ಬಜ್ಪೆ: ನೀರಿನ ಸಮಸ್ಯೆಯನ್ನು ಪರಿಹರಿಸಿ ಕೊಡುವಂತೆ ಕಂದಾವರ ಪಂಚಾಯತ್ ನ ಮೆಂಬರ್ ಸವಿತಾ ಎಂಬವರಿಗೆ ಯುವತಿಯೊಬ್ಬರು ಮನವಿ ಮಾಡಿದ್ದು, ಆದರೆ ಅವರು ಪುರುಷನೋರ್ವನಿಗೆ ಆ ಯುವತಿಯ ನಂಬರ್ ನೀಡಿ ಕರೆ ಮಾಡಿಸಿ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿ ಬಂದಿದೆ.
ಹೌದು..! ಘಟನೆ ಸಂಬಂಧ ಯುವತಿಯ ಸಹೋದರ ಹಾಗೂ ಸ್ಥಳೀಯರು ಸೇರಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ದೂರು ದಾಖಲಿಸಿಕೊಂಡು ತಕ್ಷಣದಲ್ಲಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಗ್ರಾಮಸ್ಥರು ಪೊಲೀಸ್ ಠಾಣೆ ಬಳಿ ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
ಯುವತಿಯ ಸಹೋದರ ಚರಣ್ ಎಂಬವರು ಈ ಬಗ್ಗೆ ಮಾತನಾಡಿದ್ದು, ನಾನು ಮುಂಡಾಲ ಸಮುದಾಯದ ಯುವಕನಾಗಿದ್ದೇನೆ, ನಮ್ಮ ಗ್ರಾಮದಲ್ಲಿ ಹಲವು ಸಮಯಗಳಿಂದಲೂ ನೀರಿನ ಸಮಸ್ಯೆ ಇದೆ. ಇದರ ಬಗ್ಗೆ ನನ್ನ ತಂಗಿ ಪಂಚಾಯತ್ ಸದಸ್ಯೆ ಸವಿತಾ, ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಪಿಡಿಓಗೆ ಕರೆ ಮಾಡಿ ತಿಳಿಸಿದ್ದಾಳೆ. ಆದ್ರೆ ಸವಿತಾ ಅವರು, ನನ್ನ ತಂಗಿಯ ನಂಬರ್ ಸುದರ್ಶನ್ ಎಂಬ ವ್ಯಕ್ತಿಯೋರ್ವನಿಗೆ ನೀಡಿದ್ದು, ಆ ವ್ಯಕ್ತಿ ನನ್ನ ತಂಗಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.
ಸುದರ್ಶನ್ ಎಂಬ ವ್ಯಕ್ತಿ ನನ್ನ ತಂಗಿಗೆ ಕರೆ ಮಾಡಿ, “ಸವಿತಾಗೆ ಕರೆ ಮಾಡಿ ಜೋರು ಮಾಡಿದ್ದು ಯಾರು?, ನೀವು ಪಂಚಾಯತ್ ಗೆ ಕಂಪ್ಲೈಂಟ್ ಕೊಡಿ” ಎಂದಿದ್ದಲ್ಲದೇ, ರಾತ್ರಿ ನಿನ್ನ ಮನೆಗೆ ಬರ್ತೇನೆ, ನನಗೆ ಕರೆ ಮಾಡು, ಇಲ್ಲವಾದ್ರೆ ಮನೆಗೆ ಬರುತ್ತೇನೆ ಎಂದು ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ನಾನು ಸುದರ್ಶನ್ ಗೆ ಕರೆ ಮಾಡಿ ವಿಚಾರಿಸಿದಾಗ ನಿಮ್ಮ ಜಾತಿಯವರ ಹಣೆಬರಹವೇ ಇದು, ನೀವು ಮುಂಡಾಲ ಜಾತಿಯವರು ಇಂತಹದ್ದೇ ಮಾಡೋದು ಜಾತಿ ನಿಂದನೆ ಮಾಡಿದ್ದಾನೆ ಎಂದು ಅವರು ಹೇಳಿದರು.
ಇನ್ನೂ ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಗೆ ನಾವು ದೂರು ನೀಡಲು ಬಂದಿದ್ದೇವೆ. ಸುದರ್ಶನ್ ಎಂಬ ವ್ಯಕ್ತಿಯನ್ನು 24 ಗಂಟೆಗೊಳಗೆ ಅರೆಸ್ಟ್ ಮಾಡಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದೇವೆ. ಆದ್ರೆ ಪೊಲೀಸರು ಬಂಧಿಸುವುದಿಲ್ಲ ಎಂದಿದ್ದಾರೆ. ನಮಗೆ ಪ್ರೊಸೀಜರ್ ಇದೆ ಎಂಬ ನೆಪ ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.
ನಾವು ನೀರಿನ ಸಮಸ್ಯೆ ಬಗ್ಗೆ ಪ್ರಶ್ನಿಸಿದ್ರೆ ನಮಗೆ ಭದ್ರತೆಯೇ ಇಲ್ಲದಂತಾಗಿದೆ. ನಮ್ಮನ್ನು ಬೆದರಿಸಿ ಸುಮ್ಮನಾಗಿಸುತ್ತಿದ್ದಾರೆ. ನಾವು ಮನೆಗೆ ಬರ್ತೀವಿ ಎಂದು ಆ ವ್ಯಕ್ತಿ ನನ್ನ ತಂಗಿಗೆ ಬೆದರಿಕೆ ಹಾಕಿದ್ದಾರೆ… ಹಾಗಿದ್ರೆ ನಾವು ಹೆದರಿಕೊಂಡೇ ಬದುಕಬೇಕೇ? ನಮಗೆ ರಕ್ಷಣೆ ಕೊಡೋದು ಯಾರು? ಪಂಚಾಯತ್ ಅಧ್ಯಕ್ಷರಿಗೆ ಇದರ ಬಗ್ಗೆ ಕರೆ ಮಾಡಿದಾಗ, ಹೌದು… ಅವರು ಮಾಡಿರೋದು ತಪ್ಪು ಎಂದು ಅವರು ಕೂಡ ಹೇಳಿದ್ದಾರೆ. ಬೇರೆಯವರಿಗೆ ನಂಬರ್ ಕೊಡಬಾರದಿತ್ತು. ಹೆಣ್ಣಿನ ನಂಬರ್ ಬೇರೆಯವರಿಗೆ ಕೊಟ್ರೆ ಹೇಗೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಾವರ ಪಂಚಾಯತ್ ವ್ಯಾಪ್ತಿಯಲ್ಲಿ S.C ಸಮುದಾಯದ ಹೆಣ್ಣು ಮಗಳೊಬ್ಬಳಿಗೆ ಜಾತಿ ನಿಂದನೆ ಹಾಗೂ ಬೆದರಿಕೆಯನ್ನು ಒಡ್ಡಿರುತ್ತಾರೆ, ಈ ನಿಟ್ಟಿನಲ್ಲಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧಿಸಿದಂತೆ ದೂರು ನೀಡಿದ್ದು, ಠಾಣೆಯು ದೂರನ್ನು ಪರಿಗಣಿಸದೆ ಆರೋಪಿಯು ಕಣ್ಣ ಮುಂದಿದ್ದರು ಆತನನ್ನು ಬಂಧಿಸದೇ ಆರೋಪಿಯನ್ನು ಸೂಕ್ತ ರಕ್ಷಣೆಯೊಂದಿಗೆ ಹೊರಗೆ ಕಳುಹಿಸಿ ಕೊಟ್ಟು ದಲಿತ ಸಮಾಜದ ನಾವುಗಳು ನ್ಯಾಯ ವಂಚಿತರಾಗಿರುತ್ತೇವೆ, ಆರೋಪಿಯನ್ನು ಬಂಧಿಸುವ ಯಾವ ಪ್ರಕ್ರಿಯೆಯು ಮುಂದುವರಿಯಲಿಲ್ಲ, ಸಾಮಾಜಿಕ ಕಳಕಳಿಯ ತಾವುಗಳು ಗೂಂಡಾ ಪ್ರವೃತ್ತಿಯ ಸುದರ್ಶನ್ ಎಂಬವನನ್ನು ಬಂಧಿಸಿ ನ್ಯಾಯ ದೊರಕಿಸಿ ಕೊಡಲು ಹೋರಾಡುತ್ತೇವೆ.
— ಭೀಮ್ ಸೇನೆ ದ.ಕ..
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.