Bommasandra-Hosur Metro Project | ಹೊಸೂರಿಗೆ ಮೆಟ್ರೋ ವಿಸ್ತರಣೆ: ಬೆಂಗಳೂರನ್ನೂ ತಮಿಳುನಾಡಿಗೇ ಸೇರಿಸಿ ಬಿಡಿ ಅಂತಿದ್ದಾರೆ ಕನ್

Arun Kumar
0

ಬೆಂಗಳೂರಿನಿಂದ (ಬೊಮ್ಮಸಂದ್ರದ ಮೆಟ್ರೋ ನಿಲ್ದಾಣ) ಹೊಸೂರಿಗೆ ಮೆಟ್ರೋ ವಿಸ್ತರಣೆ ಮಾಡಬೇಕು ಎನ್ನುವ ತಮಿಳುನಾಡಿನ ಪ್ರಸ್ತಾವನೆಗೆ ಕನ್ನಡಿಗರು ಕೆಂಡಾಮಂಡಲರಾಗಿದ್ದಾರೆ. ತಮಿಳುನಾಡಿನ ಹೊಸೂರಿಗೆ ಯಾವುದೇ ಕಾರಣಕ್ಕೂ ಮೆಟ್ರೋ ವಿಸ್ತರಣೆ ಮಾಡಬಾರದು. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗಲಿದೆ ಎನ್ನುವ ವಾದ ಕೇಳಿಬರುತ್ತಿದೆ. ಮೆಟ್ರೋ ಯಾಕೆ ವಿಸ್ತರಣೆ ಮಾಡ್ತೀರ ಬೆಂಗಳೂರನ್ನೂ ತಮಿಳುನಾಡಿಗೇ ಸೇರಿಸಿಬಿಡಿ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದು ಇನ್ನೊಂದು ಕಾವೇರಿ ಕಥೆ ಆಗಲಿದೆ
ತಮಿಳುನಾಡಿನ ಹೊಸೂರಿಗೆ ಮೆಟ್ರೋ ವಿಸ್ತರಣೆ ಮಾಡುವುದು ಮತ್ತೊಂದು ಕಾವೇರಿ ಕಥೆ ಆಗಲಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಾವೇರಿ ಕಥೆ ಎಂದರೆ, ಕೆಆರ್ ಎಸ್ ಡ್ಯಾಂ ನಮ್ಮ ರಾಜ್ಯದಲ್ಲಿದೆ. ಆದರೆ, ನೀರು ತಮಿಳುನಾಡಿಗೆ ಪೂರೈಕೆ ಆಗುತ್ತಿದೆ. ಮುಂದೆ ತಮಿಳುನಾಡಿನ ಹೊಸೂರಿಗೆ ಮೆಟ್ರೋ ರೈಲು ವಿಸ್ತರಣೆಯಾದರೂ ಇದೇ ಆಗಲಿದೆ. ಇದು ಇನ್ನೊಂದು ಕಾವೇರಿ ಕಥೆ ಅಷ್ಟೇ. Krs ನಮ್ದು ಉಪಯೋಗ ಮಾತ್ರ ತಮಿಳು ನಾಡಿನವರದು. ಅದೇ ರೀತಿ ಮೆಟ್ರೋ ನಮ್ದು. ಲಾಭ ಎಲ್ಲ ತಮಿಳುನಾಡಿಗೆ ಎನ್ನುವಂತಾಗಲಿದೆ ಎಂದು ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮಿಳರಿಗಷ್ಟೇ ಅನುಕೂಲ
ತಮಿಳುನಾಡಿನ ಹೊಸೂರಿಗೆ ಮೆಟ್ರೋ ವಿಸ್ತರಣೆ ಮಾಡುವುದರಿಂದ ತಮಿಳುನಾಡಿನವರಿಗಷ್ಟೇ ಅನುಕೂಲ ಆಗಲಿದೆ. ಇದರಿಂದ ಖಂಡಿತವಾಗಿಯೂ ಕನ್ನಡಿಗರಿಗೆ ಅನುಕೂಲ ಆಗಲ್ಲ. ತಮಿಳುಗರಿಗೆ ಮಾತ್ರ ಅನುಕೂಲ. ಮೊದಲು ರಾಜ್ಯ ಸರ್ಕಾರ ಇದರ ಬಗ್ಗೆ ಗಮನ ಕೊಡಬೇಕು. ಈಗಾಗಲೇ ತಮಿಳುಗರ ಸಂಖ್ಯೆ ಬೆಂಗಳೂರಿನಲ್ಲಿ 40% ಇದೇ ಇನ್ನೇನು ಮೆಟ್ರೋ ಆದ ಮೇಲೆ ಕನ್ನಡಿಗರ ಕೆಲಸ ಗೋತಾ ಅಷ್ಟೇ ಎನ್ನುತ್ತಿದ್ದಾರೆ ಬೆಂಗಳೂರಿಗರು.

ತಮಿಳುನಾಡಿನ ಹೊಸೂರಿಗೆ ಮೆಟ್ರೋ ವಿಸ್ತರಣೆ ಮಾಡುವುದಕ್ಕಿಂತಲೂ ಕರ್ನಾಟಕದ ಇತರ ಭಾಗಗಳಿಗೆ ಮೆಟ್ರೋ ವಿಸ್ತರಣೆ ಮಾಡಿದರೆ ಕನ್ನಡಿಗರಿಗೆ ಅನುಕೂಲ ಆಗಲಿದೆ. ಬೆಂಗಳೂರಿಗೆ ದುಡಿಯಲು ಉತ್ತರ ಕರ್ನಾಟಕದವರೇ ಬರುವುದು ಹೆಚ್ಚು. ವಾರದ ರಜಾದಿನಕ್ಕೆ ಊರಿಗೆ ಹೋಗಿ ಬರುವುದಕ್ಕೆ ತುಮಕೂರು ಬೆಂಗಳೂರ್ ರೋಡ್ ಯಾವಾಗಲೂ ಟ್ರಾಫಿಕ್ ಚಾಮ್ ಮೊದಲು ತುಮಕೂರುವರಿಗೆ ಮೆಟ್ರೋ ಮಾಡಿದರೆ ಅನುಕೂಲ ಆಗಲಿದೆ ಎನ್ನುವ ವಾದವೂ ಕೇಳಿ ಬಂದಿದೆ.

ಹೊಸೂರಿನ ಬದಲು ಮೈಸೂರಿಗೆ, ತುಮಕೂರಿಗೆ ಮೆಟ್ರೋ ವಿಸ್ತರಿಸಬೇಕು ಇದರಿಂದ ನಮ್ಮ ಜನರಿಗೆ ಅನುಕೂಲ ಆಗಲಿದೆ. ಈ ಭಾಗ ದಿಂದಲೂ ಜನ ಬೆಂಗಳೂರಿಗೆ ದುಡಿಯಲು ಬರುತ್ತಾರೆ. ಮೊದಲು ನಮ್ಮ ಊರನ್ನು ಅಭಿವೃದ್ಧಿ ಮಾಡಿಕೊಳ್ಳಬೇಕು. ಆ ಮೇಲೆ ಮುಂದಿನದ್ದು ಚಿಂತಿಸಬೇಕು ಎನ್ನುತ್ತಿದ್ದಾರೆ. ಇದಕ್ಕೆ ಕೆಲವರು ಹೊಸೂರಿನಲ್ಲೂ ಕನ್ನಡಿಗರು ಕೆಲಸ ಮಾಡ್ತಾ ಇದ್ದಾರೆ. ತಮಿಳುನಾಡು - ಕರ್ನಾಟಕ ಸರ್ಕಾರ ಕುಳಿತು ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಎರಡೂ ರಾಜ್ಯದ ಜರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಅಭಿಪ್ರಾಯವೂ ಕೇಳಿ ಬಂದಿದೆ.

ಟಾಟಾ ಕಂಪನಿಯವರು ಹೊಸೂರಿನಲ್ಲಿ ಕೆಲವು ಕಂಪನಿ ತೆರೆಯುವ ಸಾಧ್ಯತೆ ಇದೆ. ಇದರಿಂದ ಸಾಕಷ್ಟು ಜನರಿಗೆ ನೌಕರಿ ಸಿಗುವ ಸಾಧ್ಯತೆ ಇರುತ್ತದೆ. ಈಗಾಗಲೇ ಬಹಳಷ್ಟು ಕನ್ನಡಿಗರು ಹೊಸೂರಿನಲ್ಲಿ ನೆಲೆಸಿದ್ದಾರೆ. ಹೀಗಾಗಿ, ಹೊಸೂರಿಗೂ ಮೆಟ್ರೋ ವಿಸ್ತರಣೆ ಮಾಡುವುದರಲ್ಲಿ ತಪ್ಪೇನು ಇಲ್ಲ. ಹೊಸೂರಿಗೂ ಮೆಟ್ರೋ ವಿಸ್ತರಣೆಯಾಗಲಿ ಎಂದು ಕೆಲವರು ಹೇಳಿದ್ದಾರೆ.

ಕರ್ನಾಟಕದ ಕೈಗಾರಿಕ ಪ್ರದೇಶಕ್ಕೆ ಸಮಸ್ಯೆ
ತಮಿಳುನಾಡಿನ ಹೊಸೂರಿಗೆ ಮೆಟ್ರೋ ವಿಸ್ತರಿಸಿದರೆ, ಕರ್ನಾಟಕದ ಕೈಗಾರಿಕಾ ಪ್ರದೇಶಕ್ಕೆ ಸಮಸ್ಯೆ ಆಗಲಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.ಒಂದೊಮ್ಮೆ ಹೊಸೂರಿಗೂ ಮೆಟ್ರೋ ವಿಸ್ತರಣೆಯಾದರೆ, ಬೊಮ್ಮಸಂದ್ರ, ಅತ್ತಿಬೆಲೆ, ಜಿಗಣಿ, ವೀರಸಂದ್ರ ಪ್ರದೇಶಗಳಲ್ಲಿನ ಕೈಗಾರಿಕಾ ಪ್ರದೇಶಗಳಿಗೆ ದೂಡ್ಡ ಹೊಡೆತ ಬಿದ್ದು, ತಮಿಳುನಾಡಿನ ಹೊಸೂರು ಕೈಗಾರಿಕ ಪ್ರದೇಶ ಅಭಿವೃದ್ಧಿ ಆಗುತ್ತದೆ ಅಷ್ಟೇ ಎಚ್ಚರವಾಗಿರಬೇಕು ಎಂದು ಕೆಲವರು ಹೇಳುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)