ಮಳೆಗೆ ಬಲಿಯಾದ ವೃದ್ಧೆ ದೇವಮ್ಮ ಕುಟುಂಬಸ್ಥರಿಗೆ ಪರಿಹಾರ ವಿತರಿಸಿ ಸಾಂತ್ವಾನ ಹೇಳಿದ ಶಾಸಕಿ ನಯನ ಮೋಟಮ್ಮ

Arun Kumar
0

 

ಇತ್ತೀಚಿಗೆ ಬಾರಿ ಮಳೆಯಿಂದಾಗಿ ಮೂಡಿಗೆರೆ ಕ್ಷೇತ್ರದ ಕಸಬಾ ಹೋಬಳಿಯ ದಾರದಹಳ್ಳಿ ಗ್ರಾಮದ ದೇವಮ್ಮ ಇವರು ಆಕಸ್ಮಿಕವಾಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಮರಣ ಹೊಂದಿದ್ದರು. ಇಂದು ಶಾಸಕಿ ನಯನ ಮೋಟಮ್ಮರವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದೇ ಸಂದರ್ಭದಲ್ಲಿ ನಯನ ಮೋಟಮ್ಮ ಅವರು ಸರ್ಕಾರದಿಂದ ಮೃತರಿಗೆ ಮಂಜೂರಾದ ಐದು ಲಕ್ಷ ರೂ. ಗಳ ಚೆಕ್ ನ ಆದೇಶ ಪ್ರತಿಯನ್ನು ಕುಟುಂಬಸ್ಥರಿಗೆ  ವಿತರಿಸಿದರು.

ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳಾದ ರಾಜೇಶ್, ಮೂಡಿಗೆರೆ ತಹಶೀಲ್ದಾರ್ ತಿಪ್ಪೇಸ್ವಾಮಿ, ಕಂದಾಯ ಅಧಿಕಾರಿಗಳು, ಇನ್ನಿತರೇ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ರಮೇಶ್ ಹೊಸಕೆರೆ ಪಟ್ಟಣ ಪಂಚಾಯತ್ ಸದಸ್ಯರು, ಎಂ.ಎನ್.ಅಶ್ವಥ್ ಗೌಡ್ರು ಮಾಕೋನಹಳ್ಳಿ, ಶಿವಕುಮಾರ್ ಕಾಂಗ್ರೆಸ್ ಕಾರ್ಯದರ್ಶಿ, ಜೈರಾಮ್ ಗೌಡ, ತಾ.ಪಂ. ಮಾಜಿ ಅಧ್ಯಕ್ಷರು, ಮಯೂರ್ ಗ್ರಾಮ ಪಂಚಾಯತ್ ಸದಸ್ಯರು, ಸುಧೀರ್ ದಾರದಹಳ್ಳಿ ಪ. ಜಾತಿ ವಿಭಾಗದ ಅಧ್ಯಕ್ಷರು, ರಾಮು ಕೆಸವೊಳಲು, ರಮೇಶ್ ಕಡಿದಾಳ್, ದೀಪು ಕಡಿದಾಳ್, ವಿಜಿಗೌಡ್ರು ದಾರದಹಳ್ಳಿ, ಗೋಪಾಲ ದಾರದಹಳ್ಳಿ ಮತ್ತು ದೇವಮ್ಮ ಇವರ ಮನೆಯವರು ಹಾಗೂ ಗ್ರಾಮಸ್ಥರುಗಳು ಇದೆ ಸಂದರ್ಭದಲ್ಲಿ ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)