ಹಬ್ಬಕ್ಕೆ ಮಾಡಿ ಈ ಸ್ಪೆಷಲ್ ರುಚಿಕರ ಪಾಯಸ..! ಕಡಿಮೆ ಸಮಯ..ಅದ್ಭುತ ರುಚಿ

Arun Kumar
0

ಹಬ್ಬವಿರಲಿ ಅಥವಾ ಮನೆಯಲ್ಲಿ ಸಣ್ಣ ಪುಟ್ಟ ಶುಭ ಕಾರ್ಯ, ಸಂತೋಷ ದಿನಕ್ಕೆ ಪಾಯಸ ಮಾಡುವುದು ಕಾಮನ್. ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ದಿಢೀರ್ ಆಗಿ ಪಾಯಸ ಮಾಡಬಹುದು. ಹೀಗಾಗಿ ಎಲ್ಲರ ಮನೆಯಲ್ಲಿ ತಿಂಗಳಿಗೆ ಒಮ್ಮೆಯಾದರು ಪಾಯಸ ಮಾಡುತ್ತಾರೆ. ಪಾಯಸದಲ್ಲಂತೂ ಹತ್ತಾರು ವಿಧಗಳಿವೆ. ಹಲವು ವಿಧಾನದ ಮೂಲಕ ಪಾಯಸ ಮಾಡಬಹುದಾಗಿದೆ.

ಎಲ್ಲಾ ಪಾಯಸಗಳು ಒಂದೇ ರೀತಿಯ ರುಚಿ ನೀಡುವುದಿಲ್ಲ. ಬದಲಿಗೆ ಒಂದೊಂದು ಪಾಯಸ ಒಂದೊಂದು ರೀತಿಯ ರುಚಿ ನೀಡುತ್ತವೆ. ಹೀಗಾಗಿ ಇದರಲ್ಲಿ ಉತ್ತಮ ರುಚಿ ಕಡಿಮೆ ಸಮಯದಲ್ಲಿ ಯಾವ ಪಾಯಸ ಮಾಡಬಹುದು ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದೇ ದೊಡ್ಡ ಸವಾಲಿನ ವಿಚಾರ. ಈಗಂತು ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಇನ್ನೇನು ಕೆಲವೇ ದಿನದಲ್ಲಿ ಗೌರಿ ಗಣೇಶನ ಹಬ್ಬವೂ ಬರುತ್ತಿದೆ.

ಹೀಗಾಗಿ ನಾವು ಗೌರಿ ಗಣೇಶನ ಹಬ್ಬದಂದು ವಿಶೇಷವಾಗಿ ರುಚಿ ನೀಡುವ ಈ ಪಾಯಸ ಮಾಡುವುದು ಹೇಗೆ ಎಂಬ ಕುರಿತು ತಿಳಿದುಕೊಳ್ಳೋಣ. ನಾವಿಂದು ಅವರೆ ಬೇಳೆಯಿಂದ ಮಾಡುವಂತಹ ಅದ್ಭುತ ರುಚಿಯ ಪಾಯಸದ ಬಗ್ಗೆ ತಿಳಿದುಕೊಳ್ಳೋಣ. ಈ ಅವರೆ ಬೇಳೆ ಪಾಯಸ ಮಾಡಲು ಬೇಕಾಗುವ ಪದಾರ್ಥಗಳೇನು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಅವರೆ ಬೇಳೆ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು

ಅವರೆ ಬೇಳೆ
ಹಸರು ಬೇಳೆ
ಬೆಲ್ಲ
ಏಲಕ್ಕಿ - 4
ಗಸೆಗಸೆ
ತೆಂಗಿನ ತುರಿ
ಗೋಡಂಬಿ ದ್ರಾಕ್ಷಿ
ತುಪ್ಪ
ಅವರೆ ಬೇಳೆ ಪಾಯಸ ಮಾಡುವ ವಿಧಾನ

ಮೊದಲು ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಇಟ್ಟು ಅದಕ್ಕೆ ಅವರೆ ಬೇಳೆ ಹಾಗೂ ಹೆಸರು ಬೇಳೆ ಹಾಕಿಕೊಂಡು ಇದರ ಜೊತೆಗೆ 1 ಕಪ್ ನೀರು ಹಾಕಿ ಮೂರು ಸೀಟಿ ಹೊಡೆಯಲು ಬಿಡಿ. ಮೂರು ಸೀಟಿ ಹೊಡೆದ ಬಳಿಕ ಕುಕ್ಕರ್ ಅನ್ನು ತಣ್ಣಗಾಗಲು ಇಡಿ. ಇನ್ನೊಂದು ಕಡೆ ಮತ್ತೊಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಬೆಲ್ಲ ಹಾಕಿ ಕರಗಲು ಬಿಡಿ.

ಬೆಲ್ಲ ಚೆನ್ನಾಗಿ ಕರಗಲು ಅರ್ಧ ಕಪ್ ನೀರು ಹಾಕಿ. ಬೆಲ್ಲ ಕರಗಿ ನೀರಾದರೆ ಸಾಕು. ನಂತರ ಇದನ್ನು ಬದಿಗಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ಗೆ ತೆಂಗಿನ ತುರಿ, ಗಸೆಗಸೆ, ಏಲಕ್ಕಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ತಣ್ಣಗಾದ ಕುಕ್ಕರ್ ಮುಚ್ಚಳ ತೆಗೆದು ಬೇಲೆ ಬೆಂದಿದಿಯೇ ನೋಡಿಕೊಳ್ಳಿ. ನಂತರ ಇದನ್ನು ಸ್ಮ್ಯಾಶ್ ಮಾಡಬೇಕು. ಸ್ವಲ್ಪ ಮಸೆದುಕೊಳ್ಳಿ.

ಈಗ ಮಿಕ್ಸಿ ಜಾರ್ನಲ್ಲಿ ರುಬ್ಬಿದ ಅಂಶವನ್ನು ಈ ಕುಕ್ಕರ್ಗೆ ಹಾಕಿ, ನಂತರ ಬೆಲ್ಲದ ನೀರನ್ನು ಸಹ ಕುಕ್ಕರ್ಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಎಲ್ಲಾ ಮಿಕ್ಸ್ ಆದ ಬಳಿಕ ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕುದಿಸಿ. ನಂತರ ಕೊನೆಯದಾಗಿ ಇದಕ್ಕೆ ಗೋಡಂಬಿ, ದ್ರಾಕ್ಷಿ ಹಾಕಿ. ಒಂದು ಸಣ್ಣ ಪಾತ್ರೆಯಲ್ಲಿ ತುಪ್ಪ ಹಾಕಿ ಅದಕ್ಕೆ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಫ್ರೈ ಮಾಡಿ ನಂತರ ಅದನ್ನು ಪಾಯಸಕ್ಕೆ ಹಾಕಿ ಚೆನ್ನಾಗಿ ಒಂದು ಸುತ್ತು ಮಿಕ್ಸ್ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ಅವರೆ ಬೇಳೆ ಪಾಯಸ ರೆಡಿಯಾಗುತ್ತದೆ. ಇದು ಮಾಡಲು ಸಹ ಬಹಳ ಸುಲಭ ರುಚಿಯಲ್ಲಿ ಎತ್ತಿದ ಕೈ. ನೀವು ಸಹ ಹಬ್ಬದ ಸಮಯದಲ್ಲಿ ಇದನ್ನು ಟ್ರೈ ಮಾಡಿ ನೋಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)