Kannada Vs Tulu Controversy: ಕರ್ನಾಟಕದಲ್ಲಿ ಹಿಂದಿ ಹೇರಿಕೆ ಹಾಗೂ ಪರಭಾಷೆಗಳ ಹೇರಿಕೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕರ್ನಾಟಕದಲ್ಲಿ ಕನ್ನಡದ ಬಗ್ಗೆಯೇ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಕರ್ನಾಟಕದಲ್ಲಿ ಕನ್ನಡಿಗರು ಎಲ್ಲಾ ಭಾಷೆಯ ಜನರೊಂದಿಗೆ ಶತಮಾನಗಳಿಂದ ಸೌಹಾರ್ದದಿಂದ ಇದ್ದಾರೆ. ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಜನರೂ ಇದ್ದಾರೆ. ಮಾತೃಭಾಷೆ ಬೇರೆ ಇದ್ದರೂ ಕರ್ನಾಟಕದಲ್ಲಿ ಕನ್ನಡಕ್ಕೆ ಗೌರವ ಕೊಟ್ಟು, ಸಾರ್ವಜನಿಕ ಪ್ರದೇಶದಲ್ಲಿ ಕನ್ನಡ ಮಾತನಾಡುವ ಹಾಗೂ ಬಳಸುವ ಲಕ್ಷಾಂತರ ಜನರಿದ್ದಾರೆ. ಕನ್ನಡ ಎಂದಿಗೂ ಇನ್ನೊಂದು ಭಾಷೆಯ ಮೇಲೆ ಹೇರಿಕೆಯಂತಹ ಪ್ರಯೋಗಗಳನ್ನು ಮಾಡಿಲ್ಲ. ಆದರೆ ಕರ್ನಾಟಕದ ಮತ್ತೊಂದು ಭಾಷೆಯಾದ ತುಳು ಮೇಲೆ ಕನ್ನಡ ಹೇರಿಕೆ ನಡೆಯುತ್ತಿದೆ ಎಂದು ಕೆಲವರು ಆರೋಪಿಸಿದ್ದು. ಇದಕ್ಕೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.
ಕನ್ನಡ ಹಾಗೂ ತುಳು ಎರಡೂ ಕನ್ನಡ ನೆಲದ ಭಾಷೆಗಳು. ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ತುಳು ಭಾಷೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇಂತಹ ಮಹತ್ವದ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ತುಳು ಭಾಷೆಯ ಮೇಲೆ ಕನ್ನಡವನ್ನು ಹೇರಿಕೆ ಮಾಡಲಾಗುತ್ತಿದೆ. ಅದನ್ನು ಮೊದಲು ನಿಲ್ಲಿಸಬೇಕು ಎಂದು ಕೆಲವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಹಜವಾಗಿಯೇ ಕನ್ನಡಿಗರಿಂದ ವಿರೋಧ ಹಾಗೂ ಅಸಮಾಧಾನ ವ್ಯಕ್ತವಾಗಿದೆ.
ಕನ್ನಡ ಮತ್ತು ತುಳು ಸಹೋದರ ಭಾಷೆಗಳು ಕನ್ನಡದ ನೆಲದಲ್ಲಿ ನೂರಾರು ಉಪಭಾಷೆಗಳಿವೆ. ಕನ್ನಡಿಗರು ತುಳು ಭಾಷೆಯನ್ನು ಎಂದಿಗೂ ಹೊರಗಿನ ಭಾಷೆಯಂತೆ ಕಂಡಿಲ್ಲ. ತುಳು ಭಾಷೆ ಮಾತನಾಡುವವರು ಸಹ ಕನ್ನಡ ಭಾಷೆಯ ಬಗ್ಗೆ ಅಭಿಮಾನವೊಂದಿದ್ದಾರೆ. ಆದರೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಮಾಡುವ ಪೋಸ್ಟ್ ಹಾಗೂ ಟ್ವೀಟ್‌ಗಳಿಂದ ಕನ್ನಡ ಹಾಗೂ ತುಳು ಭಾಷೆಯ ನಡುವೆ ಅನವಶ್ಯಕವಾದ ಸಂಘರ್ಷ ಏರ್ಪಡುತ್ತಿದೆ. ಇದೀಗ Everyday Tulu ಎನ್ನುವ ಸೋಷಿಯಲ್ ಮೀಡಿಯಾ ಖಾತೆಯಿಂದ ಮಾಡಲಾಗಿರುವ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಚರ್ಚೆಗೆ ಗ್ರಾಸವಾದ ಪೋಸ್ಟ್: ಎವ್ರಿಡೇ ತುಳು ಎನ್ನುವ ಖಾತೆಯಿಂದ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಖಾತೆಯಲ್ಲಿ ಭಾಷೆ ಎನ್ನುವುದು ಶ್ರೇಣಿ (ಮೇಲು - ಕೀಳು) ವ್ಯವಸ್ಥೆ ಅಲ್ಲ. ತುಳು ಸಹ ಶ್ರೀಮಂತ ಹಾಗೂ ಪ್ರಾಚೀನ ಭಾಷೆಯಾಗಿದೆ. ತುಳು ಭಾಷೆಗೆ ಮನ್ನಣೆ ಬೇಕಿದೆ ದಮನ ನೀತಿಯಲ್ಲ. ತುಳುನಾಡಿನಲ್ಲಿ ಕನ್ನಡ ಹೇರಿಕೆ ಮಾಡುವುದು ಬೇಡ ಎಂದು ಬರೆದುಕೊಳ್ಳಲಾಗಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.