ಅಯ್ಯೋ ದೇವರೇ!...

Arun Kumar
0


 😥 ಬಕೆಟ್‌ನೊಳಗೆ ಬಿದ್ದು ಮಗು ಸಾವು! ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನಲ್ಲಿ ನೀರು ತುಂಬಿದ ಬಕೆಟ್‌ನೊಳಗೆ ಬಿದ್ದು 10 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.


ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿಯಲ್ಲಿ ಮನೆ ಮುಂದೆ ಆಟವಾಡುತಿದ್ದ ಮಗು‌ ನೀರು ತುಂಬಿದ ಬಕೆಟ್ ನಲ್ಲಿ ಬಿದ್ದು ಮಗು ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಗ್ರಾಮದ ಮಂಜುನಾಥ್ ಹಾಗೂ ತಾರ ಎಂಬುವರ ದಂಪತಿಗಳ ಪುತ್ರಿ 10 ತಿಂಗಳ ‌ಅನುಸಾವ್ಯ ಮೃತ ಮಗು ಎನ್ನಲಾಗಿದೆ. ಎಂದಿನಂತೆ ಸಂಜೆ ಮಗು ಮನೆಯ ಮುಂದೆ ಆಟವಾಡುತ್ತಿತ್ತು. ಅಲ್ಲಿಯೇ ಸಮೀಪದಲ್ಲಿ ನೀರು ತುಂಬಿದ ಬಕೆಟ್ ಬಳಿ ಹೋಗಿದೆ. ಅದನ್ನು ನೋಡುವ ಕುತೂಹಲದಲ್ಲಿ ಮಗು ಬಕೆಟ್‌ನೊಳಗೆ ಮಕಾಡೆ ಬಿದ್ದಿದೆ. ಮಗು ಉಸಿರುಕಟ್ಟಿ ಸಾವು ಬದುಕಿನ ಮಧ್ಯೆ ಹೋರಾಡುವಾಗ ಪೋಷಕರು ಗಾಬರಿಗೊಂಡು ಮಗುವನ್ನು ಎತ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಗು ಉಸಿರು ನಿಂತಿದೆ. ಪೋಷಕರು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಕರೆತರುವಾಗ ರಸ್ತೆ ಮಾರ್ಗ ಮಧ್ಯೆ ಅಸುನೀಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)