ಹಬ್ಬದ ದಿನವೇ ದುರಂತ: ಮೂವರ ಪ್ರಾಣ ತೆಗೆದ ಟಿಪ್ಪರ್‌ ಮೇಲಿತ್ತು ʼಕೈದಿ ನಂ-6106ʼ

Arun Kumar
0

ಇಡೀ ರಾಜ್ಯವೇ ಇಂದು ಗೌರಿ ಹಬ್ಬದ ಸಂಭ್ರಮದಲ್ಲಿದೆ. ಆದರೆ, ಹಬ್ಬದ ದಿನವೇ ರಾಮನಗರದಲ್ಲಿ ಘೋರ ದುರಂತವೇ ನಡೆದು ಹೋಗಿದೆ. ಕೆಲಸಕ್ಕಾಗಿ ಹೊರ ಬಂದಿದ್ದ ಮೂವರು ಕಾರ್ಮಿಕರು ಮಸಣ ಸೇರಿದ್ದಾರೆ. ಇವರು ಬೈಕ್ನಲ್ಲಿ ತೆರಳುತ್ತಿದ್ದಾಗ ಟಿಪ್ಪರ್ ಲಾರಿಯೊಂದು ವೇಗವಾಗಿ ಬಂದು ಗುದ್ದಿದ ಪರಿಣಾಮ ಮೂವರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.

ಹೌದು, ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿಯ ಬಳಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಸರ್ವೀಸ್ ರಸ್ತೆಯ ಪೆಟ್ರೋಲ್ ಬಂಕ್ ಎದುರು ಈ ದುರ್ಘಟನೆ ನಡೆದಿದೆ. ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಬೈಕ್ನಲ್ಲಿದ್ದ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡಿದ್ದ ಗುರುಮೂರ್ತಿ, ಶೇಕ್ ಅಫೀಸ್, ವೆಂಕಟೇಶ್ ಮೃತಪಟ್ಟವರು. ಕೆಲಸಕ್ಕಾಗಿ ಒಂದೇ ಬೈಕ್ನಲ್ಲಿ ತೆರಳುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ ರಾಮನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟಿಪ್ಪರ್ ಚಾಲಕ ದರ್ಶನ್ ಫ್ಯಾನ್?: ಈ ಅಪಘಾತಕ್ಕೆ ಕಾರಣವಾಗಿರುವ ಟಿಪ್ಪರ್ ಲಾರಿ ಹಿಂದೆ ಬರೆಯಲಾಗಿದ್ದ ಬರಹಗಳ ಬಗ್ಗೆ ಮಾತುಕತೆ ಜೋರಾಗಿದೆ. ಇನ್ನು ಈ ಟಿಪ್ಪರ್ ಚಾಲಕ ನಟ ದರ್ಶನ್ ಫ್ಯಾನ್ ಎನ್ನಲಾಗಿದೆ. ಟಿಪ್ಪರ್ನ ಹಿಂದೆ ನಟ ದರ್ಶನ್ಗೆ ನೀಡಲಾಗಿದ್ದ ʼಕೈದಿ ನಂಬರ್-6106ʼ ಹಾಗೂ ʼಆರೋಪಿ ಅಷ್ಟೇ...ಅಪರಾಧಿ ಅಲ್ಲʼ ಎನ್ನುವ ಸ್ಟಿಕ್ಕರ್ ಅಂಟಿಸಲಾಗಿದೆ.

ಈ ಅಪಘಾತದ ಬೆನ್ನಲ್ಲೇ ಈ ಬರಹಗಳ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಮೂವರ ಪ್ರಾಣ ತೆಗೆದಿರುವ ವಿಚಾರವಾಗಿ ʼಯಥಾ ರಾಜ ತಥಾ ಶಿಷ್ಯʼ ಎಂದೂ ದರ್ಶನ್ ಅಭಿಮಾನಿಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ಗೆ ವಿಚಾರಣಾಧೀನ ಕೈದಿ ನಂಬರ್ 6106 ಎಂದು ನೀಡಲಾಗಿತ್ತು.

ಬಳಿಕ ದರ್ಶನ್ ಅಭಿಮಾನಿಗಳು ಈ ನಂಬರ್ ಅನ್ನು ಟ್ರೆಂಡ್ ಮಾಡಿದ್ದರು. ಕೈ ಮೇಲೆ, ಮೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು. ತಮ್ಮ ವಾಹನಗಳ ಮೇಲೂ ಇದೇ ನಂಬರ್ ಸ್ಟಿಕ್ಕರ್ ಹಾಕಿಸಿ, ಮೆರೆಯುತ್ತಿದ್ದರು. ಈ ಬಗ್ಗೆ ಆರ್ಟಿಒ ಅಧಿಕಾರಿಗಳು ಕೂಡ ವಾರ್ನ್ ಮಾಡಿದ್ದರು. ಇನ್ನು ಮುಂದೆ ದರ್ಶನ್ ಅಭಿಮಾನಿಗಳು ಕೈದಿ ನಂ-6106 ಅಥವಾ ದರ್ಶನ್ ಫೋಟೋ ತಮ್ಮ ವಾಹನಗಳ ಮೇಲೆ ಹಾಕಿಕೊಳ್ಳುವಂತಿಲ್ಲ. ಇದು ಕಾನೂನು ಬಾಹಿರ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಬಳಿಕ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ನಂತರ ಕೈದಿ ನಂಬರ್ ಕೂಡ ಚೇಂಜ್ ಆಗಿತ್ತು.

ಇನ್ನು ಈ ಹಬ್ಬದ ದಿನದಂದೇ ರಾಜ್ಯದ ಹಲವೆಡೆ ಭೀಕರ ಅಪಘಾತಗಳು ಸಂಭವಿಸಿದ್ದು, ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ವಿಜಯಪುರ, ಬಾಗಲಕೋಟೆ, ರಾಮನಗರ, ಮಂಗಳೂರು ಸೇರಿದಂತೆ ವಿವಿಧೆಡೆ ರಸ್ತೆ ಅಪಘಾತಗಳು ಸಂಭವಿಸಿವೆ. ಈ ಹಬ್ಬವು ಹಲವರ ಪಾಲಿಗೆ ಕರಾಳ ದಿನವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)