ಉದ್ಯಾನನಗರಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಈ ತಂಪು ವಾತಾವರಣದಲ್ಲಿ ಮನೆಯಲ್ಲೇ ಇರೋಣ ಎಂದುಕೊಂಡಿರೋರಿಗೆ ಮತ್ತೊಂದು ಶಾಕ್ ಕೂಡ ಇದೆ. ಇಂದು ಬೆಂಗಳೂರಿನ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಬೆಸ್ಕಾಂನ ವಿದ್ಯುತ್ ಪೂರೈಕೆ ಕೇಂದ್ರಗಳಲ್ಲಿ ದುರಸ್ತಿ ಕಾರ್ಯ ಹಾಗೂ ನಿರ್ವಹಣೆಯ ಕಾರ್ಯಾಚರಣೆ ನಡೆಯಲಿದ್ದು, ಈ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತವಾಗಲಿದೆ. ಬೆಂಗಳೂರು ಮಾತ್ರವಲ್ಲದೆ, ಬೆಂಗಳೂರು ಗ್ರಾಮಾಂತರ ಭಾಗದಲ್ಲೂ ಕರೆಂಟ್ ಇರೋದಿಲ್ಲ ಎಂದು ಹೇಳಿದೆ.
ಪವರ್ ಕಟ್ ಎಲ್ಲೆಲ್ಲಿ?: ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ನಾಗರಬಾವಿ 11ನೇ ಬ್ಲಾಕ್, ಕೆಎಚ್ಬಿ ಕಾಲೋನಿ, ಎಚ್ವಿಆರ್ ಲೇಔಟ್, ಸಿಂಡಿಕೇಟ್ ಕಾಲೋನಿ, ಸಿಂಡಿಕೇಟ್ ಬ್ಯಾಂಕಿಂಗ್ ಸುತ್ತಮುತ್ತಲಿನ ಪ್ರದೇಶ, ಪಾಪಯ್ಯ ಗಾರ್ಡನ್ ಕೆಹೆಚ್ಬಿ ಕಾಲೋನಿ, ಕೆಹೆಚ್ಬಿ ಕಾಲೋನಿ, ಬಲ್ಲಯ್ಯನ ಕೆರೆ, 2ನೇ ಬ್ಲಾಕ್, 3ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕಾವೇರಿಪುರ 1ನೇ ಬ್ಲಾಕ್ಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.
ಹೊಸಹಳ್ಳಿ, ವಿಜಯನಗರ, ಆರ್ಪಿಸಿ ಲೇಔಟ್, ರಾಜಾಜಿನಗರ, ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಕಾಮಾಕ್ಷಿಪಾಳ್ಯ, ಆರ್ಪಿಇ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಸರ್ವಿಸ್ ರಸ್ತೆ, ಈಸ್ಟ್ ಸ್ಟೇಜ್ ತಿಮ್ಮೇನಹಳ್ಳಿ, ಎಂಸಿ ಲೇಔಟ್, ಮಾರೇನಹಳ್ಳಿ, ವಿನಾಯಕ ಲೇಔಟ್, ಕೋರಮಂಗಲ, ರಮೇಶನಗರ, ವಿಭೂತಿಪುರ ಭಾಗದಲ್ಲಿಯೂ ಕರೆಂಟ್ ಇರೋದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರಿಗೆ ಹೊಂದಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಏರಿಯಾಗಳಲ್ಲೂ ಇಂದು ವಿದ್ಯುತ್ ಸಂಪರ್ಕ ಇರೋದಿಲ್ಲ. ಹೊಸಕೋಟೆ ಹಾಗೂ ದೇವನಹಳ್ಳಿ ತಾಲ್ಲೂಕುಗಳು, ವಿಜಯಪುರ ಹೋಬಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.
ನಾಗೇನಹಳ್ಳಿ, ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಹಾಡೋನಹಳ್ಳಿ, ಗಂಗಸಂದ್ರ, ಮಲ್ಲತ್ತಹಳ್ಳಿ, ಪೆರುಮಗೊಂಡನಹಳ್ಳಿ, ತಿರುಮಗೊಂಡನಹಳ್ಳಿ, ವಡ್ಡರಹಳ್ಳಿ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಅಡಚಣೆ ಉಂಟಾಗಲಿದೆ.
ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಹಲವು ಪ್ರದೇಶಗಳಲ್ಲೂ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇಲ್ಲಿನ ಗಂದರಗೋಳಿಪುರ, ಹೊನ್ನಾದೇವಿಪುರ, ಸಿಂಪಾಡಿಪುರ, ಹೊನ್ನಾವರ, ಹೊನ್ನಾವರ ಕಾಲೋನಿ, ಕಾರ್ಯಾಪುರ ಕಾಲೋನಿ, ಪುಟ್ಟೇನಹಳ್ಳಿ, ಇಸ್ತೂರು ಕಾಲೋನಿ, ಇಸ್ತೂರು, ಗೂಳ್ಯ, ತಿಮ್ಮಸಂದ್ರ, ಹಳ್ಳೇನಹಳ್ಳಿ, ಬಂಡಿಪಾಳ್ಯ, ಲಿಯೋನಹಳ್ಳಿ, ಅಂಬಲಗೆರೆ, ಗುತ್ತೇಪಾಳ್ಯ, ನಲ್ಲೇನಹಳ್ಳಿ, ಕಾರ್ಯಾಪುರ, ದೊಡ್ಡಬೆಳವಂಗಲ, ಚಿಕ್ಕವಡಗೆರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಲೈನ್ ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಹೆಚ್ಚಿನ ಮಾಹಿತಿ ಅಥವಾ ದೂರು ನೀಡಲು ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆ ಮಾಡುವಂತೆ ಬೆಸ್ಕಾಂ ತಿಳಿಸಿದೆ. ಈ ವಾರವಿಡೀ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಧಾರಾಕರ ಮಳೆಯಾಗುವ ಸಾಧ್ಯತೆ ಇದ್ದು, ಇಂದು ವಿದ್ಯುತ್ ಅಡಚಣೆಯು ಬೆಂಗಳೂರಿನ ಜನರಿಗೆ ದೊಡ್ಡ ತಲೆನೋವು ನೀಡಲಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.