ಕಳೆದ ಒಂದುವರೆ ತಿಂಗಳಿನಿಂದಲೂ ಅವರ ಮನೆ ಹತ್ತಿರ ಆಗಲಿ ಅಥವಾ ಕೆಲಸಕ್ಕೆ ಆಗಲಿ ಹಾಜರಿ ಇಲ್ಲ ಎನ್ನುವಂತಹ ವದಂತಿ ಇಡೀ ಗ್ರಾಮದ ಸುತ್ತಮುತ್ತಲು ಕೇಳಿ ಬರುತ್ತಿರುವಂಥದ್ದು. ಇದರ ವಿಚಾರವಾಗಿ ನೆನ್ನೆ ಹೊರಬಂದಂತಹ ಒಂದು ಖಾಸಗಿ ಸುದ್ದಿ ಸಂಸ್ಥೆಯ ಪ್ರಕಾರ ಅವರನ್ನ ರವಿಕುಮಾರ್ ಎಂಬುವರು ಕಿಡ್ನಾಪ್ ಮಾಡಿದ್ದಾರೆ ಎಂದು ಅವರ ಯೂಟ್ಯೂಬ್ ಚಾನಲ್ನಲ್ಲಿ ಆರೋಪ ಮಾಡಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಂತಹ ವೇಗ ನ್ಯೂಸ್ ಕನ್ನಡ ಸಿಬ್ಬಂದಿ ಅವರ ಸ್ನೇಹಿತರನ್ನು ಕರೆ ಮಾಡಿ ಕೇಳಿದಾಗ ಅವರ ಉತ್ತರ ಅವರು ಫಾರಿನ್ ಗೆ ಹೋಗಿದ್ದಾರೆ ಹಾಗೆಯೇ ಅವರ ತಾಯಿ ಸಹ ಅವರ ಸಂಬಂಧಿಕರ ಮನೆಯಲ್ಲಿ ಇರಬಹುದು ಎಂಬ ಮಾತನ್ನು ಹೇಳಿದ್ದಾರೆ. ಆದರೆ ಇದೀಗ ಕೇಳಿ ಬರುತ್ತಿರುವಂತಹ ಒಂದಷ್ಟು ವದಂತಿಗಳ ಪ್ರಕಾರವಾಗಿ ಚುನಾವಣೆ ಹತ್ತಿರ ಬರುತ್ತಿದೆ ಅದರ ವಿಚಾರವಾಗಿ ಇವರನ್ನು ಕಿಡ್ನ್ಯಾಪ್ ಮಾಡಿರಬಹುದು ಎಂಬ ಸಂಶಯ ಪಡುತ್ತಿರುವಂತಹ ಜನರು ಜೊತೆಗೆ ಬೇಕು ಬೇಕಂತಲೇ ಮಾಡುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ. ಇಷ್ಟರಲ್ಲಿ ಒಂದಷ್ಟು ವಿಷಯಗಳನ್ನ ಅಧ್ಯಯನ ಮಾಡಿದಾಗ ತಿಳಿದು ಬಂದಿದ್ದು ಸುಮಾರು ಒಂದು ವಾರದ ಹಿಂದೆ ನಾಗರಾಜ್ ರವರಿಗೆ ನೋಟಿಸ್ ಕೊಟ್ಟಂತಹ ಪಂಚಾಯಿತಿ ಕೂಡಲೇ ಅವರು ಹಾಜರಾಗಬೇಕೆಂಬ ನೋಟಿಸ್ ಇತ್ತು ಅಂತ ಅಕ್ಕಪಕ್ಕ ಮನೆಯವರು ಮಾತನಾಡಿಕೊಳ್ಳುವುದು ತಿಳಿದು ಬಂದಿದೆ ಆದರೆ ಆ ನೋಟಿಸ್ ನಲ್ಲಿ ಪ್ರಮುಖವಾಗಿ ಏನು ಬರೆದಿತ್ತು ಎನ್ನುವುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ. ಈ ವದಂತಿಯ ಪ್ರಕಾರವಾಗಿ ನಾಗರಾಜ್ ಅವರನ್ನು ಸದಸ್ಯರಿಂದ ಬದಲಾವಣೆ ಮಾಡಬೇಕು ಎಂದು ಕೂಡ ಸಹಿ ಹಾಕಿರುವಂತಹ ಒಂದು ಪತ್ರವೂ ಸಹ ಈ ಒಂದು ವಿಷಯದ ಕೆಳಗಡೆ ನಾವು ಅದನ್ನು ಅಂಟಿಸಿದ್ದೇವೆ. ಆದರೆ ಪ್ರಮುಖವಾಗಿ ಅವರು ನಾಪತ್ತೆಯಾಗಲು ಕಾರಣಗಳಾದ್ರು ಏನು, ವಿದೇಶಕ್ಕೆ ಹಲವಾರು ಬಾರಿ ಹೋದರು ಸಹ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿ ಇರುತ್ತಿದ್ದರು ಆದರೆ ಸುಮಾರು ಒಂದುವರೆ ತಿಂಗಳಿನಿಂದಲೂ ಅವರ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡಿರುವ ಉದ್ದೇಶವಾದರೂ ಏನು? ಹಾಗೆಯೇ ಮತ್ತೊಂದು ವದಂತಿಯ ಪ್ರಕಾರ ನೋಟಿಸ್ ಜಾರಿ ಮಾಡಿದ ಎರಡು ದಿನಗಳ ನಂತರ ಅಲ್ಲಿ ನೇತಾಕಿದಂತಹ ನೋಟಿಸ್ ಕೂಡ ಮಾಯವಾಗಿದೆ ಎಂಬುದು ಜೊತೆಗೆ ಅವರ ಮನೆಯಲ್ಲಿ ಲೈಟ್ ಸಹ ಉರಿಯುತ್ತಿರಲಿಲ್ಲ ಆದರೆ ನೋಟಿಸ್ ನಾಪತ್ತೆ ಆದ ನಂತರದಲ್ಲಿ ಆ ಮನೆಯಲ್ಲಿ ಲೈಟ್ ಹೊತ್ತಿ ಉರಿಯುತ್ತಿದೆ ಎಂಬುದನ್ನು ಅವರ ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಈ ಒಂದು ವಿಷಯವು ಎಷ್ಟರಮಟ್ಟಿಗೆ ಸರಿ ಎಷ್ಟರ ಮಟ್ಟಿಗೆ ಸುಳ್ಳು ಎಂಬುದೇ ಇನ್ನೂ ಪ್ರಶ್ನೆಯಾಗಿ ಉಳಿದಿದೆ. ನಿಜವಾಗಿಯೂ ಅವರು ವಿದೇಶಕ್ಕೆ ಹೋಗಿದ್ದಾರ ಅಥವಾ ಕಿಡ್ನಾಪ್ ಆಗಿದ್ದಾರ ಅನ್ನುವುದೇ ಪ್ರಶ್ನೆಯಾಗಿ ಉಳಿದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂದಿನ ದಿನಗಳಲ್ಲಿ ಯಾವ ರೀತಿ ಅಥವಾ ಯಾವ ಹಂತಕ್ಕೆ ತಲುಪುತ್ತೆ ಎಂಬುದನ್ನು ಕಾದು ನೋಡುಬೇಕಾಗಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.