನೈಡ್ ಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ.ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮುಂದುವರಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)