ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಬಂದ ಶಾಸಕರಿಗೆ ಮಹಿಳೆಯಿಂದ ಕಪಾಳಮೋಕ್ಷ: ನಾನೇನು ಶಿಕ್ಷೆ ಕೊಡಿಸಲ್ಲ ಎಂದ ಎಂಎಲ್ ಎ..!

Arun Kumar
0

 

ತಮ್ಮ ಕ್ಷೇತ್ರದ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದ ಜೆಜೆಪಿ ಶಾಸಕ ಈಶ್ವರ್ ಸಿಂಗ್‌ಗೆ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿದ ಘಟನೆ ಹರ್ಯಾಣದ ಕೈತಾಲ್ ಎಂಬಲ್ಲಿ ನಡೆದಿದೆ.
ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನನಾಯಕ್ ಜನತಾ ಪಕ್ಷ (ಜೆಜೆಪಿ) ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಢ ಒಕ್ಕೂಟದ ಭಾಗವಾಗಿದೆ. ಘಗ್ಗರ್ ನದಿಯ ಅಣೆಕಟ್ಟು ಸೋರಿಕೆಯಿಂದಾಗಿ ಉಂಟಾದ ಪ್ರವಾಹದಿಂದ ಘುಲಾ ಕ್ಷೇತ್ರದ ಭಾಟಿಯಾ ಗ್ರಾಮದ ಮಹಿಳೆಯು ಕೋಪಗೊಂಡಿದ್ದಳು.
ಶಾಸಕ ಸಿಂಗ್ ಅವರು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಹೋಗಿದ್ದರು, ಸಣ್ಣ ಅಣೆಕಟ್ಟು ಒಡೆದಿದ್ದರಿಂದ ತಮ್ಮ ಗ್ರಾಮದಲ್ಲಿ ಉಂಟಾದ ಪ್ರವಾಹದಿಂದ ಕೋಪಗೊಂಡ ಮಹಿಳೆ ಮತ್ತು ಇತರ ಕೆಲವು ಜನರು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಶಾಸಕ ಸಿಂಗ್, ಇದು ನೈಸರ್ಗಿಕ ವಿಪತ್ತು. ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗಿದ್ದರಿಂದ ಈ ರೀತಿ ಅವಘಡ ಆಗಿದೆ ಶಾಸಕರು ಸ್ಪಷ್ಟನೆ ನೀಡಿದ್ದರು.

ಇನ್ನು ಈ ಘಟನೆಯ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಮಹಿಳೆಯೊಬ್ಬರು ಶಾಸಕರಿಗೆ ಶಾಪ ಹಾಕುತ್ತಾ ಸಾರ್ವಜನಿಕರ ಮುಂದೆ ಹೊಡೆಯುತ್ತಿರುವುದನ್ನು ತೋರಿಸುತ್ತದೆ. ‘ನೀವು ಈಗ ಏಕೆ ಬಂದಿದ್ದೀರಿ..?’ ಎಂದು ಮಹಿಳೆ ಶಾಸಕರನ್ನು ಹೊಡೆಯುವ ಮೊದಲು ಕೇಳುತ್ತಾರೆ.
ಸಾರ್ವಜನಿಕವಾಗಿ ಈ ರೀತಿ ದುರ್ವರ್ತನೆ ತೋರಿದ
ಮಹಿಳೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತೆ ತಾನು ಸೂಚಿಸಿಲಾ ಎಂದು ಶಾಸಕ ಸಿಂಗ್ ಹೇಳಿದ್ದಾರೆ. ಅವಳು ಮಾಡಿದ್ದಕ್ಕಾಗಿ ಯಾವುದೇ ಕ್ರಮ ತೆಗೆದುಕೊಳ್ಳಲು ನಾನು ಬಯಸುವುದಿಲ್ಲ’ ಎಂದು ಅವರು ಹೇಳಿದರು.
ಪಂಜಾಬ್ ಮತ್ತು ಹರಿಯಾಣದ ಹಲವಾರು ಗ್ರಾಮಗಳು ಇತ್ತೀಚೆಗೆ ಸುರಿದ ಮಳೆಯ ನಂತರ ಘಗ್ಗರ್ ನದಿಯಿಂದ ಉಂಟಾದ ಪ್ರವಾಹದಿಂದ ಹಾನಿಗೊಳಗಾಗಿವೆ. ಈ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಹಲವು ಭಾಗಗಳು ಮುಳುಗಡೆಯಾಗಿದ್ದರಿಂದ ಎರಡು ರಾಜ್ಯಗಳಲ್ಲಿ ಪರಿಹಾರ ನೀಡುವ ಕ್ರಮಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)