43 ವರ್ಷಗಳಲ್ಲಿ 53 ವಿವಾಹವಾದ ಭೂಪ ...!

Arun Kumar
4

 


ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಸಂತೋಷಕ್ಕಾಗಿ ಅಲ್ಲ. ಬದಲಾಗಿ ಸ್ಥಿರತೆ ಮತ್ತು ಮನಸ್ಸಿಗೆ ಶಾಂತಿ ಕಂಡುಕೊಳ್ಳುವ ಸಲುವಾಗಿ 43 ವರ್ಷಗಳಲ್ಲಿ 53 ಬಾರಿ ವಿವಾಹವಾಗಿದ್ದಾನೆ. ಹೌದು, 63 ವರ್ಷದ ಅಬು ಅಬ್ದುಲ್ಲಾ ಎಂಬ ವ್ಯಕ್ತಿಗೆ “ಶತಮಾನದ ಬಹುಪತ್ನಿತ್ವವಾದಿ” ಎಂಬ ಅಡ್ಡ ಹೆಸರು ಇಡಲಾಗಿದೆ. ನಾನು 53 ಮಹಿಳೆಯರನ್ನು ವಿವಾಹವಾಗಿದ್ದೇನೆ. ನಾನು 20 ವರ್ಷ ವಯಸ್ಸಿನವನಾಗಿದ್ದಾಗ ಮೊದಲ ಬಾರಿಗೆ ನನಗಿಂತ ಆರು ವರ್ಷ ದೊಡ್ಡವಳನ್ನು ಮದುವೆಯಾದೆ. ನಾನು ಮೊದಲ ಬಾರಿಗೆ ಮದುವೆಯಾದಾಗ, ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಬೇಕು ಎಂಬ ಯೋಚನೆಯನ್ನು ಹೊಂದಿರಲಿಲ್ಲ. ಏಕೆಂದರೆ ನಾನು ಆರಾಮದಾಯಕವಾಗಿ ಇದ್ದೆ ಮತ್ತು ಮಕ್ಕಳನ್ನು ಹೊಂದಿದ್ದೆ. ಆದರೆ ಕೆಲವು ವರ್ಷಗಳ ನಂತರ ದಾಂಪತ್ಯದಲ್ಲಿ ಸಮಸ್ಯೆಗಳು ಎದುರಾದವು. ಹೀಗಾಗಿ 23 ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗಲು ನಿರ್ಧರಿಸಿದೆ. ಈ ಬಗ್ಗೆ ತನ್ನ ಮೊದಲ ಹೆಂಡತಿಗೆ(Wife) ತಿಳಿಸಿರುವುದಾಗಿ ಅಬ್ದುಲ್ಲಾ ಹೇಳಿದ್ದಾನೆ. #😲 53 ಮಹಿಳೆಯರನ್ನು ವಿವಾಹವಾದ ಭೂಪ!

ಕಾಮೆಂಟ್‌‌ ಪೋಸ್ಟ್‌ ಮಾಡಿ

4ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ